ಸಶಕ್ತ, ಸುಸ್ಥಿರ ಅಭಿವೃದ್ಧಿಗೆ ಕರ್ನಾಟಕದ ಹೊಸ ಮಾದರಿ - 11G ಇದು ಸಿದ್ದರಾಮ್‌G ಬಜೆಟ್‌!

Published : Mar 07, 2026, 08:06 AM IST
CM Siddaramaiah

ಸಾರಾಂಶ

ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 17ನೇ ಬಜೆಟ್‌ ಮಂಡನೆ ಮಾಡಿದರು. ಚುನಾವಣೆ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಜಾರಿ ಮಾಡಿ, ಅದರಿಂದ ಆರ್ಥಿಕ ಹೊರೆಯಾಗುತ್ತಿದ್ದರೂ ಅದರ ನಡುವೆಯೂ ಅಭಿವೃದ್ಧಿಯ ಸಮತೋಲನಕ್ಕೆ ಯತ್ನ

ಬಜೆಟ್‌ 2026

- ಗ್ಯಾರಂಟಿ ಸ್ಕೀಂಗಳ ಹೊರೆ ನಡುವೆಯೂ ಅಭಿವೃದ್ಧಿಯ ಬ್ಯಾಲೆನ್ಸ್‌ಗೆ ಭರ್ಜರಿ ಕಸರತ್ತು

- ಅಹಿಂದ, ಶಿಕ್ಷಣ, ಕೃಷಿ, ಕೈಗಾರಿಕೆ, ಆರೋಗ್ಯಕ್ಕೆ ಕೊಂಚ ಒತ್ತು । ಕೇಂದ್ರ ವಿರುದ್ಧ ಸಿಟ್ಟು

ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 17ನೇ ಬಜೆಟ್‌ ಮಂಡನೆ ಮಾಡಿದರು. ಚುನಾವಣೆ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಜಾರಿ ಮಾಡಿ, ಅದರಿಂದ ಆರ್ಥಿಕ ಹೊರೆಯಾಗುತ್ತಿದ್ದರೂ ಅದರ ನಡುವೆಯೂ ಅಭಿವೃದ್ಧಿಯ ಸಮತೋಲನಕ್ಕೆ ಯತ್ನಿಸಿರುವುದು ಈ ಆಯವ್ಯಯದಲ್ಲಿ ಎದ್ದು ಕಾಣುತ್ತದೆ. ಅಹಿಂದ, ಕೃಷಿ, ಶಿಕ್ಷಣ, ಕೈಗಾರಿಕೆ, ಆರೋಗ್ಯ ಮತ್ತಿತರೆ ಕ್ಷೇತ್ರಗಳತ್ತ ಸಿಎಂ ಗಮನಹರಿಸಿದ್ದಾರೆ. ಕೇಂದ್ರದಿಂದ ನಿರೀಕ್ಷಿತ ಅನುದಾನ ಬರುತ್ತಿಲ್ಲ ಎಂದು ಬಜೆಟ್‌ನಲ್ಲಿ ಗುಡುಗಿದ್ದಾರೆ. ಇದರ ನಡುವೆಯೇ, ದೇಶಕ್ಕೆ ಕರ್ನಾಟಕದ 11ಜಿ ಮಾದರಿಯೊಂದನ್ನು ಬಜೆಟ್ ಮೂಲಕ ತೆರೆದಿಟ್ಟಿದ್ದಾರೆ.

ಕರ್ನಾಟಕದ 11ಜಿ ಮಾದರಿ ಆರ್ಥಿಕತೆ

1. ಗ್ಯಾರಂಟಿ ಎಕಾನಮಿ- ಕಲ್ಯಾಣ ಹಾಗೂ ಲಿಂಗ ಸಮಾನತೆಯ ಹಾದಿಯತ್ತ ಕರ್ನಾಟಕ ।

2. ಗುಡ್‌ ಪಬ್ಲಿಕ್ ಎಜುಕೇಷನ್‌- ಸರ್ವರ ಏಳಿಗೆ ಬಯಸುವ ಸಮರ್ಥ ಸಾರ್ವಜನಿಕ ಶಿಕ್ಷಣ

3. ಗುಡ್‌ ಹೆಲ್ತ್‌ ಟು ಆಲ್‌ - ಸಮಗ್ರ ಆರೋಗ್ಯ ಹಾಗೂ ಸದೃಢ ಕರ್ನಾಟಕ

4. ಗ್ರಾಸ್‌ ರೂಟ್‌ ಎಕಾನಮಿ - ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳು

5. ಗುಡ್ ಗವರ್ನೆನ್ಸ್‌ - ಜನಸ್ನೇಹಿ ಆಡಳಿತ

6. ಗಿಗ್‌ ಎಕಾನಮಿ- ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳು

7. ಜಿಯೋಗ್ರಾಫಿಕಲ್‌ ಈಕ್ವಾಲಿಟಿ- ಪ್ರಾದೇಶಿಕ ಅಸಮಾನತೆಯ ನಿವಾರಣೆ

8. ಗ್ಲೋಬಲ್‌ ಟ್ರೇಡ್‌ ಎಕಾನಮಿ ಅಥವಾ ವ್ಯಾಪಾರ ಮತ್ತು ಕೈಗಾರಿಕಾ ಅಭಿವೃದ್ಧಿ

9. ಗ್ಲೋಬ್‌ ಟ್ರೋಟಿಂಗ್‌ ಎಕಾನಮಿ- ಪ್ರವಾಸೋದ್ಯಮ ಆರ್ಥಿಕತೆ

10. ಗ್ರೀನ್‌ ಎಕಾನಮಿ- ನವೀಕರಿಸಬಹುದಾದ ಇಂಧನ ಸೇರಿದಂತೆ ಪರಿಸರ ಪೂರಕ ಆರ್ಥಿಕ ಚಟುವಟಿಕೆಗಳು

11. ಗ್ರೋಯಿಂಗ್‌ ಅರ್ಬನ್‌ ಎಕಾನಮಿ- ನಗರ ಕೇಂದ್ರಿತ ಸುಸ್ಥಿರ ಆರ್ಥಿಕತೆ

16ರೊಳಗಿನ ಮಕ್ಕಳಿಗೆ ಫೇಸ್‌ಬುಕ್‌, ಇನ್‌ಸ್ಟಾ, ವಾಟ್ಸಾಪ್‌ ನಿಷೇಧ

- ಮೊಬೈಲ್‌ ಬಳಸಲು ಅನುಮತಿ

16 ವರ್ಷದೊಳಗಿನ ಮಕ್ಕಳಿಗೆ ಆಸ್ಟ್ರೇಲಿಯಾ ಮಾದರಿಯಲ್ಲಿ ಸಾಮಾಜಿಕ ಜಾಲತಾಣ ಬಳಕೆ ನಿಷೇಧ. ಹೆಚ್ಚುತ್ತಿರುವ ಮೊಬೈಲ್‌ ಬಳಕೆಯಿಂದ ಮಕ್ಕಳ ಮೇಲಾಗುವ ಅಡ್ಡ ಪರಿಣಾಮ ತಡೆಗಟ್ಟುವ ಉದ್ದೇಶ. ಆದರೆ ಮೊಬೈಲ್‌ ಬಳಕೆಗೆ ಅಲ್ಲ. ಜಾಲತಾಣಕ್ಕಷ್ಟೇ ನಿರ್ಬಂಧ ಎಂದು ಬಜೆಟ್‌ ಬಳಿಕ ಸ್ಪಷ್ಟನೆ.

