ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಜ್ಷಲ್‌ಗೆ ಹೆಚ್ಚು ಮತ : ಪ್ರೀತಂ

ಸಾರಾಂಶ

ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಗೆ ಬರುವ ಲೀಡ್ ಗಿಂತ ಒಂದು ಮತ ಹೆಚ್ಚು ಲೀಡ್ ಹಾಸನದಲ್ಲಿ ಬರಲಿದೆ. ಇದಕ್ಕಿಂತ ಇನ್ನೇನು ಹೇಳಬೇಕು ಹೇಳಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ತಿಳಿಸಿದ್ದಾರೆ.

ಮೈಸೂರು :  ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಗೆ ಬರುವ ಲೀಡ್ ಗಿಂತ ಒಂದು ಮತ ಹೆಚ್ಚು ಲೀಡ್ ಹಾಸನದಲ್ಲಿ ಬರಲಿದೆ. ಇದಕ್ಕಿಂತ ಇನ್ನೇನು ಹೇಳಬೇಕು ಹೇಳಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ತಿಳಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯುಗಾದಿ ಹಬ್ಬಕ್ಕೆ ಹಾಸನಕ್ಕೆ ಹೋಗುತ್ತೇನೆ. ನಮ್ಮ ಯಾವ ಬೆಂಬಲಿಗರೂ ಕಾಂಗ್ರೆಸ್ ಜೊತೆ ಹೋಗಿಲ್ಲ. ಈಗ ಯಾರೋ ಹೋಗಿರುವ ಒಬ್ಬಾತ ಬೂತ್ ಅಧ್ಯಕ್ಷ ಕೂಡ ಅಲ್ಲ. ಯಾರೋ ಟೀ ಕೂಡಿದ ಕೂಡಲೇ ಪ್ರಚಾರ ಪತ್ರ ಕೊಟ್ಟ ಕೂಡಲೇ ಅವರು ಕಾಂಗ್ರೆಸ್ ಆಗುವುದಿಲ್ಲ ಎಂದರು.

ನಾನೇ ಕಾಂಗ್ರೆಸ್ ನವರನ್ನು ಇಲ್ಲಿಗೆ ಕರೆದುಕೊಂಡು ಬರುವ ಪ್ರಯತ್ನ ಮಾಡುತ್ತಿದ್ದೇನೆ. ಯಾರೂ ಇಲ್ಲಿಂದ ಅಲ್ಲಿಗೆ ಹೋಗೊ ಪ್ರಶ್ನೆ ಬರಲ್ಲ. ಎನ್‌ಡಿಎ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ. ಎಲ್ಲರನ್ನೂ ಗೆಲ್ಲಿಸುತ್ತೇವೆ ಎಂದು ತಿಳಿಸಿದರು.

 

Share this article