ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ : ಮತ್ತಷ್ಟು ವಸ್ತುಗಳು ಪತ್ತೆ

Published : Jan 28, 2026, 09:20 AM IST
Lakkundi Excavation Site

ಸಾರಾಂಶ

ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದ 10ನೇ ದಿನವಾದ ಮಂಗಳವಾರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನದ ಪಕ್ಕದ ಕಂಬದ ತೊಲೆಯಲ್ಲಿ ಪ್ರಾಚೀನ ಶಾಸನ ಮತ್ತು ಲಿಂಗು ಆಕಾರದ ಸಣ್ಣ ಶಿಲೆ ಪತ್ತೆಯಾಗಿದೆ.

 ಗದಗ :  ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದ 10ನೇ ದಿನವಾದ ಮಂಗಳವಾರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನದ ಪಕ್ಕದ ಕಂಬದ ತೊಲೆಯಲ್ಲಿ ಪ್ರಾಚೀನ ಶಾಸನ ಮತ್ತು ಲಿಂಗು ಆಕಾರದ ಸಣ್ಣ ಶಿಲೆ ಪತ್ತೆಯಾಗಿದೆ.

35 ಕಾರ್ಮಿಕರು ಆತಂಕದಿಂದ ಕೆಲಸ

​ಗಣರಾಜ್ಯೋತ್ಸವದ ಹಿನ್ನೆಲೆ 2 ದಿನ ರಜೆ ಬಳಿಕ ಮಂಗಳವಾರ ಕಾರ್ಯಾಚರಣೆ ಆರಂಭಿಸಿದಾಗ ಉತ್ಖನನಕ್ಕೆ ಗುರುತಿಸಿದ ಸ್ಥಳದಲ್ಲಿನ 4 ಬ್ಲಾಕ್‌ಗಳ ಪೈಕಿ ಎ-1 ಹಾಗೂ ಬಿ-1 ಗುಂಡಿಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅದರಡಿಯಲ್ಲಿ 35 ಕಾರ್ಮಿಕರು ಆತಂಕದಿಂದ ಕೆಲಸ ಮಾಡುವಂತಾಗಿದೆ.

ಈವರೆಗೆ ಸುಮಾರು 7 ಅಡಿಗಳಷ್ಟು ಭೂಮಿ ಅಗೆದಿದೆ 

ಈವರೆಗೆ ಸುಮಾರು 7 ಅಡಿಗಳಷ್ಟು ಭೂಮಿ ಅಗೆದಿದ್ದು, ​ವೀರಭದ್ರೇಶ್ವರ ದೇವಸ್ಥಾನ ಹಾಗೂ ಪುಷ್ಕರಣಿ (ಕಲ್ಯಾಣಿ) ನಡುವೆ ಸಂಪರ್ಕ ಕಲ್ಪಿಸುವ ಬುನಾದಿ ಪತ್ತೆಯಾಗಿದೆ. ಇದೇ ಜಾಗದಲ್ಲಿ ಇತ್ತೀಚಿನ ದಿನಗಳಲ್ಲಿ ನೀರು ಪೂರೈಸುವ ಪೈಪ್‌ಲೈನ್ ಗೋಚರಿಸಿದ್ದು, ಈ ಜಾಗವನ್ನು ಮೊದಲೇ ಅಗೆಯಲಾಗಿತ್ತು ಎನ್ನಲಾಗುತ್ತಿದೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ರಾಮನಗರದ ಬಿಸಿ ಕಲ್ಲಿನ ಮೇಲೆ ಬರಿಗಾಲಲ್ಲಿ ‘ಶೋಲೆ’ ಡ್ಯಾನ್ಸ್‌ಗೆ ಅಮ್ಮ ಆಕ್ಷೇಪ : ಹೇಮಾಮಾಲಿನಿ