ಕಮಲಹಾಸನ್‌ ಕನ್ನಡಿಗರ ಕ್ಷಮೆ ಕೋರಬೇಕು : ಮುಖ್ಯಮಂತ್ರಿ ಚಂದ್ರು ಆಗ್ರಹ

KannadaprabhaNewsNetwork |  
Published : May 30, 2025, 12:09 AM ISTUpdated : May 30, 2025, 04:15 AM IST
Mukhyamantri Chandru

ಸಾರಾಂಶ

ಕನ್ನಡ ಭಾಷೆಯ ಹುಟ್ಟಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಟ ಕಮಲ್ ಹಾಸನ್ ತಕ್ಷಣವೇ ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.

 ಬೆಂಗಳೂರು : ಕನ್ನಡ ಭಾಷೆಯ ಹುಟ್ಟಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಟ ಕಮಲ್ ಹಾಸನ್ ತಕ್ಷಣವೇ ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದ್ದಾರೆ.

ಒಂದು ಭಾಷೆಯ ಉಗಮದ ವಿಚಾರಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಯಾವುದೇ ಸಂಶೋಧನೆ, ಅಧ್ಯಯನಗಳು ಇಲ್ಲದೆ ಇಂತಹ ವಿಚಾರಗಳನ್ನು ಮಾತನಾಡಲು ಯಾರಿಗೂ ಸಾಧ್ಯವಿಲ್ಲ. ಕನ್ನಡದ ಪ್ರಸಿದ್ಧ ಕಲಾವಿದ ಶಿವರಾಜ್ ಕುಮಾರ್ ಮುಂದೆಯೇ ಕನ್ನಡ ಭಾಷೆ ಬಗ್ಗೆ ಹೇಳಿಕೆ ನೀಡಿರುವುದು ಕನ್ನಡಿಗರಿಗೆ ಮತ್ತಷ್ಟು ನೋವನ್ನುಂಟು ಮಾಡಿದೆ ಎಂದು ಪ್ರಕಟಣೆ ಮೂಲಕ ಕಿಡಿಕಾರಿದ್ದಾರೆ. ಈಗಾಗಲೇ ಕನ್ನಡ ಮತ್ತು ತಮಿಳು ಭಾಷೆ ನಡುವಿನ ಸಂಘರ್ಷಗಳನ್ನು ಸಾಕಷ್ಟು ಕಂಡಿರುವ ಸಂದರ್ಭದಲ್ಲಿ ಮತ್ತಷ್ಟು ತುಪ್ಪ ಸುರಿಯುವಂಥ ಇವರ ಹೇಳಿಕೆ ಖಂಡನೀಯ. ಶಿವರಾಜ್ ಕುಮಾರ್ ಅವರು ಕೂಡಲೇ ಕಮಲಹಾಸನ್‌ ಹೇಳಿಕೆ ವಿರುದ್ಧ ಪ್ರತಿಭಟಿಸಬಹುದಿತ್ತು.

ಕನ್ನಡಪರ ಆಲೋಚಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರ ಕೂಡಲೇ ಹೇಳಿಕೆ ಖಂಡಿಸಬೇಕು. ಈ ಕಾರ್ಯ ನಡೆಯದಿದ್ದರೆ ಕಮಲಹಾಸನ್‌ ಹೇಳಿಕೆ ವಿರುದ್ಧದ ಕನ್ನಡಿಗರ ಕಿಚ್ಚಿಗೆ ಪಕ್ಷವು ಸಹ ಧ್ವನಿಗೂಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಸಿಎಂ ಸಿದ್ದುಗೆ ಇದು ಕೊನೆ ಅಧಿವೇಶನ: ವಿಜಯೇಂದ್ರ
ಬಿವೈವಿ ಕಲೆಕ್ಷನ್‌ ಕಿಂಗ್‌, ಕಲೆಕ್ಷನ್‌ ಬಿಚ್ಚಿಡ್ಲಾ? : ಡಿಕೆ