ಜಿಪಂ, ತಾಪಂನ ಸದಸ್ಯ ಸ್ಥಾನಕ್ಕೆ ಮೀಸಲು ನಿಗದಿ- 4785ರಲ್ಲಿ 2476 ಸ್ಥಾನ ಸ್ತ್ರೀಯರಿಗೆ

Published : Oct 08, 2026, 05:43 AM IST
election commission form 6 sir declaration removed voter registration

ಸಾರಾಂಶ

ರಾಜ್ಯದ 1,129 ಜಿಪಂ ಹಾಗೂ 3,656 ತಾಪಂ ಸದಸ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.ಒಟ್ಟು 1,129 ಜಿಪಂ ಸ್ಥಾನಗಳಲ್ಲಿ 571 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ಬೆಂಗಳೂರು : ರಾಜ್ಯದ 1,129 ಜಿಪಂ ಹಾಗೂ 3,656 ತಾಪಂ ಸದಸ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಒಟ್ಟು 1,129 ಜಿಪಂ ಸ್ಥಾನಗಳಲ್ಲಿ 571 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಇನ್ನು ಎಸ್ಸಿ ಮಹಿಳೆಗೆ 121 ಸೇರಿ ಎಸ್ಸಿ ಪ್ರವರ್ಗಕ್ಕೆ ಒಟ್ಟು 225, ಎಸ್ಟಿ ಮಹಿಳೆಗೆ 59 ಸ್ಥಾನ ಸೇರಿ ಎಸ್ಟಿಗೆ ಒಟ್ಟು 102, ಹಿಂದುಳಿದ ಎ ವರ್ಗದ 98 ಮಹಿಳೆಯರು ಸೇರಿ 183 ಸ್ಥಾನ, ಹಿಂದುಳಿದ ಬಿ ವರ್ಗದಲ್ಲಿ 25 ಮಹಿಳೆಯರು ಸೇರಿ 43, ಸಾಮಾನ್ಯ ವರ್ಗಕ್ಕೆ 268 ಮಹಿಳೆಯರಿಗೆ ಸೇರಿ 576 ಸ್ಥಾನ ಮೀಸಲಿಡಲಾಗಿದೆ.

ಇನ್ನು ತಾಪಂನ 3,656 ಸ್ಥಾನಗಳ ಪೈಕಿ 1905 ಸದಸ್ಯ ಸ್ಥಾನ ಮಹಿಳೆಯರಿಗೆ ಮೀಸಲಿಡಲಾಗಿದೆ. ಉಳಿದಂತೆ ಪ್ರವರ್ಗವಾರು 429 ಎಸ್ಸಿ ಮಹಿಳೆಯರು ಸೇರಿ 733 ಸ್ಥಾನ ಎಸ್ಸಿಗೆ, ಎಸ್ಟಿಯ 287 ಮಹಿಳೆಯರು ಸೇರಿ ಎಸ್ಸಿಗೆ 394 ಸ್ಥಾನ, ಹಿಂದುಳಿದ ಎ ವರ್ಗಕ್ಕೆ 306 ಮಹಿಳೆಯರು ಸೇರಿ 508 ಸ್ಥಾನ, ಹಿಂದುಳಿದ ಬಿ ವರ್ಗಕ್ಕೆ 64 ಮಹಿಳೆಯರು ಸೇರಿ 111 ಸ್ಥಾನ ಮೀಸಲಿಡಲಾಗಿದ್ದು, ಸಾಮಾನ್ಯ ವರ್ಗದ ಪೈಕಿ 819 ಮಹಿಳೆಯರು ಸೇರಿ 1,910 ಮಂದಿಗೆ ಮೀಸಲಾತಿ ಕಲ್ಪಿಸಲಾಗಿದೆ.

