ರಾಹುಲ್ ಗಾಂಧಿ ಯುಗ ಆರಂಭ: ಮೋದಿ ವರ್ಚಸ್ಸು ಮುಗಿದಿದೆ - ಸರ್ಕಾರ ಪತನ - ಕೆ ಜೆಜಾರ್ಜ್ ಭವಿಷ್ಯ

KannadaprabhaNewsNetwork |  
Published : Aug 31, 2024, 01:31 AM ISTUpdated : Aug 31, 2024, 04:23 AM IST
೩೦ಕೆಎಲ್‌ಆರ್-೧ಕೋಲಾರದ ಜಿಲ್ಲಾ ಕಾಂಗ್ರೆಸ್ ಕಚೇರಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿದರು. | Kannada Prabha

ಸಾರಾಂಶ

ಬಿಜೆಪಿ ನೂರು ಸುಳ್ಳು ಹೇಳಿ ಒಂದು ಸತ್ಯ ಮಾಡಲು ಹೊರಟಿದೆ, ಮೋದಿ ವರ್ಚಸ್ಸು ಮುಗಿದಿದೆ, ರಾಹುಲ್ ಗಾಂಧಿಗೆ ಒಳ್ಳೆಯ ಕಾಲ ಬರಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.

 ಕೋಲಾರ :  ಬಿಜೆಪಿ ನೂರು ಸುಳ್ಳುಗಳನ್ನು ಹೇಳಿ ಒಂದು ಸತ್ಯ ಮಾಡಲು ಹೊರಟಿದೆ. ಈಗಾಗಲೇ ಮೋದಿ ವರ್ಚಸ್ಸು ಮುಗಿದಿದೆ, ಇನ್ನೂ ನಾಲ್ಕು ತಿಂಗಳಲ್ಲಿ ಕೇಂದ್ರ ಸರ್ಕಾರವು ಪತನವಾಗಿ ಮೋದಿ ಅಧಿಕಾರ ಕಳೆದುಕೊಳ್ಳಲಿದ್ದು, ರಾಹುಲ್ ಗಾಂಧಿಗೆ ಒಳ್ಳೆಯ ಕಾಲ ಬರಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜ್ಯ ಕಾಂಗ್ರೆಸ್‌ ಒಳ್ಳೆಯ ಕಾರ್ಯಕ್ರಮ ಕೊಟ್ಟಿದ್ದೇವೆ, ಬಿಜೆಪಿಯಂತೆ ಕೋಮುಭಾವನೆ ಹಾಗೂ ಜಾತಿ ಧರ್ಮಗಳ ಗಲಾಟೆಯ ಮೂಲಕ ರಾಜಕಾರಣ ಮಾಡಲ್ಲ. ಜಾಸ್ತಿ ದಿನ ಅಂತಹ ರಾಜಕಾರಣ ಉಳಿಯಲ್ಲ. ಜನರ ಆಶೀರ್ವಾದ ಕಾಂಗ್ರೆಸ್‌ಗೆ ಇದ್ದು ಕಾರ್ಯಕರ್ತರಿಗೂ ಒಳ್ಳೆಯ ಅವಕಾಶ ಸಿಗಲಿದೆ ಎಂದು ಹೇಳಿದರು.ಕಾಂಗ್ರೆಸ್‌ ಬಗ್ಗೆ ಜನತೆಗೆ ವಿಶ್ವಾಸ

