ಬರದಿಂದ ತತ್ತರಿಸಿರುವ ಜನರಿಗೆ ಸ್ಪಂದಿಸಿ

KannadaprabhaNewsNetwork | Published : Nov 18, 2023 1:00 AM

ಸಾರಾಂಶ

ಸರ್ಕಾರದ ಸವಲತ್ತು ಜನರಿಗೆ ತಲುಪಿಸುವಲ್ಲಿ ರಾಜಕಾರಣ ಬೇಡ. ಪಕ್ಷ ಭೇದ ಮರೆತು ಬರದಿಂದ ತತ್ತರಿಸಿರುವ ಜನರಿಗೆ ಸ್ಪಂದಿಸಿ ಕೆಲಸ ಮಾಡುವಲ್ಲಿ ರೈತರೊಂದಿಗೆ ನಾವು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಧಿಕಾರಿಗಳು ಮತ್ತು ರೈತರು ತಾಳ್ಮೆಯಿಂದ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಸರ್ಕಾರದ ಸವಲತ್ತು ಜನರಿಗೆ ತಲುಪಿಸುವಲ್ಲಿ ರಾಜಕಾರಣ ಬೇಡ. ಪಕ್ಷ ಭೇದ ಮರೆತು ಬರದಿಂದ ತತ್ತರಿಸಿರುವ ಜನರಿಗೆ ಸ್ಪಂದಿಸಿ ಕೆಲಸ ಮಾಡುವಲ್ಲಿ ರೈತರೊಂದಿಗೆ ನಾವು ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಧಿಕಾರಿಗಳು ಮತ್ತು ರೈತರು ತಾಳ್ಮೆಯಿಂದ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ತಿಳಿಸಿದರು.

ಹಾಲಪ್ಪ ಪ್ರತಿಷ್ಠಾನದಿಂದ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೈತರೊಂದಿಗೆ ನಾವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ರೈತರಿಗೋಸ್ಕರ ಮಾಡುತ್ತಿರುವ ಕಾರ್ಯಕ್ರಮ. ಹಾಗಾಗಿ ಎಪಿಎಂಸಿ ಯಾರ್ಡ್‌ನಲ್ಲಿ ಏರ್ಪಡಿಸಲಾಗಿದೆ.

ಆದರೆ, ಇದರ ಅರಿವಿರದ ಕೃಷಿ ಮಾರುಕಟ್ಟೆ ಜಂಟಿ ನಿರ್ದೇಶಕಿ, ಅನುಮತಿ ಪಡೆದಿದ್ದೀರ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಅನುಮತಿಗಾಗಿ ಪತ್ರ ಕೊಟ್ಟು ಮೂರು ದಿನ ಆಗಿದೆ. ಅಲ್ಲದೆ ಇಲ್ಲಿ ನಾವುಗಳು ಪ್ರತಿಭಟನೆ, ಗುಂಪುಗಾರಿಕೆ ಮಾಡುತ್ತಿಲ್ಲ. ರೈತರಿಗೆ ಬಲ ತುಂಬುವ ಕೆಲಸ ಮಾಡುತ್ತಿದ್ದೇವೆ. ಒಬ್ಬ ಅಧಿಕಾರಿಗೆ ಇದರ ಅರಿವು ಇರದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಜಿಲ್ಲೆಯ 2-3 ಹೋಬಳಿ ಒಗ್ಗೂಡಿಸಿ, ಇದುವರೆಗೆ 12 ಕಾರ್ಯಕ್ರಮ ಮಾಡಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ರೈತರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರಯಬೇಕೆಂಬುದೇ ಈ ಕಾರ್ಯಕ್ರಮದ ಉದ್ದೇಶ.ಇದರ ಪ್ರಯೋಜನ ಪಡೆದುಕೊಳ್ಳಲು ಮುಂದಾಗಿ ಎಂದು ಮುರುಳಿಧರ ಹಾಲಪ್ಪ ನುಡಿದರು.

ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ಮುಕುಂದರಾಜ್ ಮಾತನಾಡಿ, ರೈತ ಮಹಿಳೆಯರಿಗೆ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಜನರು ಉಪಯೋಗಿಸಿಕೊಳ್ಳಲು ಪ್ರೇರಣೆ ನೀಡಿದಂತಾಗುತ್ತದೆ ಎಂದರು.

ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ದರ್ಶನ್ , ನಬಾರ್ಡ್ ಅಧಿಕಾರಿ ಶ್ರೀಮತಿ ಕೀರ್ತಿಪ್ರಭ ಮಾತನಾಡಿದರು. ಬೆಸ್ಕಾಂನಿಂದ ಪ್ರವೀಣಕುಮಾರ್.ಟಿ.ಎಸ್.,ಕೃಷಿ ಇಲಾಖೆಯ ಕುರಿತು ಸಹಾಯಕ ನಿರ್ದೇಶಕರಾದ ಲೇಪಾಕ್ಷಿ, ರೇಷ್ಮೆ ಬೆಳೆ ಕುರಿತು ಡಾ. ಶಿವಪ್ರಕಾಶ್, ಅರಣ್ಯ ಇಲಾಖೆಯ ಅನಿಲ್‌ಕುಮಾರ್, ಪಶುಸಂಗೋಪನೆ ಕುರಿತು ಡಾ.ಕಾಂತರಾಜು ರೈತರೊಂದಿಗೆ ಸಂವಾದ ನಡೆಸಿ, ರೈತರ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಈ ವೇಳೆ ಮುಖಂಡರಾದ ಹೆಬ್ಬೂರು ಶ್ರೀನಿವಾಸಮೂರ್ತಿ, ವೆಂಕಟೇಶ್.ಕೆ.ಜಿ, ಚೇತನ್, ಗೋವಿಂದರಾಜು,ಅಭಿ, ನಾರಾಯಣಿ,ಅಶ್ವತಪ್ಪ, ರಂಗಶಾಮಯ್ಯ,ಸುರೇಶ್,ಅಲ್ಲು, ಶಫಿ, ಗ್ರಾಮಪಂಚಾಯಿತಿ ಅಧ್ಯಕ್ಷ ಸ್ವಾಮಿ, ಸದಸ್ಯ ಜಹೀರ್‌ಅಬ್ಬಾಸ್ ಪಾಲ್ಗೊಂಡಿದ್ದರು.

Share this article