ಪ್ರಜ್ವಲ್, ರೇವಣ್ಣನನ್ನು ಗಡಿಪಾರು ಮಾಡುವಂತೆ ಆಗ್ರಹ

KannadaprabhaNewsNetwork |  
Published : May 04, 2024, 12:30 AM ISTUpdated : May 04, 2024, 04:29 AM IST
3ಕೆಬಿಪಿಟಿ.1.ಬಂಗಾರಪೇಟೆ ಪಟ್ಟಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಮಹಿಳೆಯರಿಂದ ಪ್ರತಿಭಟನೆ. | Kannada Prabha

ಸಾರಾಂಶ

ಈ ಇಬ್ಬರ ಜನಪ್ರತಿನಿಧಿಗಳಿಂದಾಗಿ ಸಂತ್ರಸ್ತ ಮಹಿಳೆಯರ ಬದುಕು ಮತ್ತು ಕೌಟುಂಬಿಕ ಜೀವನ ಛದ್ರವಾಗಿದೆ. ಕೆಲವರು ಆತ್ಮಹತ್ಯೆಗೂ ಯತ್ನಿಸಿದ್ದಾರೆ, ಯಾವಾಗ ಮತ್ತೊಂದು ಪೆನ್‌ಡ್ರೈವ್ ಹೊರಬಂದು ಯಾರ ಮಾನ ಹಾಳಾಗುತ್ತದೋ ಎಂದ ಆತಂಕ ಹಲವರಲ್ಲಿ ಮನೆಮಾಡಿದೆ

 ಬಂಗಾರಪೇಟೆ :  ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ ಶೋಷಣೆ ಮಾಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ತಂದೆ ಶಾಸಕ ರೇವಣ್ಣರನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಮಹಿಳಾ ದೌರ್ಜನ್ಯ ತಡೆ ಹೋರಾಟ ಸಮಿತಿ ಕಾರ್ಯಕರ್ತರು ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಪಟ್ಟಣದ ಕೋಲಾರ ರಸ್ತೆಯ ಅಂಬೇಡ್ಕರ್ ಪ್ರತಿಮೆ ಬಳಿ ರಸ್ತೆ ತಡೆದು ಪ್ರತಿಭಟಿಸಿದ ನೂರಾರು ಮಹಿಳೆಯರು ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸಂಸದ ಪ್ರಜ್ವಲ್ ಹಾಗೂ ಅವರ ತಂದೆ ಶಾಸಕ ರೇವಣ್ಣರವರ ದುರಾಚಾರದಿಂದ ಇಡೀ ರಾಜ್ಯದ ಜನತೆ ತಲೆ ತಗ್ಗಿಸುವಂತಾಗಿದೆ ಎಂದು ಹೇಳಿದರು.

ಹಲವು ಮಹಿಳೆಯರಿಗೆ ಭೀತಿ

ಈ ಇಬ್ಬರ ಜನಪ್ರತಿನಿಧಿಗಳಿಂದಾಗಿ ಸಂತ್ರಸ್ತ ಮಹಿಳೆಯರ ಬದುಕು ಮತ್ತು ಕೌಟುಂಬಿಕ ಜೀವನ ಛಿದ್ರವಾಗಿದೆ. ಕೆಲವರು ಆತ್ಮಹತ್ಯೆಗೂ ಯತ್ನಿಸಿದ್ದಾರೆ, ಯಾವಾಗ ಮತ್ತೊಂದು ಪೆನ್‌ಡ್ರೈವ್ ಹೊರಬಂದು ಯಾರ ಮಾನ ಹಾಳಾಗುತ್ತದೋ ಎಂದ ಆತಂಕ ಹಲವರಲ್ಲಿ ಮನೆಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದರು.ಸಂಸದರ ಹಾಗೂ ಶಾಸಕರ ರಾಸಲೀಲೆ ಪ್ರಕರಣಗಳ ಬೆಳೆಕಿಗೆ ಬಂದು ಇಷ್ಟುದಿನಗಳಾದರೂ ಪೊಲೀಸರು ಅವರಿಬ್ಬರನ್ನು ಬಂಧಿಸಿಲ್ಲ, ರಾಜಕೀಯ ಪಕ್ಷಗಳು ಮಾತ್ರ ರಾಜಕೀಯ ದಾಳವಾಗಿ ಬಳಸಿಕೊಂಡು ಒಬ್ಬರ ಮೇಲೊಬ್ಬರು ಕೆಸರೆರಚಾಟದಲ್ಲಿ ತೊಡಗಿದ್ದಾರೆ. 

