5 ಕೇಜಿ ಅಕ್ಕಿ ಬದಲು ಇಂದಿರಾ ಕಿಟ್‌ : ಏನೇನು ಇರಲಿದೆ ?

Published : Mar 07, 2026, 09:41 AM IST
Karnataka Indira kit Food Packet

ಸಾರಾಂಶ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಕಳೆದ ಬಾರಿ ₹8,275 ಕೋಟಿಗಳನ್ನು ಒದಗಿಸಿದ್ದ ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ಅನುದಾನವನ್ನು ₹7,945 ಕೋಟಿಗಳಿಗೆ ಸೀಮಿತಗೊಳಿಸಿದೆ.5 ಕೇಜಿ ಅಕ್ಕಿಯ ಬದಲಿಗೆ ಇಂದಿರಾ ಕಿಟ್‌ ವಿತರಿಸಲು ₹6,200 ಕೋಟಿಗಳನ್ನು ಮೀಸಲಿಟ್ಟಿದೆ

 ಬೆಂಗಳೂರು :  ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಕಳೆದ ಬಾರಿ ₹8,275 ಕೋಟಿಗಳನ್ನು ಒದಗಿಸಿದ್ದ ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ಅನುದಾನವನ್ನು ₹7,945 ಕೋಟಿಗಳಿಗೆ ಸೀಮಿತಗೊಳಿಸಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ನೀಡುತ್ತಿದ್ದ 5 ಕೇಜಿ ಅಕ್ಕಿಯ ಬದಲಿಗೆ ಇಂದಿರಾ ಕಿಟ್‌ ವಿತರಿಸಲು ₹6,200 ಕೋಟಿಗಳನ್ನು ಮೀಸಲಿಟ್ಟಿದೆ. ಇಂದಿರಾ ಕಿಟ್‌ನಲ್ಲಿ ಐದು ಕೆ.ಜಿ. ಅಕ್ಕಿಯ ಬದಲಾಗಿ ತೊಗರಿಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆ ಇರಲಿದೆ. ರಾಜ್ಯದ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಇಂದಿರಾ ಕಿಟ್‌ ಪಡೆಯಲಿದ್ದಾರೆ.

ಎಫ್‌ಐಎಸ್‌ಟಿ ಅಪ್ಲಿಕೇಷನ್ ಮೂಲಕ ಲಾಭಾಂಶದ ನೇರ ಪಾವತಿಗೆ ಒತ್ತು

ಆಹಾರ ಧಾನ್ಯಗಳ ವಿತರಣೆಗಾಗಿ ನೀಡಲಾಗುವ ಚಿಲ್ಲರೆ ಹಾಗೂ ಸಗಟು ಲಾಭಾಂಶದ ಪಾವತಿಯಲ್ಲಿ ವಿಳಂಬವನ್ನು ನಿವಾರಿಸಲು ಎಫ್‌ಐಎಸ್‌ಟಿ ಅಪ್ಲಿಕೇಷನ್ ಮೂಲಕ ಲಾಭಾಂಶದ ನೇರ ಪಾವತಿಗೆ ಒತ್ತು ನೀಡಲಾಗಿದೆ. ಇಲಾಖೆಯಲ್ಲಿನ ಸಮಸ್ಯೆ ಹಾಗೂ ಗ್ರಾಹಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲು ಪ್ರಸ್ತುತ ಜಾರಿಯಲ್ಲಿರುವ ಇಲಾಖೆಯ ಸಹಾಯವಾಣಿಯನ್ನು (1967) ಎಐ ತಂತ್ರಜ್ಞಾನ ಆಧಾರಿತ ‘ಸ್ಮಾರ್ಟ್ ಅನ್ನವಾಣಿ’ಯನ್ನಾಗಿ ಪರಿವರ್ತಿಸಲಾಗುವುದು. ಸ್ವಯಂ ಚಾಲಿತ ದೂರು ಕೇಂದ್ರ, ಧ್ವನಿ ಚಾಟ್‌ಬಾಟ್ ಮತ್ತು ಲೈವ್ ಕರೆ ವರ್ಗಾವಣೆ ವ್ಯವಸ್ಥೆಗಳನ್ನು ಒಳಗೊಂಡ ಎಐ ಆಧಾರಿತ ‘ಸ್ಮಾರ್ಟ್ ಅನ್ನವಾಣಿ’ಯನ್ನು ಪರಿಚಯಿಸುವುದಾಗಿ ಪ್ರಕಟಿಸಲಾಗಿದೆ.

ಆಹಾರ ಭದ್ರತೆ ಒದಗಿಸಲು ಕ್ರಮ

ದಾಸೋಹ ಯೋಜನೆಯಡಿ 34 ಹೊಸ ಕಲ್ಯಾಣ ಸಂಸ್ಥೆಗಳಲ್ಲಿ ಇರುವ 6701 ಫಲಾನುಭವಿಗಳಿಗೆ ಆಹಾರ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ದಾಸೋಹ ಯೋಜನೆಯಡಿ ಈಗಾಗಲೇ ರಾಜ್ಯಾದ್ಯಂತ 274 ಕಲ್ಯಾಣ ಸಂಸ್ಥೆಗಳ 32057 ಫಲಾನುಭವಿಗಳಿಗೆ ₹14 ಕೋಟಿ ವೆಚ್ಚದಲ್ಲಿ ಆಹಾರ ಭದ್ರತೆಯನ್ನು ಒದಗಿಸಲಾಗುತಿದೆ. ಅದರ ಜತೆಗೆ ಇದೀಗ ಹೊಸದಾಗಿ 34 ಸಂಸ್ಥೆಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಘೋಷಿಸಲಾಗಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ನಮ್ಮ ಮನೆ ಸ್ಕೀಂನಲ್ಲಿ 50000 ಸೈಟ್‌ ಹಂಚಿಕೆ
ಸಶಕ್ತ, ಸುಸ್ಥಿರ ಅಭಿವೃದ್ಧಿಗೆ ಕರ್ನಾಟಕದ ಹೊಸ ಮಾದರಿ - 11G ಇದು ಸಿದ್ದರಾಮ್‌G ಬಜೆಟ್‌!