ಬರಲಿದೆ ರೈತ ಮಾಲ್‌ : ಕೋಲಾರದಲ್ಲಿ ಆರಂಭ

ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಒಂದೇ ಸೂರಿನಡಿ ಒದಗಿಸಲು ‘ರೈತ ಮಾಲ್‌’. ಕೋಲಾರ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಎಂಎಸ್‌ಐಎಲ್‌ ಮೂಲಕ ಪ್ರಾಯೋಗಿಕವಾಗಿ ಆರಂಭ.

ಶಾಲಾ- ಕಾಲೇಜಲ್ಲಿ ಡ್ರಗ್ಸ್‌ಗೆ ಕಡಿವಾಣ

ಶಾಲಾ- ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಾದಕ ವಸ್ತುಗಳ ಬಳಕೆ ತಡೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ, ಜಾಗೃತಿ ಕಾರ್ಯಕ್ರಮ. ಜತೆಗೆ ಕಠಿಣ ನಿಯಮ, ಸಹಾಯ ಕೇಂದ್ರಗಳ ಮೂಲಕ ಮಾದಕ ವಸ್ತುಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧ.

ಮಹಿಳಾ ಬೋಧಕರಿಗೆ 90 ದಿನ ಮಾತೃತ್ವ ರಜೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್‌ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿನ ಮಹಿಳಾ ಉಪನ್ಯಾಸಕರಿಗೆ ಮಾತೃತ್ವ ರಜೆ. 90 ದಿನಗಳ ರಜಾ ಸೌಲಭ್ಯ. ಮುಂದಿನ ಶೈಕ್ಷಣಿಕ ಸಾಲಿನಿಂದಲೇ ಜಾರಿ.

ವಿವಿಗಳಲ್ಲಿ ಸಾಮಾಜಿಕ ದೌರ್ಜನ್ಯ ತಡೆಯಲು ವೇಮುಲ ಕಾಯ್ದೆ ಜಾರಿ

ಸರ್ಕಾರಿ, ಖಾಸಗಿ, ಡೀಮ್ಡ್‌ ವಿವಿಗಳಲ್ಲಿ ಜಾತಿ ಆಧಾರದ ಮೇಲೆ ವಿದ್ಯಾರ್ಥಿಗಳ ಮೇಲೆ ನಡೆಯುವ ಶೈಕ್ಷಣಿಕ, ಸಾಮಾಜಿಕ ದೌರ್ಜನ್ಯಕ್ಕೆ ಕಡಿವಾಣ. ಇದಕ್ಕಾಗಿ ರೋಹಿತ್‌ ವೇಮುಲ ಕಾಯ್ದೆ ಜಾರಿ

ಕಾಲೇಜು, ವಿವಿಗಳಲ್ಲಿ ವಿದ್ಯಾರ್ಥಿ ಚುನಾವಣೆ

ವಿದ್ಯಾರ್ಥಿ ನಾಯಕತ್ವ, ಹೊಣೆಗಾರಿಕೆ ಹಾಗೂ ಪ್ರಜಾಪ್ರಭುತ್ವ ಮೌಲ್ಯ ಬೆಳೆಸಲು ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ.

ರೈತ ಕರೆ ಕೇಂದ್ರ ಎಐ ಬಳಸಿ ಹೈಟೆಕ್‌

ಎಐ ತಂತ್ರಜ್ಞಾನ ಬಳಸಿ ಕೃಷಿ ಇಲಾಖೆಯ ‘ರೈತ ಕರೆ ಕೇಂದ್ರ’ ಉನ್ನತೀಕರಣ. ಒಂದೇ ಸೂರಿನಡಿ ಹವಾಮಾನ, ಮಾರುಕಟ್ಟೆ, ಕೃಷಿ ತಾಂತ್ರಿಕತೆ ಹಾಗೂ ಇಲಾಖಾ ಮಾಹಿತಿ ರೈತರಿಗೆ ತ್ವರಿತವಾಗಿ ಲಭ್ಯತೆ

ಜಾನುವಾರುಗಳಿಗೂ ಸಿ.ಟಿ. ಸ್ಕ್ಯಾನ್‌ ಕೇಂದ್ರ

ಪಶು ರೋಗಗಳನ್ನು ನಿಖರವಾಗಿ ಪತ್ತೆ ಹಚ್ಚಲು ರಾಜ್ಯದ ಎರಡು ಕಡೆ ಇದೇ ಮೊದಲ ಬಾರಿಗೆ ಸಿ.ಟಿ. ಸ್ಕ್ಯಾನಿಕ್‌ ಕೇಂದ್ರ ಆರಂಭ. ಬೆಂಗಳೂರು ಹಾಗೂ ಬೀದರ್‌ನ ಪಶು ವೈದ್ಯಕೀಯ ಮಹಾವಿದ್ಯಾಲಯದ ಪಶು ಆಸ್ಪತ್ರೆಗಳಲ್ಲಿ ಸ್ಥಾಪನೆ.

ಬಾಲ ಮಧುಮೇಹಿಗಳಿಗೆ ಇನ್ಸುಲಿನ್‌ ಪೆನ್‌ ಉಚಿತ

ಟೈಪ್‌-1 ಮಧುಮೇಹದಿಂದ ಬಳಲುತ್ತಿರುವ 18 ವರ್ಷದೊಳಗಿನ ಮಕ್ಕಳಿಗೆ ಸರ್ಕಾರ ನೆರವು. ಮಕ್ಕಳ ಆರೋಗ್ಯ ಸುಧಾರಣೆಗಾಗಿ ಉಚಿತವಾಗಿ ಇನ್ಸುಲಿನ್‌ ಪೆನ್‌ಗಳ ವಿತರಣೆ.

ಗಂಭೀರ ರೋಗಿಗಳಿಗೆ ಕೇರಳ ಮಾದರಿಯಲ್ಲಿ ಮನೆಯಲ್ಲೇ ಆರೈಕೆ

ಗಂಭೀರ, ದೀರ್ಘಕಾಲೀನ ಹಾಗೂ ಮಾರಣಾಂತಿಕ ಕಾಯಿಲೆಗಳೊಂದಿಗೆ ಬದುಕುತ್ತಿರುವ ರೋಗಿಗಳಿಗೆ ಸರ್ಕಾರದ ಸಹಾಯ. ಕೇರಳ ಮಾದರಿಯಲ್ಲಿ ಗೃಹಾಧಾರಿತ ಉಪಶಮನ ಆರೈಕೆ ಸೌಲಭ್ಯ.

ಕಾರವಾರಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

ಕಾರವಾರದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಬೇಕೆಂಬ ಉತ್ತರ ಕನ್ನಡ ಜನರ ಕೂಗಿಗೆ ಸ್ಪಂದನೆ. 100 ಕೋಟಿ ರು. ವೆಚ್ಚದಲ್ಲಿ ಕಾರವಾರದಲ್ಲಿ ಆಸ್ಪತ್ರೆ. ಜತೆಗೆ ಯಾದಗಿರಿಯಲ್ಲೂ ಸ್ಥಾಪನೆ

ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಹೆಸರು

ಬೆಂಗಳೂರಿನ ಪ್ರಸಿದ್ಧ ಹಾಗೂ ಅತ್ಯಂತ ಹಳೆಯ ವಿಕ್ಟೋರಿಯಾ ಆಸ್ಪತ್ರೆ ಹೆಸರು ಬದಲಾವಣೆ. ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಎಂದು ಮರುನಾಮಕರಣ

ಮಾದಕ ವ್ಯಸನಿ ಮಕ್ಕಳಿಗೆ ಪುನರ್ವಸತಿ ಕೇಂದ್ರಗಳು

ಮಾದಕ ವ್ಯಸನಕ್ಕೆ ಒಳಗಾದ 18 ವರ್ಷದೊಳಗಿನ ಮಕ್ಕಳನ್ನು ವ್ಯಸನದಿಂದ ಹೊರತರಲು ಸರ್ಕಾರ ಯತ್ನ. ಇದಕ್ಕಾಗಿ ಬೆಂಗಳೂರಿನ ನಿಮ್ಹಾನ್ಸ್‌ ಹಾಗೂ ಧಾರವಾಡದ ಡಿಮ್ಹಾನ್ಸ್‌ ಸಹಯೋಗದಲ್ಲಿ ಪ್ರಾಯೋಗಿಕವಾಗಿ ‘ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರ’ ಆರಂಭ.

ಗರ್ಭಿಣಿಯರಿಗೆ ಮತ್ತೆ ಅಂಗನವಾಡಿ ಊಟ

ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಮತ್ತೆ ಅಂಗನವಾಡಿ ಕೇಂದ್ರಗಳಲ್ಲಿ ಬಿಸಿಯೂಟ. ಟೇಕ್‌ ಹೋ ರೇಷನ್‌ ಯೋಜನೆಗೆ ಕೊಕ್‌. ಹೊಸ ರೂಪದಲ್ಲಿ ಮಾತೃಪೂರ್ಣ ಯೋಜನೆ ಜಾರಿ.

ಅನ್ನಭಾಗ್ಯದಡಿ ಇಂದಿರಾ ಕಿಟ್‌

ಅನ್ನಭಾಗ್ಯ ಯೋಜನೆಯಡಿ 5 ಕೇಜಿ ಅಕ್ಕಿ ಬದಲಿಗೆ ತೊಗರಿಬೇಳೆ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ ಒಳಗೊಂಡ ಇಂದಿರಾ ಕಿಟ್‌ ಪ್ರತಿ ತಿಂಗಳೂ ವಿತರಣೆ. ಇದಕ್ಕಾಗಿ 6200 ಕೋಟಿ ರು. ಮೀಸಲು

ಇರುಳ, ಸೋಲಿಗರಿಗಾಗಿ ಆದಿವಾಸಿ ಅಭಿವೃದ್ಧಿ ನಿಗಮ

ಅರಣ್ಯ, ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಇರುಳ, ಸೋಲಿಗ, ಜೇನುಕುರುಬ, ಕಾಡುಕುರುಬ, ಕುಡಿಯ, ಸಿದ್ದಿ ಮತ್ತು ಇತರೆ ಸೂಕ್ಷ್ಮ ಪರಿಶಿಷ್ಟ ಪಂಗಡಗಳಿಗಾಗಿ ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆ

ಪರಿಶಿಷ್ಟ ಪಂಗಡಗಳಿಗೆ ಪ್ರತ್ಯೇಕ ಆಯೋಗ

ಪರಿಶಿಷ್ಟ ಪಂಗಡದ ಸಮುದಾಯದವರ ಹಕ್ಕುಗಳ ಸಂರಕ್ಷಣೆ. ಅವರ ದೂರು, ಸಮಸ್ಯೆ ಆಲಿಸಲು ಪ್ರತ್ಯೇಕವಾದ ಪರಿಶಿಷ್ಟ ಪಂಗಡಗಳ ಆಯೋಗ ಸ್ಥಾಪನೆ.

ಹಿಂದ ವರ್ಗ ಪಡೆದ ಸಾಲದ ಬಡ್ಡಿ ಮನ್ನಾ

ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ನಿಗಮಗಳಿಂದ ಪಡೆದ ಸಾಲದ ಅಸಲು ಪಾವತಿಸಿದವರಿಗೆ ಬಡ್ಡಿ ಮನ್ನಾ. 2021ರ ಮಾ.31ರವರೆಗೆ ಪಡೆದ ಸಾಲಕ್ಕೆ ಅನ್ವಯ.

ಐಟಿಐ ವಿದ್ಯಾರ್ಥಿಗಳಿಗೆ ಪಿಯು ಪ್ರಮಾಣಪತ್ರ

ಐಟಿಐ ವಿದ್ಯಾರ್ಥಿಗಳಿಗೆ 2 ಹೆಚ್ಚುವರಿ ವಿಷಯ ಬೋಧನೆ. ಉನ್ನತ ವ್ಯಾಸಂಗ, ಉತ್ತಮ ಉದ್ಯೋಗ ಪಡೆದುಕೊಳ್ಳಲು ನೆರವಾಗುವ ಸಂಬಂಧ ಪದವಿಪೂರ್ವ ಪ್ರಮಾಣ ಪತ್ರ ವಿತರಣೆ. ಹೆಣ್ಣುಮಕ್ಕಳ ಪ್ರವೇಶ ಹೆಚ್ಚಿಸಲು 1200 ರು. ವಾರ್ಷಿಕ ಬೋಧನಾ ಶುಲ್ಕ ವಿನಾಯಿತಿ.