ಕಾಂಗ್ರೆಸ್ ಸುಮಾರು 70 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಅವಧಿಯಲ್ಲಿ ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಕಾಣಿಕೆ ಅಪಾರವಾಗಿದೆ, ಕಾಂಗ್ರೆಸ್‌ ಬಿಜೆಪಿಯಂತೆ ನೇರವಾಗಿ ಅಧಿಕಾರಕ್ಕೆ ಬಂದಿಲ್ಲ ಮುಂದೆ ಸಹ ಕಾಂಗ್ರೆಸ್ ಪಕ್ಷದೊಂದಿಗೆ ಜನರ ವಿಶ್ವಾಸ ಇದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದೆ ಎಂದು ವಿವರಿಸಿದರು.ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳವಾಗಿದ್ದು, ಕಾರ್ಯಕರ್ತರಿಂದ ನಾವು ಎಲ್ಲರೂ ನಾಯಕರಾಗಿದ್ದೇವೆ ಇಲ್ಲಿಗೆ ಬಂದಿದ್ದೇನೆ, ಪಕ್ಷಕ್ಕಾಗಿ ದುಡಿದವರಿಗೆ ಹಂತಹಂತವಾಗಿ ಅವಕಾಶಗಳು ಸಿಗಲಿದೆ, ಅಧಿಕಾರಕ್ಕಾಗಿ ಪಕ್ಷ ಅಲ್ಲ ಅನ್ನೋದು ತಿಳಿಯಬೇಕು, ಜನರ ಹಿತಕ್ಕಾಗಿ ಪಕ್ಷವಾಗಬೇಕು ತಾಳ್ಮೆಯಿಂದ ಇದ್ದರೆ ಖಂಡಿತವಾಗಿಯೂ ಅವಕಾಶಗಳು ಸಿಗಲಿದೆ ಎಂದರು.ಕಾರ್ಯಕರ್ತರಿಗೆ ಅವಕಾಶ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಮಾತನಾಡಿ, ಕಾಂಗ್ರೆಸ್‌ನಲ್ಲಿ ನಿಷ್ಠಾವಂತರಾಗಿದ್ದರೆ, ಒಂದಲ್ಲ ಒಂದು ದಿನ ಅವಕಾಶಗಳು ಸಿಗಲಿದೆ ಎಂಬುದಕ್ಕೆ ಸಚಿವ ಕೆ.ಜೆ.ಚಾರ್ಜ್ ಉದಾಹರಣೆ. ಯುವ ಕಾಂಗ್ರೆಸ್ ಬ್ಲಾಕ್ ಮಟ್ಟದಿಂದ ರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡಿದ್ದು ಅವರಿಗೆ ಅವಕಾಶಗಳು ಬಂದಿವೆ, ದೇಶದಲ್ಲಿ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಜನಪರ ಕಾರ್ಯಕ್ರಮ ನೋಡಿ ಸಾಕಷ್ಟು ನಾಯಕರು ಕಾಂಗ್ರೆಸ್ ಪಕ್ಷ ಸೇರಲು ಪ್ರಮುಖ ಕಾರಣವಾಗಿ ಅಧಿಕಾರವಿರಲಿ ಇಲ್ಲದಿರಲಿ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಎಂದು ತಿಳಿಸಿದರು.ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಕೋಲಾರ ಜಿಲ್ಲೆಯ ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕೆ ಗಮನ ಹರಿಸಲು ಸಚಿವರನ್ನು ಕರೆಸಲಾಗಿದೆ, ಜಿಲ್ಲೆಯಲ್ಲಿ ಹೊಸದಾಗಿ ಪವರ್ ಕೇಂದ್ರಗಳ ಸ್ಥಾಪನೆಗೆ ಒತ್ತು ನೀಡಿ ರೈತರ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದರು.ತಾಳ್ಮೆ, ನಿಷ್ಠೆ ಇರಬೇಕು

ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ವೇಗವಾಗಿ ನಾಯಕ ಅಂತ ಗುರುತಿಸಿಕೊಂಡು ಅವಕಾಶಗಳಿಗಾಗಿ ಬರತ್ತಾರೆ ಪಕ್ಷದ ನಾಯಕನು ಎನಿಸಿಕೊಂಡವರಿಗೆ ಪಕ್ಷದ ಬಗ್ಗೆ ನಿಷ್ಠೆ ತಾಳ್ಮೆ ಇರಬೇಕು, ಕಾಂಗ್ರೆಸ್ ಸರಕಾರವಿದೆ ಒಳ್ಳೆಯ ದಿನಗಳು ಬಂದಿವೆ ಅವಕಾಶಗಳು ಎಲ್ಲರಿಗೂ ಸಿಗುತ್ತವೆ ಎಂದರು.ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಕೆ.ವಿ.ಗೌತಮ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್ ಬಾಬು, ಸೀಸಂದ್ರ ಗೋಪಾಲಗೌಡ, ಪದವೀಧರ ಘಟಕದ ಜಿಲ್ಲಾ ಅಧ್ಯಕ್ಷ ಪಿ.ಎಸ್ ಸುಧೀರ್, ಮುಖಂಡರಾದ ಜಯದೇವ್, ರವಿರಾಮಸ್ವಾಮಿ, ಓಬಿಸಿ ಮಂಜುನಾಥ್, ರತ್ನಮ್ಮ, ಮೈಲಾಂಡಹಳ್ಳಿ ಮುರಳಿ, ಅಶ್ವಥ್‌ರೆಡ್ಡಿ, ರಾಮಯ್ಯ ಇದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’