ಕನ್ನಡಪ್ರಭ ವಾರ್ತೆ ಗುಡಿಬಂಡೆ
ಗುಡಿಬಂಡೆ ಪಟ್ಟಣದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದ ನಿಮಿತ್ತ ಹಮ್ಮಿಕೊಂಡಿದ್ದ ರೋಡ್ ಶೋ ವೇಳೆ ಮಾತನಾಡಿದ ಅವರು, ಮೋದಿಯವರ ಕನಸು ಸದೃಡ ಭಾರತ ನಿರ್ಮಾಣ. ವಿಕಸಿತ ಭಾರತದ ಹೆಸರಿನಲ್ಲಿ ಅವರು ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಮೋದಿಯವರ ಗ್ಯಾರಂಟಿಗಳು ದೇಶದ ಅಭಿವೃದ್ದಿಯ ಸೂಚ್ಯಂಕವಾಗಿದೆ ಎಂದರು.
ಜಿಲ್ಲೆಗೆ ಡಾ.ಸುಧಾಕರ್ ಕೊಡುಗೆರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜನ್ನು ತಂದುಕೊಟ್ಟೆ. ಹೈಟೆಕ್ ಬಸ್ ನಿಲ್ದಾಣ, ಗ್ರಂಥಾಲಯ, 67 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಆರೋಗ್ಯ ಕ್ಷೇತ್ರದಲ್ಲೂ ಅಪಾರ ಸೇವೆ ಸಲ್ಲಿಸಿದ್ದೇನೆ. ಸದ್ಯ ಕ್ಷೇತ್ರದ ಪ್ರಣಾಳಿಕೆಯನ್ನು ಸಹ ಬಿಡುಗಡೆ ಮಾಡಿದ್ದೇನೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಎಂದರು.
ಕಾಂಗ್ರೇಸ್ ಸರ್ಕಾರದ ಎಲ್ಲ ಗ್ಯಾರಂಟಿಗಳಿಂದ ರಾಜ್ಯಕ್ಕೆ ಚೊಂಬು ಸಿಕ್ಕಿದೆ. ಆದರೆ ನಮ್ಮ ಗ್ಯಾರಂಟಿಗಳಿಂದ ದೇಶ ಉದ್ದಾರ ಆಗುತ್ತದೆ. ಪ್ರತಿ ಭಾರಿ ಅಂಬೇಡ್ಕರ್ ರವರ ಜಪ ಮಾಡುವ ಕಾಂಗ್ರೆಸ್ ಅವರು ಸತ್ತಾಗ ಅವರನ್ನು ಮಣ್ಣು ಮಾಡಲು ಜಾಗ ನೀಡಿಲ್ಲ. ಆದರೆ ಮೋದಿ ರವರು ಅವರ ಜಯಂತಿಯನ್ನು ಇಡೀ ವಿಶ್ವ ಆಚರಿಸುವಂತೆ ಮಾಡಿದೆ ಎಂದರು.ಪ್ರವಾಸಿ ತಾಣವಾಗಿ ಗುಡಿಬಂಡೆ
ಗುಡಿಬಂಡೆ ತಾಲೂಕು ಕೇಂದ್ರದಲ್ಲಿ ತಾಲೂಕು ಕಚೇರಿಯ ಮುಂಭಾಗ ಬೀದಿ ದೀಪವಿಲ್ಲ. ರಸ್ತೆ ಅಗಲೀಕರಣದ ವೇಳೆ ಮನೆ ಕಳೆದುಕೊಂಡವರಿಗೆ ನಿವೇಶನ ನೀಡಿಲ್ಲ. ತಾಲೂಕನ್ನು ಸರ್ವತೋಮುಖ ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಇಲ್ಲಿನ ಶಾಸಕರು ವಿಫಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಅಮಾನಿಬೈರ ಸಾಗರ ಕೆರೆ ಅಭಿವೃದ್ದಿ, ಗುಡಿಬಂಡೆ ಬೆಟ್ಟ ಅಭಿವೃದ್ದಿ ಮಾಡುವ ಮೂಲಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ದಿ ಮಾಡುತ್ತೇನೆ. ಪ್ರಣಾಳಿಕೆಯಲ್ಲಿ ಗುಡಿಬಂಡೆ ಹೆಸರು ಸೇರಿಸಿಲ್ಲ ಎಂದು ಆರೋಪ ಮಾಡಿದ್ದಾರೆ. ಆದರೆ ಬಾಗೇಪಲ್ಲಿ ಕ್ಷೇತ್ರ ಅಂದರೇ ಗುಡಿಬಂಡೆ ಸಹ ಸೇರುತ್ತೆ ಎಂಬ ಇಂಗಿತ ಜ್ಞಾನ ಸಹ ಕಾಂಗ್ರೆಸ್ಸಿಗರಿಗಿಲ್ಲ ಎಂದು ವ್ಯಂಗವಾಡಿದರು.