ವಿದ್ಯಾರ್ಥಿಗಳಿಗಾಗಿ ಇಂದಿರಾ ಕ್ಯಾಂಟೀನ್‌

ಉನ್ನತ ವ್ಯಾಸಂಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಬರುವ ವಿದ್ಯಾರ್ಥಿಗಳಿಗಾಗಿ ಧಾರವಾಡದಲ್ಲಿ 4 ಹಾಗೂ ಬೆಂಗಳೂರಿನಲ್ಲಿ 2 ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್‌ಗಳು ಪ್ರಾರಂಭ

ಉಪಚುನಾವಣೆ ನಡೆವ ದಾವಣಗೆರೆಗೆ ಶತಕೋಟಿ

ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ₹100 ಕೋಟಿ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ವೃದ್ಧಿಗೆ ಹಣ ಬಳಕೆ

ಎಲೆಕ್ಟ್ರಿಕ್‌ ವಾಹನಗಳಿಗಾಗಿ 1250 ಚಾರ್ಜಿಂಗ್‌ ಕೇಂದ್ರ

ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಉತ್ತೇಜನ. ಎಸ್ಕಾಂಗಳ ಸಹಯೋಗದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ 1250 ವಾಹನ ಚಾರ್ಜಿಂಗ್‌ ಕೇಂದ್ರ ಸ್ಥಾಪನೆ. ಇದಕ್ಕಾಗಿ 777 ಕೋಟಿ ರು. ವೆಚ್ಚ

ಬೆಳಗಾವಿಗೆ ಕೈಗಾರಿಕೆ ಮೈಸೂರು ನಗರದಲ್ಲಿ ಏರೋಸ್ಪೇಸ್‌ ಪಾರ್ಕ್‌

ಉತ್ತರ ಕರ್ನಾಟಕದಲ್ಲಿ ಆರ್ಥಿಕ ಅಭಿವೃದ್ಧಿ, ಉದ್ಯೋಗಾವಕಾಶ ಕಲ್ಪಿಸಲು ಬೆಳಗಾವಿ ಜಿಲ್ಲೆಯಲ್ಲಿ 1000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್‌. ಮೈಸೂರು ಏರ್‌ಪೋರ್ಟ್‌ ಬಳಿ ಏರೋಸ್ಪೇಸ್‌ ಪಾರ್ಕ್‌.

ರಾಜ್ಯದ ಎರಡನೇ ಐಟಿ ನಗರವಾಗಿ ಮೈಸೂರು

ಬೆಂಗಳೂರಿನ ದಟ್ಟಣೆ ಕಡಿಮೆ ಮಾಡಲು ಮೈಸೂರು ನಗರವನ್ನು ಎರಡನೇ ಐಟಿ ಸಿಟಿಯನ್ನಾಗಿ ಅಭಿವೃದ್ಧಿ. ಈಗಾಗಲೇ ಮೈಸೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ 100 ಕಂಪನಿಗಳಲ್ಲಿ 30 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ.

ಕುವೆಂಪು ವಿವಿಯಲ್ಲಿ ಅನಂತ ಮೂರ್ತಿ ಅಧ್ಯಯನ ಪೀಠ

ಜ್ಞಾನಪೀಠ ಪುರಸ್ಕೃತ ಡಾ। ಯು.ಆರ್‌. ಅನಂತಮೂರ್ತಿ ಹೆಸರಿನಲ್ಲಿ ಕುವೆಂಪು ವಿವಿಯಲ್ಲಿ ಅಧ್ಯಯನ ಪೀಠ. ಶಿಶುನಾಳ ಷರೀಫರು ಹಾಗೂ ವೀರರಾಣಿ ಬೆಳವಡಿ ಮಲ್ಲಮ್ಮ ಹೆಸರಲ್ಲಿ ಪ್ರತಿಷ್ಠಾನ. ಜಿ.ಎಸ್‌.ಶಿವರುದ್ರಪ್ಪ ಹೆಸರಲ್ಲಿ ಕಾರ್ಯಕ್ರಮಕ್ಕೆ 2 ಕೋಟಿ ರು. ದಲಿತ ಕವಿ ಸಿದ್ದಲಿಂಗಯ್ಯ, ಡಾ। ಡಿ.ಆರ್‌. ನಾಗರಾಜ ಹೆಸರಲ್ಲಿ ಟ್ರಸ್ಟ್‌.

ಹವ್ಯಕ ಭಾಷೆಗಾಗಿ ಭಾಷಾ ಅಕಾಡೆಮಿ

ರಾಜ್ಯ ಸಂಸ್ಕೃತಿಯ ಅಂಗವಾಗಿರುವ ಹವ್ಯಕ ಭಾಷೆಯ ಬೆಳವಣಿಗೆಗಾಗಿ ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ 2 ಕೋಟಿ ರು. ಅನುದಾನ

ಆಟೋ, ಟ್ಯಾಕ್ಸಿ ಚಾಲಕರಿಗೆ ಮೃದು ಕೌಶಲ್ಯ ತರಬೇತಿ

ಪ್ರವಾಸಿಗರಿಗೆ ಸುಮಧುರ, ಸಕಾರಾತ್ಮಕ ಅನುಭವ ನೀಡಲು ಟ್ಯಾಕ್ಸಿ ಚಾಲಕರು, ಆಟೋ ಚಾಲಕರು, ಭದ್ರತಾ ಪೊಲೀಸ್‌ ಸಿಬ್ಬಂದಿಗೆ ಮೃದು ಕೌಶಲ್ಯ ತರಬೇತಿ. ಪ್ರವಾಸ ಮಾರ್ಗದರ್ಶಕರಿಗೆ ಆಯ್ದ ವಿವಿಗಳಲ್ಲಿ ಕೌಶಲ್ಯ ತರಬೇತಿಗೆ ಡಿಪ್ಲೊಮಾ ಕೋರ್ಸ್‌.

ಮುಳ್ಳಯ್ಯನಗಿರಿಗಿನ್ನು ರೋಪ್‌ವೇಲಿ ಹೋಗಿ

ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿ- ಸೀತಾಳಯ್ಯನಗಿರಿಯಿಂದ ಕೈಮರದವರೆಗೆ ಪಿಪಿಪಿ ಮಾದರಿಯಲ್ಲಿ ರೋಪ್‌-ವೇ ನಿರ್ಮಾಣ. ಗದಗ- ಕಪ್ಪತಗುಡ್ಡ- ಲಕ್ಕುಂಡಿ ಪ್ರವಾಸೋದ್ಯಮ ಸರ್ಕೀಟ್‌ ಅಭಿವೃದ್ಧಿ

5 ವಿಶ್ವದ ದರ್ಜೆಯ ಉಪ ನೋಂದಣಿ ಕೇಂದ್ರ ಸ್ಥಾಪನೆ

ನಾಗರಿಕರಿಗೆ ಉತ್ತಮ ಅನುಭವ ಹೆಚ್ಚಿಸಲು ಪ್ರತಿ ಜಿಲ್ಲೆಯ ಒಂದು ಉಪನೋಂದಣಿ ಕಚೇರಿ ‘ನೋಂದಣಿ ಖಾತರಿ ಕೇಂದ್ರ’ವಾಗಿ ನವೀಕರಣ. ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳ ಮಾದರಿ ಐದು ವಿಶ್ವದ ದರ್ಜೆಯ ಉಪನೋಂದಣಿ ಕೇಂದ್ರ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ.

