50 ಕೋಟಿ ರು. ಆಮಿಷ: ಸಿದ್ದರಾಮಯ್ಯ ಹೇಳಿಕೆ ರಾಜಕೀಯ ಸಂಚಲನ - ತನಿಖೆ ಮಾಡಿಸಿ, ಸಾಬೀತುಪಡಿಸಿ: ಬಿಜೆಪಿ ಸವಾಲು

Published : Nov 15, 2024, 09:46 AM IST
CM Siddaramaiah Muda Site

ಸಾರಾಂಶ

ಕಾಂಗ್ರೆಸ್‌ನ 50 ಶಾಸಕರಿಗೆ ತಲಾ 50 ಕೋಟಿ ರು. ಆಮಿಷವೊಡ್ಡುವ ಮೂಲಕ ಪ್ರತಿಪಕ್ಷ ಬಿಜೆಪಿಯು ರಾಜ್ಯ ಸರ್ಕಾರವನ್ನು ಕೆಡವಲು ಯತ್ನಿಸಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದು, ಇದೀಗ ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.

ಬೆಂಗಳೂರು :  ಕಾಂಗ್ರೆಸ್‌ನ 50 ಶಾಸಕರಿಗೆ ತಲಾ 50 ಕೋಟಿ ರು. ಆಮಿಷವೊಡ್ಡುವ ಮೂಲಕ ಪ್ರತಿಪಕ್ಷ ಬಿಜೆಪಿಯು ರಾಜ್ಯ ಸರ್ಕಾರವನ್ನು ಕೆಡವಲು ಯತ್ನಿಸಿತ್ತು. ಆದರೆ ಇವರ ಆಮಿಷಕ್ಕೆ ಯಾವುದೇ ಶಾಸಕರು ಬಲಿಯಾಗದಿದ್ದಾಗ ಇದೀಗ ನನ್ನ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದು, ಇದೀಗ ರಾಜಕೀಯ ವಲಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ.

ತನಿಖೆ ಮಾಡಿಸಿ, ಸಾಬೀತುಪಡಿಸಿ: ಬಿಜೆಪಿ ಸವಾಲು

ಬೆಂಗಳೂರು: ಕಾಂಗ್ರೆಸ್ಸಿನ 50 ಶಾಸಕರಿಗೆ ತಲಾ 50 ಕೋಟಿ ರು. ಆಮಿಷವೊಡ್ಡುವ ಮೂಲಕ ಪ್ರತಿಪಕ್ಷ ಬಿಜೆಪಿಯು ಸರ್ಕಾರ ಕೆಡವಲು ಪ್ರಯತ್ನ ನಡೆಸಿತ್ತು ಎಂಬ ಆರೋಪದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆ ಮಾಡಿಸಿ ಆರೋಪ ಸಾಬೀತುಪಡಿಸಬೇಕು ಎಂದು ಬಿಜೆಪಿ ಸವಾಲು ಹಾಕಿದೆ.

ನಿಮ್ಮದೇ ಸರ್ಕಾರವಿದೆ. ನಿಮ್ಮದೇ ತನಿಖಾ ಸಂಸ್ಥೆಗಳಿವೆ. 50 ಕೋಟಿ ರು. ಆಮಿಷದ ಮೂಲ ಯಾವುದು ಎನ್ನುವುದನ್ನು ಜನರ ಮುಂದೆ ಬಹಿರಂಗಪಡಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ.

ಸರ್ಕಾರ ಕೆಡವಲು ಶಾಸಕರ ಖರೀದಿ ಯತ್ನ ನಿಜ: ಡಿಕೆಶಿ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಕಾಂಗ್ರೆಸ್‌ ಶಾಸಕರಿಗೆ ತಲಾ 50 ಕೋಟಿ ರು. ಆಮಿಷ ಒಡ್ಡಿದ್ದು ನಿಜ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಂಪುಟದ ಹಲವು ಹಿರಿಯ ಸಚಿವರು ಹೇಳಿದ್ದಾರೆ. ಸರ್ಕಾರ ಉರುಳಿಸಲು ಬಿಜೆಪಿಯವರು ಯತ್ನಿಸುತ್ತಿರುವುದು ನಿಜ, ಆದರೆ ಇಂತಹ ಯಾವುದೇ ಆಮಿಷಗಳಿಗೆ ಶಾಸಕರು ಬಲಿಯಾಗುವುದಿಲ್ಲ. ಸರ್ಕಾರ ಕೆಡವಲು ಬಿಡುವುದಿಲ್ಲ ಎಂದೂ ಹೇಳಿದ್ದಾರೆ.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