ಪ್ರಕರಣವನ್ನು ಎಸ್‌ಐಟಿಗೆ ವಹಿಸಿರುವುದು ಸ್ವಾಗತಾರ್ಹವಾಗಿದ್ದು ವಿಶೇಷ ತಂಡವು ಪ್ರಕರಣದ ತನಿಖೆಯನ್ನು ವಿಳಂಬ ಮಾಡದೆ ತ್ವರಿತವಾಗಿ ಮುಗಿಸಿ ತಪ್ಪಿಸ್ಥರನ್ನು ಬಂಧಿಸಿ ಅವರಿಬ್ಬರನ್ನು ರಾಜ್ಯದಿಂದ ಗಡಿಪಾರು ಮಾಡಬಾಕು. ಮುಂದೆ ಮತ್ತ್ಯಾವ ಜನಪ್ರತಿನಿಧಿವೂ ಇಂತಹ ನೀಚ ಕೆಲಸಕ್ಕೆ ಮುಂದಾಗದಂತೆ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಅಣಕು ಪ್ರತಿಕೃತಿ ದಹನ

ಯಾವುದೇ ವ್ಯಕ್ತಿಯ ಖಾಸಗಿ ಬದುಕಿನ ವಿಚಾರವನ್ನು ಸಾರ್ವಜನಿಕವಗಿ ಬಹಿರಂಗಪಡಿಸುವುದು ಅಪರಾಧವಾಗಿದೆ, ಆದರೆ ಸಂಸದ ಪ್ರಜ್ವಲ್ ತಮ್ಮ ಮನೆ ಕೆಲಸದ ಮಹಿಳೆ ಸೇರಿದಂತೆ ಇತರೆ ಮಹಿಳೆಯರನ್ನು ಅಧಿಕಾರದ ದಬ್ಬಾಳಿಕೆಯಿಂದ ಅವರ ಮೇಲೆ ಲೈಗಿಂಕವಾಗಿ ದೌರ್ಜನ್ಯ ಎಸಗಿ ಈಗ ದೇಶ ಬಿಟ್ಟು ಪರಾರಿಯಾಗಿದ್ದಾರೆ,ಇವರ ಮೇಲೆ ಪ್ರಜಾಪ್ರನಿಧಿನಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ ತಕ್ಕ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಪ್ರಜ್ವಲ್ ರೇವಣ್ಣರ ಅಣಕು ಪ್ರತಿಕೃತಿಯನ್ನು ಸುಟ್ಟು ಆಕ್ರೋಶವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಜನವಾದಿ ಮಹಿಳೆ ಸಂಘಟನೆ ಸರಸ್ವತಿ,ಲಲಿತಮ್ಮ,ಎಸ್.ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅ.ನಾ.ಹರೀಶ್,ರೈತ ಸಂಘದ ಮರಗಲ್ ಶ್ರೀನಿವಾಸ್,ಮಹಿಳಾ ದೌರ್ಜನ್ಯ ತಡೆ ಹೋರಾಟ ಸಮಿತಿಯ ಸದಸ್ಯರಾದ ಜಯಂತಿ, ಗಿರಿಜ, ಶಶಿಕಲಾ, ಸುಜಾತಮ್ಮ, ಭಾಗ್ಯಮ್ಮ,ಭಾರತ, ಮಂಜುಳಾ, ರವೀಂದ್ರ, ಕುಪೇಂದ್ರ, ಮುನೇಂದ್ರ ಇದ್ದರು. 

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’