ನವದೆಹಲಿ: ‘ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಕೂಟ ಗೆಲುವು ಸಾಧಿಸಿರುವುದು ಕಳೆದ 10 ವರ್ಷದಿಂದ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಜನರು ನೀಡಿರುವ ಆಶೀರ್ವಾದ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
‘ಈ ಗೆಲುವು ಕಳೆದ 23 ವರ್ಷಗಳಲ್ಲಿ ಒಂದು ದಿನವೂ ಬಿಡುವು ಇರದೇ ತನ್ನ ಬಗ್ಗೆ ಕಾಳಜಿ ವಹಿಸದೇ ದೇಶ ಮತ್ತು ದೇಶವಾಸಿಗಳ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಮೋದಿಯವರ ಜಯ. ಮೂರನೇ ಗೆಲುವು ಪ್ರಧಾನಿ ಮೋದಿಯವರ ಮೇಲೆ ಜನರಿಗಿರುವ ವಿಶ್ವಾಸ.
ಎನ್‌ಡಿಎ ಈ ಗೆಲುವು ದೇಶಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ನರೇಂದ್ರ ಮೋದಿ ಜೀ ಅವರ ನಾಯಕತ್ವದಲ್ಲಿ ಜನರ ಅಚಲವಾದ ನಂಬಿಕೆಯ ಪ್ರತಿಬಿಂಬ.’ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೂರನೇ ಬಾರಿಗೆ ಎನ್‌ಡಿಎ ಕೂಟ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಕಾರಣೀಕರ್ತರಾದ ಮತದಾರರಿಗೆ ಇದೇ ಸಂದರ್ಭದಲ್ಲಿ ಅಮಿತ್ ಶಾ ಧನ್ಯವಾದ ಸಲ್ಲಿಸಿದರು.‘ ಬಿಜೆಪಿಗೆ ಕಾರ್ಯಕರ್ತರೇ ಬಹುದೊಡ್ಡ ಆಸ್ತಿ. ಮನೆ ಮನೆ, ಬೀದಿ ಬೀದಿಗಳಲ್ಲಿ, ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ತೆರಳಿ ಮೋದಿಯವರಿಗಾಗಿ ಮತ ಕೇಳಿದ್ದೀರಿ. ನಿಮ್ಮ ಶ್ರಮ ನಿಜಕ್ಕೂ ಶ್ಲಾಘನೀಯ. ಕೃತಜ್ಞಪೂರ್ವಕವಾಗಿ ಅಭಿನಂದಿಸುತ್ತೇನೆ’. ಎಂದಿದ್ದಾರೆ.
ನರೇಂದ್ರ ಮೋದಿ ಅವಿರತ ಶ್ರಮಕ್ಕೆ ಸಿಕ್ಕ ಗೆಲುವುಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಕೂಟ ಗೆಲುವು ಸಾಧಿಸಿರುವುದು ಕಳೆದ 10 ವರ್ಷದಿಂದ ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಜನರು ನೀಡಿರುವ ಆಶೀರ್ವಾದ. ಬಿಜೆಪಿಗೆ ಕಾರ್ಯಕರ್ತರೇ ಬಹುದೊಡ್ಡ ಆಸ್ತಿ. ಮನೆ ಮನೆ, ಬೀದಿ ಬೀದಿಗಳಲ್ಲಿ, ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ತೆರಳಿ ಮೋದಿಯವರಿಗಾಗಿ ಮತ ಕೇಳಿದ್ದೀರಿ. ನಿಮ್ಮ ಶ್ರಮ ನಿಜಕ್ಕೂ ಶ್ಲಾಘನೀಯ. ಕೃತಜ್ಞಪೂರ್ವಕವಾಗಿ ಅಭಿನಂದಿಸುತ್ತೇನೆ.-ಅಮಿತ್ ಶಾ, ಕೇಂದ್ರ ಗೃಹ ಸಚಿವ