ತೈಲ ಬಿಕ್ಕಟ್ಟು: ರಾತ್ರಿ 8ಕ್ಕೆ ಪಾಕಲ್ಲಿ ಅಂಗಡಿ ಬಂದ್‌!

Published : Jun 02, 2026, 09:31 AM IST
fuel price hike

ಸಾರಾಂಶ

ಮಧ್ಯಪ್ರಾಚ್ಯ ಸಂಘರ್ಷದ ಬಳಿಕ ತೀವ್ರ ಇಂಧನ ಹಾಗೂ ವಿದ್ಯುತ್‌ ಸಮಸ್ಯೆ ಎದುರಿಸುತ್ತಿರುವ ಪಾಕಿಸ್ತಾನ, ಇದೀಗ ರಾಜಧಾನಿ ಇಸ್ಲಾಮಾಬಾದ್‌ ಸೇರಿ ಹಲವು ಕಡೆ ಶಾಪಿಂಗ್‌ ಮಾಲ್‌, ಮತ್ತಿತರ ಅಂಗಡಿಗಳನ್ನು ರಾತ್ರಿ 8 ಗಂಟೆಗೆ ಬಂದ್‌ ಮಾಡಲು ಆದೇಶಿಸಿದೆ.

 ಇಸ್ಲಾಮಾಬಾದ್‌: ಮಧ್ಯಪ್ರಾಚ್ಯ ಸಂಘರ್ಷದ ಬಳಿಕ ತೀವ್ರ ಇಂಧನ ಹಾಗೂ ವಿದ್ಯುತ್‌ ಸಮಸ್ಯೆ ಎದುರಿಸುತ್ತಿರುವ ಪಾಕಿಸ್ತಾನ, ಇದೀಗ ರಾಜಧಾನಿ ಇಸ್ಲಾಮಾಬಾದ್‌ ಸೇರಿ ಹಲವು ಕಡೆ ಶಾಪಿಂಗ್‌ ಮಾಲ್‌, ಮತ್ತಿತರ ಅಂಗಡಿಗಳನ್ನು ರಾತ್ರಿ 8 ಗಂಟೆಗೆ ಬಂದ್‌ ಮಾಡಲು ಆದೇಶಿಸಿದೆ.

ಈ ಮೊದಲು ಅಮೆರಿಕ-ಇರಾನ್‌ ಕದನ ತೀವ್ರಗೊಂಡಾಗ ಇದೇ ರೀತಿಯ ಕ್ರಮಗಳನ್ನು ಪಾಕ್‌ ಜಾರಿ ಮಾಡಿತ್ತಾದರೂ ನಂತರ ಬಕ್ರೀದ್ ವೇಳೆ ಕೈಬಿಟ್ಟಿತ್ತು. ಇದೀಗ ಪುನಃ ಅದೇ ಮಾದರಿಯ ಕ್ರಮಗಳಿಗೆ ಆದೇಶಿಸಿದೆ.

ಏನು ಕ್ರಮ?:

ಅದರಂತೆ ಶಾಪಿಂಗ್ ಮಾಲ್‌ಗಳು, ಮಾರ್ಕೆಟ್‌ಗಳು, ಅಂಗಡಿಗಳನ್ನು 8 ಗಂಟೆಗೇ ಬಂದ್ ಮಾಡಬೇಕು. ಬೇಕರಿಗಳು, ರೆಸ್ಟೋರೆಂಟ್‌ಗಳು, ದಿನಸಿ ಅಂಗಡಿಗಳು, ಆಹಾರದ ಮಳಿಗೆಗಳು 10 ಗಂಟೆವರೆಗೆ ತೆರೆಯಲು ಅವಕಾಶವಿದೆ. ಮದುವೆ ಸಭಾಂಗಣಗಳು ಮತ್ತು ಇತರ ಕಾರ್ಯಕ್ರಮ ನಡೆಯುವ ಸ್ಥಳಗಳು ರಾತ್ರಿ 10 ಗಂಟೆಗೆ ಮುಚ್ಚಬೇಕು. ತುರ್ತು ಸೇವೆಗಳಾದ ಮೆಡಿಕಲ್‌, ಆಸ್ಪತ್ರೆಗಳು, ಪೆಟ್ರೋಲ್‌ ಪಂಪ್‌ಗಳು, ಐಟಿ ಕಂಪನಿಗಳಿಗೆ ಈ ನಿರ್ದೇಶನದಿಂದ ವಿನಾಯ್ತಿ ಇರಲಿದೆ.

ಈ ಕ್ರಮ ಏಕೆ?:

ಮಧ್ಯಪ್ರಾಚ್ಯ ಸಂಘರ್ಷದಿಂದ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಹಾಗೂ ವಿದ್ಯುತ್‌ ಸಮಸ್ಯೆಯಿಂದಾಗಿ ಪಾಕ್‌ ಸರ್ಕಾರ ಕಂಗಾಲಾಗಿದೆ. ರಾತ್ರಿ ವೇಳೆ ವಿದ್ಯುತ್‌ ಬಳಕೆ ಹೆಚ್ಚಿದರೆ ವೆಚ್ಚ ಸರ್ಕಾರಕ್ಕೆ ವೆಚ್ಚ ಹೆಚ್ಚಾಗುತ್ತದೆ. ಹೀಗಾಗಿ ವೆಚ್ಚ ಕಡಿತದಂಥ ಮಾರ್ಗಗಳತ್ತ ಮುಂದಾಗಿದೆ. ಇದರ ಭಾಗವಾಗಿ ಈ ಆದೇಶ ಹೊರಡಿಸಿದೆ.

ತನ್ನ ಬಹುತೇಕ ಪೆಟ್ರೋಲಿಯಂ ಉತ್ಪನ್ನಗಳಿಗಾಗಿ ಕೊಲ್ಲಿ ದೇಶ ಅವಲಂಬಿಸಿರುವ ಪಾಕಿಸ್ತಾನ

ಆದರೆ ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಅಗತ್ಯ ತೈಲ ಪೂರೈಕೆಯಾಗದೇ ದೇಶದಲ್ಲಿ ಭಾರೀ ಸಮಸ್ಯೆ

ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದ ಪಾಕ್‌ಗೆ ತೈಲದ ದರ ಹೆಚ್ಚಳದಿಂದಾಗಿ ಮತ್ತಷ್ಟು ತೊಂದರೆ

ಈ ಬಿಕ್ಕಟ್ಟಿನಿಂದ ಹೊರಬರಲು ದೇಶವ್ಯಾಪಿ ಹಲವು ಮಿತವ್ಯಯದ ಕ್ರಮ ಘೋಷಿಸಿದ ಸರ್ಕಾರ

ಇದರ ಭಾಗವಾಗಿ ರಾಜಧಾನಿ ಸೇರಿ ಹಲವೆಡೆ ರಾತ್ರಿ 8ಕ್ಕೆ ವಾಣಿಜ್ಯ ಚಟುವಟಿಕೆ ಬಂದ್‌ಗೆ ಸೂಚನೆ

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ರಾಜ್ಯಸಭೆ ಎಲೆಕ್ಷನ್‌ ರೇಸ್‌ಗೆ ಸುಮಲತಾ!
ಜಮೀರ್‌ ಅಹಮದ್‌ ವಿರುದ್ಧ ಆಡಿಯೋ ಸಂಚಲನ