ನನ್ನ ಗೆಲುವಿಗೆ ಬಿಎಸ್‌ವೈ ಶ್ರಮವಿದೆ - ಅವರು 3 ಬಾರಿ ಚುನಾವಣಾ ಪ್ರಚಾರಕ್ಕೆ ಬಂದಿದ್ದರು : ಕಾರಜೋಳ

ಸಾರಾಂಶ

‘ನನ್ನ ಗೆಲುವಿಗೆ ಯಡಿಯೂರಪ್ಪ ಅವರ ಶ್ರಮವಿದೆ. ಎಲ್ಲರೂ ಸೇರಿ ಪ್ರಯತ್ನ ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ. ನನ್ನ ಗೆಲುವಿಗೆ ಎಲ್ಲ ಕಾರ್ಯಕರ್ತರು, ವರಿಷ್ಠರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ’ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.

ವಿಜಯಪುರ : ‘ನನ್ನ ಗೆಲುವಿಗೆ ಯಡಿಯೂರಪ್ಪ ಅವರ ಶ್ರಮವಿದೆ. ಎಲ್ಲರೂ ಸೇರಿ ಪ್ರಯತ್ನ ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ. ನನ್ನ ಗೆಲುವಿಗೆ ಎಲ್ಲ ಕಾರ್ಯಕರ್ತರು, ವರಿಷ್ಠರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ’ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.

ಚಿತ್ರದುರ್ಗದಲ್ಲಿ ಯಡಿಯೂರಪ್ಪ ಅವರಿಂದ ಗೋವಿಂದ ಕಾರಜೋಳರನ್ನು ಸೋಲಿಸಲು ಯತ್ನ ನಡೆದಿತ್ತು ಎಂಬ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಆರೋಪ ಕುರಿತು ಪ್ರತಿಕ್ರಿಯಿಸಿ, ಯಡಿಯೂರಪ್ಪನವರು ಮೂರು ಬಾರಿ ಚುನಾವಣಾ ಪ್ರಚಾರಕ್ಕೆ ಬಂದಿದ್ದರು. ನನ್ನ ಗೆಲುವಿಗೆ ಯಡಿಯೂರಪ್ಪ ಅವರ ಪ್ರಯತ್ನ ಬಹಳ ಇದೆ. ಚಿತ್ರದುರ್ಗದಲ್ಲಿ ಯಾರನ್ನೂ ಅಧ್ಯಕ್ಷರನ್ನಾಗಿ ಮಾಡಿಲ್ಲ, ಹಿಂದಿನ ಅಧ್ಯಕ್ಷರಾದ ಮುರುಳಿಯವರೇ ಈಗಲೂ ಅಧ್ಯಕ್ಷರು. ಜಿಲ್ಲಾಧ್ಯಕ್ಷರು ನನ್ನ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ, ಒಳ್ಳೆಯ ಮನುಷ್ಯ ಎಂದು ಹೇಳಿದರು.

ಆದರೆ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಚಾಟನೆ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

Share this article