ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‌ಗೆ ನಟ ಚಿರಂಜೀವಿ ಚಿತ್ರದಲ್ಲಿ ನಟಿಸಲು ಆಫರ್‌

Published : Aug 31, 2024, 07:34 AM IST
Pradeep eshwar

ಸಾರಾಂಶ

ಚುನಾವಣೆ ವೇಳೆ ತಮ್ಮ ವಿಭಿನ್ನ ಶೈಲಿಯ ಡೈಲಾಗ್‌ಗಳಿಂದಾಗಿ ರಾಜ್ಯದ ಗಮನ ಸೆಳೆದಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಇದೀಗ ತೆಲುಗಿನ ಖ್ಯಾತ ನಟ ಚಿರಂಜೀವಿ ಜೊತೆ ನಟಿಸಲು ಆಫರ್​ ಬಂದಿದೆಯಂತೆ.

ಚಿಕ್ಕಬಳ್ಳಾಪುರ: ಚುನಾವಣೆ ವೇಳೆ ತಮ್ಮ ವಿಭಿನ್ನ ಶೈಲಿಯ ಡೈಲಾಗ್‌ಗಳಿಂದಾಗಿ ರಾಜ್ಯದ ಗಮನ ಸೆಳೆದಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಇದೀಗ ತೆಲುಗಿನ ಖ್ಯಾತ ನಟ ಚಿರಂಜೀವಿ ಜೊತೆ ನಟಿಸಲು ಆಫರ್​ ಬಂದಿದೆಯಂತೆ. 

ಚಿರಂಜೀವಿ ಅವರು ಸಾಮಾಜಿಕ ಕ್ರಾಂತಿಯ ಚಲನಚಿತ್ರವೊಂದಕ್ಕೆ ಬಣ್ಣ ಹಚ್ಚಲು ಸಿದ್ಧರಾಗಿದ್ದಾರಂತೆ. ಆ ಸಿನಿಮಾದ ನಿರ್ದೇಶಕರೇ ಕರೆ ಮಾಡಿ ಈ ಆಫರ್‌ ನೀಡಿದ್ದಾರೆಂದು ಪ್ರದೀಪ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. 

ಆದರೆ ಈ ಆಫರ್‌ ಒಪ್ಪಿಕೊಳ್ಳುವ ಕುರಿತು ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದಿದ್ದಾರೆ. ತೆಲಂಗಾಣದಲ್ಲಿ ಕಳೆದ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಪ್ರದೀಪ್‌, ಚಿರಂಜೀವಿ ಅವರ ಕೆಲ ಡೈಲಾಗ್‌ಗಳನ್ನು ಹೇಳಿ ಜನರ ಗಮನ ಸೆಳೆದಿದ್ದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಕುಟುಂಬ ರಾಜಕೀಯದಲ್ಲಿ ಕರ್ನಾಟಕ ದೇಶಕ್ಕೇ ನಂ.4!