ವೈಷ್ಣೋದೇವಿ ಭಕ್ತರಿಗೆ ₹5000 ಸಹಾಯಧನ

ಜಮ್ಮು-ಕಾಶ್ಮೀರದ ಮಾತಾ ವೈಷ್ಣೋದೇವಿ ಯಾತ್ರೆ ಕೈಗೊಳ್ಳುವ ಕರ್ನಾಟಕದ ಜನರಿಗೆ ತಲಾ 5000 ರು. ಸಹಾಯಧನ. ಡಿಬಿಟಿ ಮೂಲಕ ವಿತರಣೆ. 5 ಕೋಟಿ ರು. ಮೀಸಲು

ಕುಕ್ಕೆ, ಕೊಲ್ಲೂರು ದೇಗುಲ ಪ್ರಾಧಿಕಾರ

ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಾಲಯಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ, ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಅಭಿವೃದ್ಧಿ ಪ್ರಾಧಿಕಾರ

ಶೂಟಿಂಗ್‌ ಸ್ಥಳಗಳ ಡಿಜಿಟಲ್‌ ಮ್ಯಾಪ್‌

ರಾಜ್ಯದ ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು, ಚಿತ್ರೀಕರಣ ಸ್ಥಳಗಳ ಮಾಹಿತಿ ಒಳಗೊಂಡ ‘ಕರ್ನಾಟಕ ಫಿಲ್ಮ್‌ ಲೊಕೇಷನ್‌ ಡಿಜಿಟಲ್‌ ಮ್ಯಾಪ್‌’ ಅಭಿವೃದ್ಧಿ.

ಸಲೂನ್‌ ತೆರೆಯಲು ಸವಿತಾ ಸಮಾಜಕ್ಕೆ 10 ಲಕ್ಷ ರು. ಸಾಲ

ಸಲೂನ್‌ಗಳನ್ನು ತೆರೆಯಲು ಸವಿತಾ ಸಮಾಜದ ಜನರಿಗೆ ಶೇ.4ರ ಬಡ್ಡಿ ದರದಲ್ಲಿ 10 ಲಕ್ಷ ರು. ಸಾಲ ಮತ್ತು ಸಹಾಯಧನ ಮಂಜೂರು.

ಕೇಂದ್ರದ ಮೇಲೆ ಚಾರ್ಜ್‌ಶೀಟ್‌

ಬಜೆಟ್‌ನಲ್ಲಿ ಕೇಂದ್ರದ ವಿರುದ್ಧ ಸಿದ್ದು ಆಕ್ರೋಶ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಹಣ ಕಡಿತ. ಕೇಂದ್ರದ ಯೋಜನೆಗಳಲ್ಲಿ ತಾರತಮ್ಯ. 15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆಯಲ್ಲಿ ಅನ್ಯಾಯ. ಇದರಿಂದ ರಾಜ್ಯಕ್ಕೆ ನಷ್ಟ. ಹೆಚ್ಚುವರಿ ಹೊರೆ ನಿಭಾಯಿಸುವ ಸವಾಲು ಎಂದು ಕಿಡಿ. ಉದ್ಯೋಗ ಖಾತ್ರಿ ದುರ್ಬಲಗೊಳಿಸಲಾಗಿದೆ ಎಂದು ಗುಟುರು

4.48 ಲಕ್ಷ ಕೋಟಿ ಬಜೆಟ್‌ ಗಾತ್ರ 22957 ಕೋಟಿ ರು. ಕೊರತೆ

 ಹೊಸ ಯೋಜನೆಗಳು 

ಬಿತ್ತನೆ ಟು ಮಾರಾಟಕ್ಕೆ ಕೃಷಿಗೆ 4 ಆಧಾರ ಸ್ತಂಭ

ಬಿತ್ತನೆಯಿಂದ ಮಾರಾಟದವರೆಗೆ ರೈತರಿಗೆ ಸಮಗ್ರ ಬೆಂಬಲ. ಇದಕ್ಕಾಗಿ 4 ಆಧಾರಸ್ತಂಭಗಳ ಮೇಲೆ ಕೃಷಿ ಅಭಿವೃದ್ಧಿ ತಂತ್ರ. ಅವೆಂದರೆ: 1. ರೈತರಿಗೆ ವೈಜ್ಞಾನಿಕ ಕೃಷಿ ಮಾರ್ಗದರ್ಶನ. 2 ರೈತರಿಗೆ ಹಣಕಾಸು ನೆರವು. 3 ಉತ್ತಮ ಗುಣಮಟ್ಟದ ಕೃಷಿ ಪರಿಕರ ಪೂರೈಕೆ ಮತ್ತು ಬೆಳೆಗಳ ನಿರ್ವಹಣೆ. 4. ಸಂಸ್ಕರಣೆ ಮತ್ತು ಮಾರುಕಟ್ಟೆ ಸಂಪರ್ಕಗಳ ವಿಸ್ತರಣೆ

ರೈತರ ಆದಾಯ ಹೆಚ್ಚಳಕ್ಕೆ ಮುಖ್ಯಮಂತ್ರಿ ಕೃಷಿ ವಿಸ್ತಾರ

ಗ್ರಾಮೀಣ ರೈತರಿಗೆ ಸ್ಥಿರ, ಹೆಚ್ಚುವರಿ ಆದಾಯ ಸೃಷ್ಟಿಸಲು ‘ಮುಖ್ಯಮಂತ್ರಿ ಕೃಷಿ ವಿಸ್ತಾರ’ ಯೋಜನೆ. 3 ವರ್ಷದಲ್ಲಿ 100 ಕೋಟಿ ರು. ವೆಚ್ಚ. ಇದರಡಿ ಕೃಷಿ ಉತ್ಪಾದನೆಯ ನಂತರ ಸಂಸ್ಕರಣೆ, ಮೌಲ್ಯವರ್ಧನೆ, ಮೌಲ್ಯ ಸರಪಳಿ ಅಭಿವೃದ್ಧಿ, ಕೃಷಿ ತ್ಯಾಜ್ಯಗಳ ಮರುಬಳಕೆ, ಮಾರುಕಟ್ಟೆ ಸಂಪರ್ಕ ಬಲವರ್ಧನೆ

ಸುಸ್ಥಿರ ಕೃಷಿ ಪದ್ಧತಿಗಳ ಜಾರಿಗೆ ‘ವಸುಧಾಮೃತ’

ಪರಿಸರಸ್ನೇಹಿ, ಸುಸ್ಥಿರ ಕೃಷಿ ಪದ್ಧತಿ ಉತ್ತೇಜನಕ್ಕೆ ‘ವಸುಧಾಮೃತ’ ಕಾರ್ಯಕ್ರಮ. 3 ವರ್ಷಗಳಲ್ಲಿ ಅನುಷ್ಠಾನ. ಮಣ್ಣಿನ ಸಾವಯವ ಇಂಗಾಲ, ಅದರ ಭೌತಿಕ- ರಾಸಾಯನಿಕ- ಜೈವಿಕ ಗುಣಮಟ್ಟ ಹೆಚ್ಚಳ ಉದ್ದೇಶ

ಕೀಟ, ರೋಗ ತಡೆಗೆ ‘ಸಸ್ಯ ಸಂಜೀವಿನಿ’

