ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ರೈಲುಗಳಿಗೆ ಹೈಟೆಕ್ ಸ್ಪರ್ಶ
ಜನರ ಬೇಡಿಕೆಯಂತೆ ಹೊಸ ರೈಲುಗಳನ್ನು ಹಾಗೂ ಪ್ರಯಾಣಿಕರಿಗೆ ತಕ್ಕಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ ರೈಲುಗಳಿಗೆ ಹೈಟೆಕ್ ಸ್ಪರ್ಶ ನೀಡಿ ಹೊಸ ಮೈಲುಗಲ್ಲನ್ನು ಸೃಷ್ಟಿ ಮಾಡಿದ್ದಾರೆಂದರು.ಆಲ್ಲದೆ ಆಡಳಿತದಲ್ಲಿ ಪಾರದರ್ಶಕ ಮಾಡಿ ಸರ್ಕಾರದ ಎಲ್ಲಾ ಯೋಜನೆಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಸಂದಾಯವಾಗುವಂತೆ ಮಾಡಿದ್ದಾರೆ.ಪ್ರಪಂಚದಲ್ಲೆ ಅತ್ಯಂತ ವ್ಯವಸ್ಥಿತವಾದ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ದಿಗೊಳಿಸಲು ಮೋದಿ ಸಂಕಲ್ಪ ಮಾಡಿದ್ದು ಮುಂದಿನ ೫ ವರ್ಷಗಳಲ್ಲಿ ಯಾರೂ ಕಲ್ಪನೆ ಮಾಡದ ರೀತಿಯಲ್ಲಿ ಅಭಿವೃದ್ದಿಗೊಳಿಸುವರು. ಈ ಹಿಂದೆ ಜಿಲ್ಲೆಯ ಸಂಸದರೇ ರೈಲ್ವೆ ಸಚಿವರಾಗಿದ್ದರೂ ಜಿಲ್ಲೆಗೆ ಅವರ ಕೊಡುವೆ ಶೂನ್ಯ, ಆದರೆ ಪ್ರಧಾನಿ ಮೋಡಿ ಆಡಳಿತ ಪ್ರಪಂಚ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ್ದಾರೆ ಎಂದರು.
ಪ್ರಧಾನಿ ಮೋದಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತದಿಂದ ಮೂರನೇ ಬಾರಿಯೂ ಮೋದಿರವರೇ ಪ್ರಧಾನಿ ಆಗುವುದು ಖಚಿತ. ಬಿಜೆಪಿ ಟಿಕೆಟ್ ಯಾರಿಗೆ ನೀಡಿದರೂ ಜಿಲ್ಲೆಯ ಜನರು ಗೊಂದಲವಿಲ್ಲದೆ ಬೆಂಬಲಿಸಬೇಕು. ಕ್ಷೇತ್ರದಲ್ಲಿ ಕೆಲಸ ಮಾಡಿರುವವರನ್ನು ಮೋದಿ ಎಂದಿಗೂ ಕೈಬಿಡಲ್ಲ ಎನ್ನುವ ಮೂಲಕ ಮೈತ್ರಿ ಅಭ್ಯರ್ಥಿ ತಾವೇ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು. ಮೋದಿ ಕೈಬಲಪಡಿಸಲು ಮೈತ್ರಿ ಅಭ್ಯರ್ಥಿಗೆ ಮತ ನೀಡಬೇಕೆಂದರು.
ಈ ವೇಳೆ ಎಂಎಲ್‌ಸಿ ಇಂಚರ ಗೋವಿಂದರಾಜು, ಪಕ್ಷದ ಮುಖಂಡರಾದ ಕೆ.ಚಂದ್ರಾರೆಡ್ಡಿ,ಮಾಜಿ ಶಾಸಕ ಎಂ.ನಾರಾಯಣಸ್ವಾಮಿ,ಬಿ.ವಿ,ಮಹೇಶ್,ಮಂಡಲ ಅಧ್ಯಕ್ಷ ಸಂಪಂಗಿರೆಡ್ಡಿ, ಪುರಸಭೆ ಸದಸ್ಯ ಕಪಾಲಿಶಂಕರ್, ವಿ.ಶೇಷು, ನಿವೃತ್ತ ಡಿವೈಎಸ್‌ಪಿ ಶಿವಕುಮಾರ್, ಹೊಸರಾಯಪ್ಪ, ಅಮರೇಶ್, ಶ್ರೀನಿವಾಸಗೌಡ ಮತ್ತಿತರರು ಇದ್ದರು.