ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮುಂದೆಯೇ ಕೈ ಬಗ್ಗೆ ನಾಯಕಿ ಮೋಟಮ್ಮ ಬೇಸರ

Published : Oct 18, 2024, 01:05 PM IST
Siddu Motamma

ಸಾರಾಂಶ

‘ಕೆಪಿಸಿಸಿಗೆ ಐದು ಮಂದಿ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿದ್ದೀರಿ. ಅದರಲ್ಲಿ ಒಬ್ಬ ಮಹಿಳೆಗೂ ಅವಕಾಶ ನೀಡಿಲ್ಲ. ಮಹಿಳೆಯರು ಸಮರ್ಥರಿಲ್ಲವೇ? ಮಹಿಳೆಯರನ್ನು ಕರಿಬೇವು ರೀತಿ ಮಾಡಬೇಡಿ’ ಎಂದು ಮಾಜಿ ಸಚಿವೆ ಮೋಟಮ್ಮ ಅವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಬೆಂಗಳೂರು : ‘ಕೆಪಿಸಿಸಿಗೆ ಐದು ಮಂದಿ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿದ್ದೀರಿ. ಅದರಲ್ಲಿ ಒಬ್ಬ ಮಹಿಳೆಗೂ ಅವಕಾಶ ನೀಡಿಲ್ಲ. ಮಹಿಳೆಯರು ಸಮರ್ಥರಿಲ್ಲವೇ? ಮಹಿಳೆಯರನ್ನು ಕರಿಬೇವು ರೀತಿ ಮಾಡಬೇಡಿ’ ಎಂದು ಮಾಜಿ ಸಚಿವೆ ಮೋಟಮ್ಮ ಅವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

 ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಸೌಮ್ಯಾರೆಡ್ಡಿ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಸಮ್ಮುಖದಲ್ಲೇ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆಗೆ ಟಿಕೆಟ್ ಕೇಳಲು ಹೋದರೆ ಹಣ ಇದೆಯೇ? ನಿಮ್ಮ ಗಂಡ ಹಣ ಖರ್ಚು ಮಾಡುತ್ತಾರಾ ಎಂದು ಕೇಳುತ್ತಾರೆ. ಶಾಸ್ತ್ರಕ್ಕೆ ಎಂದು ಒಬ್ಬ ಮಹಿಳೆಯನ್ನು ಸಚಿವರನ್ನಾಗಿ ಮಾಡಿದ್ದೀರಿ. ಮಹಿಳೆಯರಿಗೆ ಗೌರವ ನೀಡಬೇಕು. ಮಹಿಳೆಯರೂ ಮುಂದೆ ಬರಬೇಕು ಎಂದರು.

ನಾನು ರಾಜ್ಯದ ಎಲ್ಲಾ ನಾಯಕರಿಗೂ ಇದನ್ನು ಕೇಳುತ್ತಿದ್ದೇನೆ. ಕೆಪಿಸಿಸಿಗೆ ಐದು ಮಂದಿ ಕಾರ್ಯಾಧ್ಯಕ್ಷರನ್ನು ಮಾಡಿದ್ದೀರಿ. ಅದರಲ್ಲಿ ಒಬ್ಬರಿಗಾದರೂ ಮಹಿಳೆಯರಿಗೆ ಅವಕಾಶ ಕೊಡಬಾರದಿತ್ತೇ? ಯಾಕೆ ಮಹಿಳೆಯರು ಸಮರ್ಥರಿಲ್ಲವೇ? ಎಂದು ಪ್ರಶ್ನಿಸಿದರು.

PREV

Recommended Stories

ಭಯಪಟ್ಟು ಮಾಡಿರುವ ಪಾತ್ರ ನನ್ನದು : ಪ್ರಜ್ವಲ್ ದೇವರಾಜ್
ಸ್ಪೀಕರ್ ವಿರುದ್ಧ ಹೊರಟ್ಟಿ ಸಿಟ್ಟು : ಅಸಮಾಧಾನಕ್ಕೆ ಪತ್ರದಲ್ಲಿ ಖಾದರ್‌ ಸ್ಪಷ್ಟನೆ