ನಾನು ಸತ್ತಾಗ ಮಣ್ಣು ಹಾಕಲು ಬನ್ನಿ: ಖರ್ಗೆ ಭಾವುಕ ನುಡಿ

Published : Apr 25, 2024, 07:50 AM IST
Mallikarjun Kharge

ಸಾರಾಂಶ

‘ಒಂದು ವೇಳೆ ನಮಗೆ (ಕಾಂಗ್ರೆಸ್‌ಗೆ) ಮತ ಹಾಕಲು ನಿಮಗೆ ಮನಸ್ಸಿಲ್ಲದಿದ್ದರೆ ಕನಿಷ್ಠ ಪಕ್ಷ ನಾನು ಸತ್ತಾಗ ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ’ ಎಂದು ಎಐಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾವುಕರಾಗಿ ನುಡಿದಿದ್ದಾರೆ.

ಕಲಬುರಗಿ: ‘ಒಂದು ವೇಳೆ ನಮಗೆ (ಕಾಂಗ್ರೆಸ್‌ಗೆ) ಮತ ಹಾಕಲು ನಿಮಗೆ ಮನಸ್ಸಿಲ್ಲದಿದ್ದರೆ ಕನಿಷ್ಠ ಪಕ್ಷ ನಾನು ಸತ್ತಾಗ ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ’ ಎಂದು ಎಐಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾವುಕರಾಗಿ ನುಡಿದಿದ್ದಾರೆ.

ಕಲಬುರಗಿ ಜಿಲ್ಲೆ ಅಫಜಲ್ಪುರದಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್‌ ಸಭೆಯಲ್ಲಿ ಅವರು ಮಾತನಾಡಿ, ನಾನು ಈ ಭಾಗಕ್ಕೆ ಇಷ್ಟೆಲ್ಲ ಅಭಿವೃದ್ಧಿ ಕೆಲಸ ಮಾಡಿದರೂ ನಮಗೆ ಜನ ಬೆಂಬಲ ಸಿಗೋದಿಲ್ಲ ಅಂದರೆ ಹೇಗೆ? ಒಂದು ವೇಳೆ ನಾನು ಕಲಬುರಗಿಯ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆಂದು ನೀವು ಭಾವಿಸಿದ್ದರೆ ಕನಿಷ್ಠ ಪಕ್ಷ ನಾನು ಸತ್ತಾಗ ಸುಟ್ಟರೆ ಮೇಣದ ಬತ್ತಿ ಹಚ್ಚೋಕೆ, ಹೂಳಿದ್ರೆ ಮಣ್ಣು ಹಾಕೋಕಾದರೂ ಬನ್ನಿ ಎಂದು ಹೇಳಿದರು.

ನಾನು ಆಗ್ತೇನೆಂದು ಗೆಲ್ಲಿಸಿದ್ದೀರಿ, ನಿಮ್ಮ ನಂಬಿಕೆಗೆ ಮೋಸ ಆಗದು: ಡಿಕೆಶಿ

ಕನಕಪುರ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿ ಹುದ್ದೆ ಆಸೆ ಬಿಚ್ಚಿಟ್ಟಿದ್ದಾರೆ. ‘ನಾನು ಮುಖ್ಯಮಂತ್ರಿ ಆಗುತ್ತೇನೆಂಬ ನಂಬಿಕೆಯಿಂದ ಮತ ಹಾಕಿ ಗೆಲ್ಲಿಸಿದ್ದೀರಿ. ಈ ವಿಚಾರದಲ್ಲಿ ಯಾರೂ ಹತಾಶರಾಗಬೇಡಿ. ನಿಮ್ಮ ನಂಬಿಕೆಗೆ ಮೋಸ ಆಗಲ್ಲ. ಕಾಂಗ್ರೆಸ್‌ ಪಕ್ಷ ಯಾವಾಗ ಏನು ಮಾಡಬೇಕೋ ಅದನ್ನು ಮಾಡುತ್ತದೆ’ ಎಂದು ಹೇಳಿದ್ದಾರೆ

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