ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಇತಿಹಾಸವನ್ನು ಗಮನಿಸಿದರೆ ಸಾಕು. ಬಿಜೆಪಿಯವರು ಇಂತಹ ಕುಕೃತ್ಯಗಳಿಗೆ ಹೆಸರುವಾಸಿ. ರಾಜಕೀಯ ಲಾಭ ಪಡೆಯಲು ಎಂತಹ ಕೆಲಸ ಮಾಡಲೂ ಸಹ ಅವರು ಹಿಂಜರಿಯುವುದಿಲ್ಲ. ಈಗಾಗಲೇ ಕೆಲವು ಕಡೆ ಸಭೆಗಳು ನಡೆಯುತ್ತಿದ್ದು, ಕೆಲವರು ಪ್ರಚೋದನಾಕಾರಿ ಹೇಳಿಕೆ ಶುರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೇಳುತ್ತಿದ್ದೇನೆ. ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳೂ ಈ ಬಗ್ಗೆ ಎಚ್ಚರವಹಿಸುವುದು ಸೂಕ್ತ ಎಂದು ಹೇಳಿದ್ದಾರೆ.
ಈ ಹೇಳಿಕೆಗೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ. ಇದು ನನ್ನ ವೈಯಕ್ತಿಕ ಹೇಳಿಕೆ. ಈ ಹಿಂದೆ ಗೋಧ್ರಾದಲ್ಲಿ ಅಯೋಧ್ಯೆ ಕರ ಸೇವಕರು ಇದ್ದ ರೈಲು ಸುಟ್ಟು ಹಾಕಿದರು. ಈ ವೇಳೆ 56 ಮಂದಿ ಸಾವನ್ನಪ್ಪಿದ್ದರು. ಆ ಘಟನೆ ಗುಜರಾತ್‌ನಲ್ಲೇ ಯಾಕಾಯಿತು? ಆಗ ಗುಜರಾತ್‌ನ ಮುಖ್ಯಮಂತ್ರಿ ಯಾರಾಗಿದ್ದರು ಎಂಬುದನ್ನು ಎಲ್ಲರೂ ಯೋಚಿಸಬೇಕು ಎಂದು ಹೇಳಿದರು.ಕೇವಲ ಗೋಧ್ರಾ ಹತ್ಯಾಕಾಂಡ ಮಾತ್ರವಲ್ಲ. ಪುಲ್ವಾಮಾ ದಾಳಿ, ಕಂದಮಾಲ್‌ನಲ್ಲಿ 1 ಲಕ್ಷ ಮಂದಿ ನಿರ್ಗತಿಕರಾಗಿದ್ದು, ಕಳೆದ ನಾಲ್ಕು ತಿಂಗಳಿಂದ ನಡೆಯುತ್ತಿರುವ ಮಣಿಪುರ ಗಲಭೆ ಎಲ್ಲವೂ ಬಿಜೆಪಿಯ ಇತಿಹಾಸವನ್ನು ಹೇಳುತ್ತವೆ. ಪುಲ್ವಾಮಾ ದಾಳಿ ಆದಾಗ ಇದು ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಮಾಡಿದ್ದ ದುಷ್ಕೃತ್ಯ ಎಂದು ಮರು ದಿನವೇ ಹೇಳಿದ್ದೆ. ಇದೀಗ ಆಗಿನ ರಾಜ್ಯಪಾಲರಾದ ಸತ್ಪಾಲ್ ಮಲ್ಲಿಕ್ ಅವರೇ ಘಟನೆಯ ಬಗ್ಗೆ ಎಲ್ಲವನ್ನೂ ಬಿಚ್ಚಿಟ್ಟಿದ್ದಾರೆ. ಹೀಗಾಗಿ ಎಲ್ಲಾ ರಾಜ್ಯಗಳೂ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಕರೆ ನೀಡಿದರು.ರಾಮಮಂದಿರ ಉದ್ಘಾಟನೆ ರಾಜಕೀಯ ಕಾರ್ಯಕ್ರಮ:
ಗೋದ್ರಾ ಮಾದರಿ ಹತ್ಯಾಕಾಂಡದ ಸಾಧ್ಯತೆ ಕುರಿತ ನನ್ನ ಹೇಳಿಕೆಗೆ ನಾನು ಬದ್ಧ. ತನಿಖಾ ಸಂಸ್ಥೆಗಳು ಬಂದರೆ ಅವರಿಗೂ ಎಲ್ಲೆಲ್ಲಿ ಸಭೆಗಳು ನಡೆದಿವೆ ಎಂಬುದನ್ನು ತಿಳಿಸುತ್ತೇನೆ. ಬಿಜೆಪಿಯ ಇತಿಹಾಸ ಎಲ್ಲರಿಗೂ ಗೊತ್ತಿರುವ ವಿಚಾರ. ಬಿಜೆಪಿ ಇತಿಹಾಸ ನೋಡಿದಾಗ ಯಾವ ಮಟ್ಟಕ್ಕೆ ಆದರೂ ಇಳಿಯುತ್ತಾರೆ.