ಬೆಳೆಗಳಲ್ಲಿ ಕೀಟ, ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ನಿಯಂತ್ರಿಸಲು ಪರಿಸರಸ್ನೇಹಿ ಜೈವಿಕ ಪೀಡೆನಾಶಕ ಅಥವಾ ಜೈವಿಕ ಕೀಟನಾಶಕ ಬಳಕೆ. ಇದರ ಜತೆಗೆ ಸುರಕ್ಷಿತ ನಿರ್ವಹಣಾ ಕ್ರಮಗಳು ರೈತರಿಗೆ ಶಿಫಾರಸು. ಇದಕ್ಕಾಗಿ ‘ಸಸ್ಯ ಸಂಜೀವಿನಿ’ ಯೋಜನೆ. 3 ವರ್ಷದಲ್ಲಿ ಜಾರಿ

ಪಶುಗಳ ಸಂತಾನ ಹೆಚ್ಚಳಕ್ಕೆ ‘ಫಲಧಾರೆ’

ಜಾನುವಾರು ಸಂತಾನೋತ್ಪತ್ತಿ ಸಮಸ್ಯೆ ನಿವಾರಣೆಗೆ 1000 ಗ್ರಾಮ ಪಂಚಾಯಿತಿಗಳಲ್ಲಿ ‘ಫಲಧಾರೆ’ ಶಿಬಿರ. ‘ವರ್ಷಕ್ಕೊಂದು ಕರು’ ಘೋಷವಾಕ್ಯದೊಂದಿಗೆ ಜಾರಿ. 5 ಕೋಟಿ ರು. ವೆಚ್ಚ.

ಆನ್‌ಲೈನ್‌ ಉದ್ಯೋಗ ಕೇಂದ್ರಕ್ಕೆ ಕಾಯಕಭಾಗ್ಯ

ಅಸಂಘಟಿತ ಕಾರ್ಮಿಕರಿಗೆ ಕೌಶಲ್ಯಾಧಾರಿತ ಉದ್ಯೋಗ ಒದಗಿಸಲು ಆನ್‌ಲೈನ್‌ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆ. ಇದಕ್ಕಾಗಿ ‘ಕಾಯಕ ಭಾಗ್ಯ’ ಯೋಜನೆ. 5 ಕೋಟಿ ರು. ವೆಚ್ಚದಲ್ಲಿ ಜಾರಿಗೆ.

ಐಟಿಐ ಗುಣಮಟ್ಟಕ್ಕೆ ಕೆ-ಕ್ವೆಸ್ಟ್‌ ಯೋಜನೆ

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು, ಕೆಜಿಟಿಟಿಐಗಳು, ಕೆಎಸ್‌ಡಿಎ ಮತ್ತು ಜೆಟಿಎಸ್‌ಗಳ ಮೂಲಭೂತ ಸೌಕರ್ಯ, ತರಬೇತಿ ಗುಣಮಟ್ಟ ಹೆಚ್ಷಚಳಕ್ಕೆ ನಿರ್ಧಾರ. ಎಡಿಬಿ ಸಹಭಾಗಿತ್ವದಲ್ಲಿ 1386 ಕೋಟಿ ರು. ವೆಚ್ಚದಲ್ಲಿ ‘ಕೆ-ಕ್ವೆಸ್ಟ್‌ (ಕರ್ನಾಟಕ- ಕ್ವಾಲಿಟಿ ಅಪ್‌ಗ್ರೇಡೇಷನ್‌ ಫಾರ್‌ ಎಂಪ್ಲಾಯ್‌ಮೆಂಟ್‌ ಅಂಡ್‌ ಸ್ಕಿಲ್‌ ಟ್ರಾನ್ಸ್‌ಫಾರ್ಮೇಷನ್‌) ಯೋಜನೆ ಜಾರಿ. 5 ವರ್ಷಗಳ ಅವಧಿ.

ಗ್ರಾಪಂಗಳಿಗೆ ಗಾಂಧಿ ಹೆಸರು;

ವಿದ್ಯುತ್‌ಗೆ ಅನಂತ ಯೋಜನೆ

ಮಹಾತ್ಮ ಗಾಂಧೀಜಿ ಹೆಸರು ಚಿರಸ್ಥಾಯಿಗೊಳಿಸಲು ಎಲ್ಲ ಗ್ರಾಪಂಗಳಿಗೂ ಮಹಾತ್ಮ ಗಾಂಧಿ ಗ್ರಾಮ ಪಂಚಾಯಿತಿ ಎಂದು ನಾಮಕರಣ. ವಿದ್ಯುಚ್ಛಕ್ತಿಯಲ್ಲಿ ಸ್ವಾವಲಂಬನೆ ಮಾಡಲು ಗ್ರಾಪಂಗಳಲ್ಲಿ ಸೋಲಾರ್‌ ಮೈಕ್ರೋ ಗ್ರಿಡ್‌ ಸ್ಥಾಪನೆಗೆ ‘ಅನಂತ’ ಯೋಜನೆ

ಸೌರ ವಿದ್ಯುತ್‌ಗಾಗಿ

ಸಿಎಂ ಸೌರ ಕೃಷಿ

ಕೆಪಿಟಿಸಿಎಲ್‌ ಉಪಕೇಂದ್ರಗಳಲ್ಲಿ 10500 ಕೋಟಿ ರು. ವೆಚ್ಚದಲ್ಲಿ 3000 ಮೆಗಾವ್ಯಾಟ್‌ ಕ್ಷಮತೆಯ ಸೌರ ವಿದ್ಯುತ್‌ ಸ್ಥಾವರಗಳ ಸ್ಥಾಪನೆ. ಇದಕ್ಕಾಗಿ ‘ಮುಖ್ಯಮಂತ್ರಿ ಸೌರ ಕೃಷಿ ಯೋಜನೆ’.

ಮಾನವ- ವನ್ಯಪ್ರಾಣಿ

ಸಂಘರ್ಷ ತಡೆಗೆ ಸ್ಕೀಂ

ಮಾನವ- ವನ್ಯಪ್ರಾಣಿ ಸಂಘರ್ಷ ತಗ್ಗಿಸಲು ‘ಕರ್ನಾಟಕ ಮಾನವ- ವನ್ಯಪ್ರಾಣಿ ಸಂಘರ್ಷ ನಿವಾರಣಾ ಕಾರ್ಯತಂತ್ರ ಯೋಜನೆ’ ಜಾರಿ. ಮುಂದಿನ 5 ವರ್ಷದಲ್ಲಿ 1500 ಕೋಟಿ ರು. ವೆಚ್ಚದಲ್ಲಿ ಜಾರಿ. ಈಗ 269 ಕೋಟಿ ರು. ಮೀಸಲು.