ಜಿಪಂ ಬೆಂಗಳೂರು ನಗರ-ಗ್ರಾಮಾಂತರ ಜಿಲ್ಲೆ ಪಟ್ಟಿ:

ಜಿಪಂಗೆ ಸಂಬಂಧಿಸಿ ಬೆಂಗಳೂರು ನಗರದ 28 ಸ್ಥಾನಗಳ ಪೈಕಿ 14 ಮಹಿಳೆಯರಿಗೆ ಮೀಸಲಿದ್ದು, ಮಹಿಳೆಯರಿಗೆ 4 ಸ್ಥಾನ ಸೇರಿ ಒಟ್ಟು ಎಸ್ಸಿಗೆ 7, ಪರಿಶಿಷ್ಟ ಪಂಗಡ ಮಹಿಳೆಗೆ 1 ಸ್ಥಾನ, ಹಿಂದುಳಿದ ವರ್ಗಗಳ ಎ ವರ್ಗಕ್ಕೆ 3 ಮಹಿಳೆ ಸೇರಿ 5 ಸ್ಥಾನ, ಹಿಂದುಳಿದ ವರ್ಗಗಳ ‘ಬಿ’ಗೆ 1 ಸ್ಥಾನ ಹಾಗೂ ಸಾಮಾನ್ಯ ಮಹಿಳೆಗೆ 6 ಸೇರಿ ಒಟ್ಟು 14 ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೈಕಿ 28 ಸ್ಥಾನಗಳನ್ನು 14 ಮಹಿಳೆಯರಿಗೆ ಮೀಸಲಿಡಲಾಗಿದೆ. ಎಸ್ಸಿ ಮಹಿಳೆಗೆ 4 ಸೇರಿದಂತೆ ಒಟ್ಟು 7 ಸ್ಥಾನ, ಎಸ್ಟಿ ಮಹಿಳೆಗೆ 1 ಸ್ಥಾನ ಸೇರಿ 2 ಸ್ಥಾನ, ಹಿಂದುಳಿದ ವರ್ಗದ ಎ ವಿಭಾಗಕ್ಕೆ ಎರಡು ಮಹಿಳೆ ಸೇರಿ 4 ಸ್ಥಾನ, ಹಿಂದುಳಿದ ವರ್ಗದ ಬಿ ಮಹಿಳೆಗೆ 1 ಸ್ಥಾನ, ಸಾಮಾನ್ಯ ವರ್ಗದ 6 ಮಹಿಳೆಯರಿಗೆ ಸೇರಿ ಒಟ್ಟು 14 ಸ್ಥಾನ ಮೀಸಲಿಡಲಾಗಿದೆ.

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ತಾ. ಪಂ.ಪಟ್ಟಿ:

ಬೆಂಗಳೂರು ನಗರ ಜಿಲ್ಲೆಯ ಒಟ್ಟು 76 ತಾ.ಪಂ. ಸ್ಥಾನಗಳಲ್ಲಿ 40 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಎಸ್ಸಿ ಮಹಿಳೆಗೆ 11 ಸೇರಿ ಒಟ್ಟು 18 ಸ್ಥಾನ, ಎಸ್ಟಿ ಮಹಿಳೆಗೆ 5 ಸ್ಥಾನ, ಹಿಂದುಳಿದ ಎ ವರ್ಗಕ್ಕೆ 7 ಮಹಿಳೆ ಸೇರಿ 10 ಸ್ಥಾನ, ಹಿಂದುಳಿದ ಬಿ ವರ್ಗಕ್ಕೆ 1 ಮಹಿಳೆ ಸೇರಿ 3 ಸ್ಥಾನ, ಸಾಮಾನ್ಯ ವರ್ಗದಲ್ಲಿ 16 ಮಹಿಳೆ ಸೇರಿ 40 ಸ್ಥಾನ ಮೀಸಲಿಗೆ ನಿಗದಿ ಮಾಡಲಾಗಿದೆ.

