ಜೈಲಲ್ಲಿರುವ ಆಪ್‌ ನಾಯಕ ಸಂಜಯ ಸಿಂಗ್‌ ರಾಜ್ಯಸಭೆಗೆ ಪುನರಾಯ್ಕೆ

KannadaprabhaNewsNetwork |  
Published : Jan 13, 2024, 01:32 AM IST
ಸಂಜಯ್ ಸಿಂಗ್‌ | Kannada Prabha

ಸಾರಾಂಶ

ದೆಹಲಿ ಅಬಕಾರಿ ಹಗರಣದ ಅಕ್ರಮ ಹಣ ವರ್ಗಾವಣೆ ಅಡಿಯಲ್ಲಿ ಬಂಧನವಾಗಿರುವ ಆಪ್‌ ಸಂಸದ ಸಂಜಯ್‌ ಸಿಂಗ್‌ ಮತ್ತೆ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಸ್ವಾತಿ ಮಲಿವಾಲ್‌ ಹಾಗೂ ಎನ್‌ಡಿ ಗುಪ್ತಾ ಆಯ್ಕೆಯಾಗಿದ್ದಾರೆ.

ನವದೆಹಲಿ: ರಾಜ್ಯಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದ ಮೂರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್‌ ಹಾಗೂ ಎನ್‌.ಡಿ. ಗುಪ್ತಾ, ಇ.ಡಿ.ಯಿಂದ ಬಂಧಿಸಲ್ಪಟ್ಟಿರುವ ಆಪ್‌ ನಾಯಕ ಸಂಜಯ್‌ ಸಿಂಗ್‌ ಆಯ್ಕೆಯಾದವರು.

ಈ ಮೂವರ ವಿರುದ್ಧ ಯಾವುದೇ ಅಭ್ಯರ್ಥಿ ಇಲ್ಲದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ಸಂಜಯ್‌ ಸಿಂಗ್‌ ಅವರು ಪೊಲೀಸ್ ವ್ಯಾನಿನಲ್ಲಿ ಬಂದಿದ್ದರು. ಈ ಹಿಂದೆ ಇದ್ದ ಸುಶೀಲ್‌ ಗುಪ್ತ ಅವರ ಸ್ಥಾನಕ್ಕೆ ಸ್ವಾತಿ ನಾಮಪತ್ರ ಸಲ್ಲಿಸಿದ್ದರು. ಜೊತೆಗೆ ಎನ್‌.ಡಿ.ಗುಪ್ತಾ ಪುನರಾಯ್ಕೆಯಾಗಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಹೊಗಳಿ ಹೊಗಳಿ ಅನುದಾನ ಪಡೆಯಿರಯ್ಯ -ಡಿಕೆಶಿ ಹೊಗಳಿ 50 ಕೋಟಿ ಅನುದಾನ ಪಡೆದ ಎಚ್ಕೆ ಸುರೇಶ್‌
ದಾವಣಗೆರೆ, ಬಾಗಲಕೋಟೆ ಕ್ಷೇತ್ರ ನಮ್ದೆ : ಡಿ.ಕೆ.ಶಿವಕುಮಾರ್‌