ಮೋದಿ ಅನ್ನೋರಿಗೆ ಬಾರಿಸಿ ಎಂದಿದ್ದ ತಂಗಡಗಿ ಎದುರೇ ಮೋದಿ ಘೋಷಣೆ!

KannadaprabhaNewsNetwork |  
Published : Apr 01, 2024, 12:49 AM ISTUpdated : Apr 01, 2024, 06:06 AM IST
31ಕೆಎನ್ಕೆ-1ಸಚಿವ ತಂಗಡಗಿ ಎದುರೆ ಯುವಕರು ಮೋದಿ ಮೋದಿ ಎಂದು ಕೂಗುತ್ತಿರುವುದು.   | Kannada Prabha

ಸಾರಾಂಶ

ಲ ದಿನಗಳ ಹಿಂದೆ ಮೋದಿ... ಮೋದಿ... ಎನ್ನುವವರ ಕಪಾಳಕ್ಕೆ ಬಾರಿಸಿ ಎಂದಿದ್ದ ಸಚಿವ ಶಿವರಾಜ ತಂಗಡಗಿ ಎದುರೇ ಜಾತ್ರೆಯಲ್ಲಿ ಯುವಕರ ತಂಡವೊಂದು ಮೋದಿ ಮೋದಿ... ಎಂದು ಕೂಗಿದ ಘಟನೆ ಕನಕಗಿರಿಯಲ್ಲಿ ಭಾನುವಾರ ನಡೆದಿದೆ.

  ಕನಕಗಿರಿ:  ಕೆಲ ದಿನಗಳ ಹಿಂದೆ ಮೋದಿ... ಮೋದಿ... ಎನ್ನುವವರ ಕಪಾಳಕ್ಕೆ ಬಾರಿಸಿ ಎಂದಿದ್ದ ಸಚಿವ ಶಿವರಾಜ ತಂಗಡಗಿ ಎದುರೇ ಜಾತ್ರೆಯಲ್ಲಿ ಯುವಕರ ತಂಡವೊಂದು ಮೋದಿ ಮೋದಿ... ಎಂದು ಕೂಗಿದ ಘಟನೆ ಕನಕಗಿರಿಯಲ್ಲಿ ಭಾನುವಾರ ನಡೆದಿದೆ. 

ಕನಕಗಿರಿಯ ಲಕ್ಷ್ಮೀ ನರಸಿಂಹ ದೇವರ ಗರುಡೋತ್ಸವದ ಮೆರವಣಿಗೆಯಲ್ಲಿ ತಂಗಡಗಿ ಕುಟುಂಬ ಸಮೇತರಾಗಿ ಭಾಗಿಯಾಗಿದ್ದರು. ದೇವರ ದರ್ಶನ ಪಡೆದು ಮುಖ್ಯದ್ವಾರದಿಂದ ಹೊರ ಬರುತ್ತಿದ್ದಂತೆ ತಂಗಡಗಿ ಅವರನ್ನು ನೋಡಿದ ಯುವಕರು ಮೋದಿ... ಮೋದಿ... ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಸಚಿವರ ಬೆಂಬಲಿಗರು ತಂಗಡಗಿ... ತಂಗಡಗಿ... ಎಂದು ಜೈಕಾರ ಹಾಕಿದರು. 

ಮೋದಿ ಮೋದಿ.. ಕೂಗು ಜೋರಾಗುತ್ತಿದ್ದಂತೆ ತಂಗಡಗಿ ಮುಗುಳ್ನಗುತ್ತಾ ಬೆಂಬಲಿಗರೊಂದಿಗೆ ಮುಂದೆ ಸಾಗಿದರು. ನಂತರ ಯುವಕರು ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ ಕೂಗಿ ಸ್ಥಳದಿಂದ ನಿರ್ಗಮಿಸಿದರು.

ಈ ಕುರಿತ ವಿಡಿಯೋ ಇದೀಗ ವೈರಲ್‌ ಆಗಿದೆ. ಇತ್ತೀಚೆಗಷ್ಟೇ ಸಚಿವ ಶಿವರಾಜ ತಂಗಡಗಿ ಮೋದಿ ಮೋದಿ ಎನ್ನುವವರ ಕಪಾಳಕ್ಕೆ ಬಾರಿಸಿ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ವೈದ್ಯಕೀಯ ಪರಿಹಾರ ನಿಧಿ ಹಣಕ್ಕೆ ಬೆಂಗಳೂರು ಪಾಲಿಕೆ ತಡೆ