ತಾಲೂಕುವಾರು ಬೆಂಗಳೂರು ಉತ್ತರ ತಾಲೂಕಿನ ಒಟ್ಟು 9 ಸ್ಥಾನಗಳ ಪೈಕಿ 5 ಮಂದಿ ಮಹಿಳೆಯರಿಗೆ ಮೀಸಲು ಕಲ್ಪಿಸಲಾಗಿದೆ. ಎಸ್ಸಿಗೆ ಒಂದು ಮಹಿಳೆ ಸೇರಿ 2 ಸ್ಥಾನ, ಎಸ್ಟಿಗೆ 1 ಮಹಿಳೆ, ಹಿಂದುಳಿದ ವರ್ಗ ಎಗೆ ಒಂದು ಮಹಿಳೆ, 5 ಸಾಮಾನ್ಯ ಸ್ಥಾನಗಳಲ್ಲಿ ಇಬ್ಬರಿಗೆ ಮಹಿಳೆಯರಿಗೆ ಮೀಸಲಾತಿ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು ಪೂರ್ವದಲ್ಲಿ 11 ಸ್ಥಾನದಲ್ಲಿ 6 ಮಹಿಳೆಯರಿಗೆ ಮೀಸಲಿದ್ದು, ಎಸ್ಸಿಗೆ ಎರಡು ಮಹಿಳೆ ಸೇರಿ 3 ಸ್ಥಾನ, ಎಸ್ಟಿಗೆ ಒಂದು ಮಹಿಳೆ, ಹಿಂದುಳಿದ ಎ ವರ್ಗಕ್ಕೆ ಒಂದು ಮಹಿಳೆ, ಸಾಮಾನ್ಯ ವರ್ಗಕ್ಕೆ ಇಬ್ಬರು ಮಹಿಳೆಯರು ಸೇರಿ 6 ಮಂದಿಗೆ ಅವಕಾಶ.

ಯಲಹಂಕದಲ್ಲಿನ 15 ತಾಪಂ ಸ್ಥಾನಗಳಲ್ಲಿ 8 ಮಹಿಳೆಯರಿಗೆ ಮೀಸಲಿಟ್ಟಿದ್ದು, ಎಸ್ಸಿಗೆ 2 ಮಹಿಳೆ ಸೇರಿ 3 ಸ್ಥಾನ, ಎಸ್ಟಿ ಮಹಿಳೆಗೆ 1 ಸ್ಥಾನ, ಹಿಂದುಳಿದ ಎ ವರ್ಗಕ್ಕೆ 1 ಮಹಿಳೆ ಸೇರಿ ಎರಡು ಸ್ಥಾನ, ಹಿಂದುಳಿದ ಬಿ ವರ್ಗಕ್ಕೆ 1 ಮಹಿಳೆ, ಸಾಮಾನ್ಯ ವರ್ಗದಲ್ಲಿ 3 ಮಹಿಳೆ ಸೇರಿ 8 ಸ್ಥಾನ ಮೀಸಲಿಡಲಾಗಿದೆ.

ಬೆಂಗಳೂರು ದಕ್ಷಿಣದಲ್ಲಿ 16 ಸ್ಥಾನಗಳಲ್ಲಿ 8 ಮಹಿಳೆಯರಿಗೆ, 2 ಮಹಿಳೆ ಸೇರಿ 3 ಎಸ್ಸಿ, ಒಂದು ಎಸ್ಟಿ ಮಹಿಳೆ, ಹಿಂದುಳಿದ ಎ ವರ್ಗದಲ್ಲಿ ಎರಡು ಮಹಿಳೆ ಸೇರಿ 3 ಸ್ಥಾನ, ಹಿಂದುಳಿದ ಬಿ ವರ್ಗಕ್ಕೆ 1 ಸ್ಥಾನ, ಸಾಮಾನ್ಯ ವರ್ಗದಲ್ಲಿ 3 ಮಹಿಳೆ ಸೇರಿ 8 ಸ್ಥಾನ ಮೀಸಲು ನಿಗದಿಪಡಿಸಿದೆ.

ಆನೇಕಲ್‌ನಲ್ಲಿ 25 ಸ್ಥಾನಗಳಲ್ಲಿ 13 ಮಹಿಳೆಗೆ ಮೀಸಲಿಟ್ಟಿದ್ದು, ಎಸ್ಸಿಗೆ 4 ಮಹಿಳೆ ಸೇರಿ 7, ಎಸ್ಟಿಗೆ 1 ಮಹಿಳೆ, ಹಿಂದುಳಿದ ಎ ವರ್ಗಕ್ಕೆ 2 ಮಹಿಳೆ ಸೇರಿ 3, ಹಿಂದುಳಿದ ಬಿ ವರ್ಗಕ್ಕೆ 1, ಸಾಮಾನ್ಯ ವರ್ಗದಲ್ಲಿ 6 ಮಹಿಳೆ ಸೇರಿ 13 ಮಂದಿಗೆ ಮೀಸಲಾತಿ ಕಲ್ಪಿಸಲಾಗಿದೆ.