--

ದೇಗುಲಗಳ ಕಲ್ಯಾಣಿ

ಪುನಶ್ಚೇತನಕ್ಕೆ ಸ್ಕೀಂ

ಮುಜರಾಯಿ ಇಲಾಖೆ ದೇಗುಲಗಳ 259 ಕಲ್ಯಾಣಿಗಳು 3 ವರ್ಷಗಳಲ್ಲಿ ಪುನರುಜ್ಜೀವನ. ಇದಕ್ಕಾಗಿ ‘ಜಲ ನಿಧಿ ಕಲ್ಯಾಣಿಗಳ ಪುನಶ್ಚೇತನ ಯೋಜನೆ’. 5 ಕೋಟಿ ರು. ಮೀಸಲು.

ಸಿನಿಮಾ ಶೂಟಿಂಗ್‌

ಸಮ್ಮತಿಗೆ ಸಿನಿಮಿತ್ರ

ಚಲನಚಿತ್ರ ಹಾಗೂ ಇತರೆ ಚಿತ್ರೀಕರಣಗಳಿಗೆ ಅಗ್ಯವಿರುವ ವಿವಿಧ ಇಲಾಖೆಗಳ ಅನುಮತಿ ಏಕಗವಾಕ್ಷಿಯಲ್ಲಿ ಮಂಜೂರು. ಇದಕ್ಕಾಗಿ ‘ಸಿನಿ ಮಿತ್ರ’ ಎಂಬ ಆನ್‌ಲೈನ್‌ ಡಿಜಿಟಲ್‌ ವ್ಯವಸ್ಥೆ ಜಾರಿ

ಜೈಲುಗಳಲ್ಲಿ ಡ್ರಗ್ಸ್‌ ಬೇಟೆಗೆ

ಆಪರೇಷನ್‌ ಪರಿಶುದ್ಧೀಕರಣ

ಜೈಲುಗಳಲ್ಲಿ ಮೊಬೈಲ್‌, ಗಾಂಜಾ, ನಿಷೇಧಿತ ವಸ್ತುಗಳ ಬಳಕೆ, ಅಕ್ರಮ ಚಟುವಟಿಕೆ ತಡೆಗಟ್ಟಲು ‘ಆಪರೇಷನ್‌ ಪರಿಶುದ್ಧೀಕರಣ’.

ಅಲ್ಪಸಂಖ್ಯಾತರಿಗೆ ಸಿದ್ದು ಭರ್ಜರಿ

ಶಿಶುನಾಳರ ಹೆಸರಲ್ಲಿ

10 ವಸತಿ ಶಾಲೆಗಳು

ಅಲ್ಪಸಂಖ್ಯಾತರ ವಸತಿ ಶಾಲೆಗಳಿಗೆ ಭಾರಿ ಬೇಡಿಕೆ. ಹೀಗಾಗಿ ಸಂತ ಶಿಶುನಾಳ ಶರೀಫರ ಹೆಸರಿನಲ್ಲಿ ಸಿಬಿಎಸ್‌ಇ ಪಠ್ಯಕ್ರಮದಡಿ 10 ಹೊಸ ವಸತಿ ಶಾಲೆ. ಮುಂದಿನ ವರ್ಷ ಇನ್ನೂ 25 ಶಾಲೆ ಆರಂಭ

ಅಲ್ಪಸಂಖ್ಯಾತರಿಗಾಗಿ

2 ಮಹಿಳಾ ವೃದ್ಧಾಶ್ರಮ

ಅಲ್ಪಸಂಖ್ಯಾತ ಸಮುದಾಯದ ನಿರ್ಗತಿಕ ಜನರಿಗೆ ನೆರವು. 100 ಸಂಖ್ಯಾ ಬಲದ ಎರಡು ಮಹಿಳಾ ವೃದ್ಧಾಶ್ರಮ ಸ್ಥಾಪನೆಗೆ ನೆರವು

5000 ಅಲ್ಪಸಂಖ್ಯಾತರ

ಲ್ಯಾಪ್‌ಟಾಪ್‌ಗಾಗಿ ಹಣ

ಅಲ್ಪಸಂಖ್ಯಾತ ಸಮುದಾಯದ 5000 ಪ್ರತಿಭಾವಂತ ವಿದ್ಯಾರ್ಥಿಗಳು ಲ್ಯಾಪ್‌ಟಾಪ್‌ ಖರೀದಿಸಲು ತಲಾ 50 ಸಾವಿರ ರು. ನೆರವು. ತಾಂತ್ರಿಕ ಹಾಗೂ ಉನ್ನತ ಮಟ್ಟದ ಡಿಜಿಟಲ್‌ ಶಿಕ್ಷಣ ಪ್ರೋತ್ಸಾಹಿಸಲು ಕ್ರಮ.

ಅಲ್ಪಸಂಖ್ಯಾತರ ಫಾಸ್ಟ್‌ಫುಡ್‌

ಸೆಂಟರ್‌ಗೆ 3 ಲಕ್ಷ ರು. ನೆರವು

ಅಲ್ಪಸಂಖ್ಯಾತ ಸಮುದಾಯದ ನಿರುದ್ಯೋಗಿ ಯುವಕ/ಯುವತಿಯರು ಫಾಸ್ಟ್‌ಫುಡ್‌ ಟ್ರಕ್‌ ಟ್ರೈಲರ್‌/ಮೊಬೈಲ್‌ ಕಿಚನ್‌ ಫುಡ್‌ ಕಿಯೋಸ್ಕ್‌ ಸೌಲಭ್ಯ ತೆರೆಯಲು ನೆರವು. ಘಟಕ ವೆಚ್ಚದ ಶೇ.75 ಅಥವಾ ಗರಿಷ್ಠ 3 ಲಕ್ಷ ರು. ಸಹಾಯಧನ.

ಅಲ್ಪಸಂಖ್ಯಾತರಿಗಾಗಿ

ಮಹಿಳಾ ಸಹಕಾರ ಸಂಘ

ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಪ್ರೋತ್ಸಾಹ. ಇದಕ್ಕಾಗಿ ಅಲ್ಪಸಂಖ್ಯಾತರ ಮಹಿಳಾ ಕೋ ಆಪರೇಟಿವ್‌ ಸೊಸೈಟಿ ಸ್ಥಾಪನೆ

ಇತರೆ ನೆರವು

- ಬೇಡಿಕೆ ಇರುವ ಜಿಲ್ಲೆಗಳಲ್ಲಿ 150 ಸಂಖ್ಯಾ ಬಲದ 25 ಹೊಸ ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಲಯ ಪ್ರಾರಂಭ

- ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತರಿಗ ಸಿಇಟಿ/ಜೆಇಇ/ನೀಟ್‌ ತರಬೇತಿ ಕೊಡಲು ನಾಲ್ಕು ವಸತಿ ಶಾಲೆಗಳು ಸೆಂಟರ್‌ ಆಫ್‌ ಎಕ್ಸಲೆನ್ಸ್‌ಗಳಾಗಿ ಪರಿವರ್ತನೆ.

