ನಮ್ಮನ್ನು ರಕ್ಷಿಸಿದ್ದು ನೆಹರು, ಪಟೇಲ್‌, ಸೇನೆ: ಪ್ರಿಯಾಂಕ್‌

Published : Aug 16, 2026, 07:37 AM IST
Priyank Kharge

ಸಾರಾಂಶ

ಹೈದರಾಬಾದ್‌ ನಿಜಾಮ್‌ ಕಾಲದಲ್ಲಿ ‘ಆಪರೇಷನ್‌ ಪೋಲೋ’ ನಡೆಸಿ ನಮ್ಮ ಕುಟುಂಬವನ್ನು ರಕ್ಷಿಸಿದ್ದು ಜವಾಹರಲಾಲ್‌ ನೆಹರು, ಸರ್ದಾರ್‌ ವಲ್ಲಭಭಾಯಿ ಪಟೇಲ್‌, ಭಾರತೀಯ ಸೇನೆಯೇ ಹೊರತು ಬೇರೆ ಇನ್ನಾರೂ ಅಲ್ಲ.

ಕಲಬುರಗಿ : ಹೈದರಾಬಾದ್‌ ನಿಜಾಮ್‌ ಕಾಲದಲ್ಲಿ ‘ಆಪರೇಷನ್‌ ಪೋಲೋ’ ನಡೆಸಿ ನಮ್ಮ ಕುಟುಂಬವನ್ನು ರಕ್ಷಿಸಿದ್ದು ಜವಾಹರಲಾಲ್‌ ನೆಹರು, ಸರ್ದಾರ್‌ ವಲ್ಲಭಭಾಯಿ ಪಟೇಲ್‌, ಭಾರತೀಯ ಸೇನೆಯೇ ಹೊರತು ಬೇರೆ ಇನ್ನಾರೂ ಅಲ್ಲ. ಸುಮ್ಮನೆ ಬುರುಡೆ ಬಿಟ್ಟರೆ ಯಾರೂ ಕೇಳುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರಿಗೆ ತಿರುಗೇಟು ನೀಡಿದ್ದಾರೆ.

ಆರ್‌ಎಸ್‌ಎಸ್‌ ನೋಂದಣಿಯಾಗಿಲ್ಲ

ಆರ್‌ಎಸ್‌ಎಸ್‌ ನೋಂದಣಿಯಾಗಿಲ್ಲ. ಹೀಗಾಗಿ ಆ ಸಂಘಟನೆಯನ್ನು ನಿಷೇಧ ಮಾಡಲು ಆಗುವುದಿಲ್ಲ. ಕೇಳಿದರೆ, ಸಾಂಸ್ಕೃತಿಕ ಸಂಘ ಎನ್ನುತ್ತಾರೆ. ಪ್ರಶ್ನಿಸಿದರೆ ನಾಶವಾಗ್ತೀರಿ, ಮನೆಯಿಂದ ಹೊರಗಡೆ ಬರೋಕೆ ಆಗಲ್ಲ ಅಂತ ಬೆದರಿಕೆ ಹಾಕುತ್ತಾರೆ. ಬಿಜೆಪಿ ನಾಯಕರ ಯಾವ ಮಕ್ಕಳು ಪೂರ್ಣಾವಧಿ ಆರೆಸ್ಸೆಸ್‌ ಶಾಖೆಗೆ ಹೋಗುತ್ತಾರೆ ಹೇಳಲಿ ಎಂದು ಸವಾಲು ಹಾಕಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರ, ನಿಜಾಮ್ ಕಾಲದಲ್ಲಿ ದೌರ್ಜನ್ಯ ನಡೆಯುತ್ತಿದ್ದಾಗ ಖರ್ಗೆ ಅವರ ಕುಟುಂಬವನ್ನು ರಕ್ಷಣೆ ಮಾಡಿದ್ದು ಆರೆಸ್ಸೆಸ್‌ ಎಂಬ ಸಂತೋಷ್‌ ಹೇಳಿಕೆಯನ್ನು ತಿರಸ್ಕರಿಸಿದರು. ಸಂತೋಷ್‌ ಅವರಿಗೆ ಇತಿಹಾಸ ಗೊತ್ತಿಲ್ಲ. ಇವರೆಲ್ಲ ವಾಟ್ಸಾಪ್‌ ಯೂನಿವರ್ಸಿಟಿ ಪ್ರಾಡಕ್ಟ್‌ಗಳು. ಇನ್ನೂ ಏನೇನು ಕೇಳಬೇಕೋ ಎಂದು ಲೇವಡಿ ಮಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ಸಂಘದ 50 ಜನರ ಹೆಸರು ಕೊಡಲಿ ನೋಡೋಣ ಎಂದು ಸವಾಲು ಹಾಕಿದರು. ತಾವು ಬೇಕಾದರೆ ಕಾಂಗ್ರೆಸ್‌ನ 500 ಕ್ಕೂ ಹೆಚ್ಚು ಜನ ಹುತಾತ್ಮರಾದವರ ಹೆಸರು ಕೊಡಬಲ್ಲೆ ಎಂದರು.

ನಿಜಾಮರ ದೌರ್ಜನ್ಯದಿಂದ ಖರ್ಗೆ ಕುಟುಂಬ ರಕ್ಷಿಸಿದ್ದು ಆರ್‌ಎಸ್‌ಎಸ್‌: ಬಿ.ಎಲ್‌.ಸಂತೋಷ್‌

ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಗೃಹ ಸಚಿವ ಪ್ರಿಯಾಂಕ್‌ ತಿರುಗೇಟು

ನಮ್ಮ ಕುಟುಂಬ ರಕ್ಷಿಸಿದ್ದು ನೆಹರೂ, ಪಟೇಲ್‌, ಭಾರತೀಯ ಸೇನೆಯೇ ಹೊರತೂ ಮತ್ಯಾರೂ ಅಲ್ಲ

ಸಂತೋಷ್‌ ಅವರಿಗೆ ಇತಿಹಾಸ ಗೊತ್ತಿಲ್ಲ. ಇವರೆಲ್ಲಾ ವಾಟ್ಸಾಪ್‌ ಯೂನಿವರ್ಸಿಟಿ ಪ್ರಾಡಕ್ಷಗಳು

ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಸಂಘದ 50 ಜನರ ಹೆಸರು ಕೊಡಲಿ ನೋಡೋಣಾ: ಸವಾಲ್‌

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಖರ್ಗೆ ಕುಟುಂಬ ರಕ್ಷಿಸಿದ್ದು ಆರ್‌ಎಸ್‌ಎಸ್‌: ಸಂತೋಷ್‌
ಬಡವರಿಗೆ ಕಡಿಮೆ ದರದಲ್ಲಿ, ಕಡು ಬಡವರಿಗೆ ಫ್ರೀ ಸೈಟ್‌ ಗೃಹಮಂಡಳಿ ಅಧ್ಯಕ್ಷ ಮಾನೆ