ಇತರೆ ಜಿಲ್ಲೆಗಳ ಜಿಪಂ ಪಟ್ಟಿ:

ಇದೇ ರೀತಿ ಕೋಲಾರದ 29 (15 ಮಹಿಳೆ), ಚಿಕ್ಕಬಳ್ಳಾಪುರ 28 (14 ಮಹಿಳೆ), ಬೆಂಗಳೂರು ದಕ್ಷಿಣ 28 (14 ಮಹಿಳೆ), ತುಮಕೂರು 57 (29 ಮಹಿಳೆ), ಚಿತ್ರದುರ್ಗ 37 (19 ಮಹಿಳೆ), ದಾವಣಗೆರೆ 29 (15ಮಹಿಳೆ), ಶಿವಮೊಗ್ಗ 39 (20 ಮಹಿಳೆ), ಮೈಸೂರು 46 (23 ಮಹಿಳೆ), ಮಂಡ್ಯ 40 (20 ಮಹಿಳೆ), ಹಾಸನ 38 (19 ಮಹಿಳೆ), ಕೊಡಗು 29 (15 ಮಹಿಳೆ), ಚಿಕ್ಕಮಗಳೂರು 36 (18 ಮಹಿಳೆ), ಚಾಮರಾಜನಗರ 28 (14 ಮಹಿಳೆ), ಬೆಳಗಾವಿ 90 (45 ಮಹಿಳೆ), ಧಾರವಾಡ 28 (14 ಮಹಿಳೆ), ಗದಗ 25 (13 ಮಹಿಳೆ), ಹಾವೇರಿ 34 (17 ಮಹಿಳೆ), ವಿಜಯಪುರ 45 (23 ಮಹಿಳೆ), ಬಾಗಲಕೋಟೆ 37 (19 ಮಹಿಳೆ), ಉತ್ತರ ಕನ್ನಡ 53 (27 ಮಹಿಳೆ), ಕಲಬುರಗಿ 48 (24 ಮಹಿಳೆ), ಯಾದಗಿರಿ 27 (14 ಮಹಿಳೆ), ಬೀದರ್‌ 34 (17 ಮಹಿಳೆ), ರಾಯಚೂರು 39 (20 ಮಹಿಳೆ), ಕೊಪ್ಪಳ 30 (15 ಮಹಿಳೆ), ಬಳ್ಳಾರಿ 28 (14 ಮಹಿಳೆ), ವಿಜಯನಗರದ 28 (14 ಮಹಿಳೆ) ಸ್ಥಾನಗಳ ಮೀಸಲಾತಿ ಪ್ರಕಟಿಸಲಾಗಿದೆ.

ಜಿಪಂ ಮೀಸಲು ಪಟ್ಟಿ

ಒಟ್ಟು ಸ್ಥಾನ 1129

ಮಹಿಳೆಯರಿಗೆ 571

ಎಸ್ಸಿ ಪ್ರವರ್ಗಕ್ಕೆ 225

ಎಸ್ಟಿಗೆ 102

ಹಿಂದುಳಿದ ಎ ವರ್ಗ 183

ಹಿಂದುಳಿದ ಬಿ ವರ್ಗ 43

ಸಾಮಾನ್ಯ ವರ್ಗ 576

==

ತಾಪಂ ಮೀಸಲಾತಿ ಪಟ್ಟಿ

ಒಟ್ಟು ಸ್ಥಾನ 3656

ಮಹಿಳೆಯರಿಗೆ 1905

ಪರಿಶಿಷ್ಟ ಜಾತಿ 733

ಪರಿಶಿಷ್ಟ ವರ್ಗ 394

ಹಿಂದುಳಿದಎ ವರ್ಗ 508

ಹಿಂದುಳಿದ ಬಿ ವರ್ಗ 111

ಸಾಮಾನ್ಯ ವರ್ಗ 1910

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

2ನೇ ದಿನವೂ ಸಿಇಸಿ ವಿರುದ್ಧ ಇಂಡಿಯಾ ಕೂಟದ ದಂಗಲ್‌
ಮೋದಿ, ಶಾ ಸೂಚನೆಯಂತೆ ಸಂವಿಧಾನಕ್ಕೆ ಸಿಇಸಿ ದ್ರೋಹ: ಕಾಂಗ್ರೆಸ್‌