- 100 ಮೌಲಾನಾ ಆಜಾದ್‌ ಮಾದರಿ ಶಾಲೆ ಹಾಗೂ ಉರ್ದು ಶಾಲೆಗಳು ಕೆಪಿಎಸ್‌ ಮಾದರಿಯಲ್ಲಿ ಉನ್ನತೀಕರಣ. ಇದಕ್ಕಾಗಿ 400 ಕೋಟಿ ರು. ವೆಚ್ಚ

-ಬೆಂಗಳೂರಿನ ಕೆಂಗೇರಿಯಲ್ಲಿ 2 ಎಕರೆ ಜಾಗದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರ ಸ್ಥಾಪನೆಗೆ 5 ಕೋಟಿ

- ಸಂವಿಧಾನ ಶಿಲ್ಪಿ ಡಾ। ಅಂಬೇಡ್ಕರ್ ಹಾಗೂ ಇತರೆ ಸಮಾಜ ಸುಧಾರಕರ ಪುಸ್ತಕಗಳು ಉರ್ದು ಭಾಷೆಗೆ ಅನುವಾದ

- ಹಜ್‌ ಯಾತ್ರಿಕರು, ಸಂಬಂಧಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಹುಬ್ಬಳ್ಳಿ, ಕಲಬುರಗಿಯಲ್ಲಿ ಹಜ್‌ ಭವನ ನಿರ್ಮಾಣ

- ಜೈನ, ಬೌದ್ಧ, ಸಿಖ್‌ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ 100 ಕೋಟಿ ರು.

- ಬೌದ್ಧ ಧರ್ಮದ ಧಮ್ಮಾಚಾರಿಗಳಿಗೆ 6000 ರು. ಮಾಸಿಕ ಗೌರವಧನ

ಬೆಂಗಳೂರಿಗೆ ಬಂಪರ್‌

- ಬೆಂಗಳೂರಿನ ಅಭಿವೃದ್ಧಿಗೆ ಈ ವರ್ಷವೂ 7000 ಕೋಟಿ ರು. ಅನುದಾನ

- 450 ಕಿ.ಮೀ. ಉದ್ದದ ರಸ್ತೆಗಳು 3000 ಕೋಟಿ ರು. ವೆಚ್ಚದಲ್ಲಿ ಮೂರು ವರ್ಷಗಳಲ್ಲಿ ವೈಟ್‌ ಟಾಪಿಂಗ್‌

- ನಗರಪಾಲಿಕೆಗಳ ಮೂಲಕ 3 ವರ್ಷಗಳಲ್ಲಿ 175 ಜಂಕ್ಷನ್‌ಗಳ ಸೌಂದರ್ಯೀಕರಣ. 500 ಕಿ.ಮೀ. ಉದ್ದದ ಪಾದಚಾರಿ ಮಾರ್ಗ ಮೇಲ್ದರ್ಜೆಗೆ. 100 ಸ್ಕೈವಾಕ್‌ಗಳ ನಿರ್ಮಾಣ

- ಬೆಂಗಳೂರು ನಗರದ ದಟ್ಟಣೆ ಕಡಿಮೆ ಮಾಡಲು ನೆಲಮಂಗಲ- ತಾವರೆಕೆರೆ- ಬಿಡದಿ ಮಧ್ಯಂತರ ವರ್ತುಲ ರಸ್ತೆ

- ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ಸರ್ಕಲ್‌ವರೆಗೆ ಸುರಂಗ ಮಾರ್ಗ, ಮೇಲು ಸೇತುವೆ ರಸ್ತೆ. 2250 ಕೋಟಿ ರು. ವೆಚ್ಚದಲ್ಲಿ ಬಿಡಿಎ ವತಿಯಿಂದ ನಿರ್ಮಾಣ

- ಉನ್ನತ ಮಟ್ಟದ ಜಾಗತಿಕ ಸಮ್ಮೇಳನ, ಶೃಂಗಸಭೆ, ಪ್ರದರ್ಶನ ಆಯೋಜಿಸಲು ಮಲ್ಲೇಶ್ವರದ ಮೈಸೂರು ಲ್ಯಾಂಪ್ಸ್‌ ವರ್ಕ್ಸ್‌ ಕಂಪನಿ ಆವರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಮಾವೇಶ ಕೇಂದ್ರ ಸಂಕೀರ್ಣ

- ಬೆಂಗಳೂರು ಹೊರ ವಲಯದಲ್ಲಿ ಕಾಣಿಸಿಕೊಳ್ಳುವ ಚಿರತೆಗಳನ್ನು ಸೆರೆ ಹಿಡಿದು ಪುನರ್ವಸತಿ ಕಲ್ಪಿಸಲು ಬನ್ನೇರುಘಟ್ಟದಲ್ಲಿ 5 ಕೋಟಿ ರು. ವೆಚ್ಚದಲ್ಲಿ ಕೇಂದ್ರ

- 2000 ಕೋಟಿ ರು. ವೆಚ್ಚದಲ್ಲಿ ರಾಜಕಾಲುವೆಗಳ ಅಭಿವೃದ್ಧಿ/ಮೇಲ್ದರ್ಜೆಗೇರಿಸುವ ಕಾಮಗಾರಿ

- ಪಂಚ ಪಾಲಿಕೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಹೊಂದಿಸಲು ಮುನಿಸಿಪಲ್‌ ಬಾಂಡ್‌

- 2026-27ನೇ ಸಾಲಿನಲ್ಲಿ 41 ಕಿ.ಮೀ. ಹೆಚ್ಚುವರಿ ಮೆಟ್ರೋ ರೈಲು ಮಾರ್ಗ ಪೂರ್ಣ. 15 ಲಕ್ಷ ಜನರಿಗೆ ಅನುಕೂಲ

- ಹೊರವರ್ತುಲ ರಸ್ತೆಯ ಮೆಟ್ರೋ ವಯಾಡಕ್ಟ್‌ ಉದ್ದಕ್ಕೂ 9 ಕಿ.ಮೀ. ಪಾದಚಾರಿ ನಡಿಗೆ ಮಾರ್ಗ. 160 ಕೋಟಿ ರು. ವೆಚ್ಚದಲ್ಲಿ, ಹೊರವರ್ತುಲ ಕಂಪನಿಗಳ ಸಂಘದ ಪ್ರಾಯೋಜಕತ್ವದಲ್ಲಿ ಜಾರಿ

- ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲು ಕಾವೇರಿ 6ನೇ ಹಂತದ ಯೋಜನೆ

- ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ತುಮಕೂರು ರಸ್ತೆಯಿಂದ ಹೊಸೂರು ರಸ್ತೆವರೆಗೆ 73 ಕಿ.ಮೀ. ಉದ್ದದ ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಭಾಗ-1 ಕಾಮಗಾರಿ 4 ವರ್ಷದಲ್ಲಿ ಪೂರ್ಣ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ರಾಜ್ಯ ಬಜೆಟ್‌ನಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ₹7,000 ಕೋಟಿ
ಸಿಎಂ ಜತೆ ಗುತ್ತಿಗೆದಾರರ ಸಭೆ ಏರ್ಪಾಡು : ಡಿಸಿಎಂ