ಮೈಸೂರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ರಾಜಕಾರಣ ಕುರಿತಂತೆ ಪ್ರತಿಕ್ರಿಯೆ ಕನ್ನಡಪ್ರಭ ವಾರ್ತೆ ಗುಬ್ಬಿ
ಗುಬ್ಬಿ ತಾಲೂಕಿನ ಅಡಗೂರು ಕೊಪ್ಪ ಕಕ್ಕೇನಹಳ್ಳಿ ಸುರುಗೇನಹಳ್ಳಿ, ಸಿಂಗೋನಹಳ್ಳಿ ಧೂಳನಹಳ್ಳಿ ಪಾಳ್ಯ ಹಾಗೂ ತೊಂಗನಹಳ್ಳಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ರಾಜಕಾರಣದಲ್ಲಿ ನಾನು ಯಾವತ್ತೂ ಯಾರನ್ನು ನನ್ನ ಮಂತ್ರಿ ಮಾಡಿ ಎಂದು ಕೇಳುವುದಿಲ್ಲ. ಅದರ ಬಗ್ಗೆ ನನಗೆ ಆಸಕ್ತಿ ಇಲ್ಲ. ನನ್ನನ್ನು ಮಂತ್ರಿ ಮಾಡುವುದು - ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಸಚಿವ ಸ್ಥಾನ ಕೊಟ್ಟರೆ ಖುಷಿಪಡುತ್ತೇನೆ. ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ನಾನು ಯಾವುದೇ ಪಕ್ಷಕ್ಕೆ ಹೋದರೂ ಟಿಕೆಟ್ ಪಡೆದುಕೊಳ್ಳುವ ಶಕ್ತಿ ನನಗಿದೆ. ಅದನ್ನು ನಾನು ಉಳಿಸಿಕೊಂಡಿದ್ದೇನೆ. ನಾನು ಹೋಗಬೇಕೆಂಬ ಪರಿಸ್ಥಿತಿ ಬಂದರೆ ಖಂಡಿತಾ ಹೋಗುತ್ತೇನೆ. ನನಗೆ ಧಕ್ಕೆ ಬಂದರೆ ನಾನು ಅಲ್ಲಿ ಇರುವುದಿಲ್ಲ. ಸೋಲು - ಗೆಲವು ನನಗೆ ಮುಖ್ಯವಲ್ಲ. ರಾಜಕಾರಣದಲ್ಲಿ ಬದ್ಧತೆ ಇಟ್ಟುಕೊಂಡು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದ್ದರಿಂದ ಜನ ನನ್ನನ್ನು ಐದು ಬಾರಿ ಗೆಲ್ಲಿಸಿದ್ದಾರೆ. ಜನ ನನಗೆ ಎಲ್ಲಿವರೆಗೂ ಅವಕಾಶ ಕೊಡ್ತಾರೋ ಅಲ್ಲಿಯವರೆಗೂ ಕೆಲಸ ಮಾಡುತ್ತೇನೆ. ಬೇರೆಯವರು ಏನೇ ಮಾತಾಡಿಕೊಂಡರೂ ಕೂಡ ಅದಕ್ಕೆಲ್ಲ ನಾನು ಉತ್ತರ ಕೊಡುವುದಿಲ್ಲ ಎಂದು ತಿಳಿಸಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಸ್ತಿ ವಿಚಾರದಲ್ಲಿ ಸರಿಯಾದ ಮಾಹಿತಿ ಕೊಡದೆ ಇರುವುದಕ್ಕೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ಹೈಕೋರ್ಟು ಅಸಿಂಧುಗೊಳಿಸಿದೆ. ಈ ಸಂಬಂಧ ಅವರು ಕೂಡ ಸುಪ್ರೀಂ ಕೋರ್ಟಿಗೆ ಹೋಗುತ್ತಾರೆ ಎಂದು ಅವರು ಹೇಳಿದರು.
18ಜಿಯುಬಿ1
---
--It is not right to separate father and son for the sake of politics: MLA Srinivas