ಶಾಸಕಿ ನಯನಾ ಮೋಟಮ್ಮ ರಾಜೀನಾಮೆ ಹೈಡ್ರಾಮಾ

Published : Nov 24, 2026, 06:39 AM IST
Nayana Motamma

ಸಾರಾಂಶ

ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕಡೆಗೆ ಕಾಡಾನೆಗಳನ್ನು ಓಡಿಸುತ್ತಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ನಯನಾ ಮೋಟಮ್ಮ ಅವರು ತಮ್ಮ ಶಾಸಕಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಪ್ರಹಸನ

ಬೆಂಗಳೂರು: ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕಡೆಗೆ ಕಾಡಾನೆಗಳನ್ನು ಓಡಿಸುತ್ತಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ನಯನಾ ಮೋಟಮ್ಮ ಅವರು ತಮ್ಮ ಶಾಸಕಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಪ್ರಹಸನ ನಡೆಯಿತು.

ಸ್ಪೀಕರ್‌ ಕಚೇರಿಗೆ ರಾಜೀನಾಮೆ ಪತ್ರ ಹಿಡಿದು ಬಂದಿದ್ದರು

ಸೋಮವಾರ ನಯನಾ ಮೋಟಮ್ಮ ಅವರು ವಿಧಾನಸೌಧದ ಸ್ಪೀಕರ್‌ ಕಚೇರಿಗೆ ರಾಜೀನಾಮೆ ಪತ್ರ ಹಿಡಿದು ಬಂದಿದ್ದರು. ಈ ವೇಳೆ ಸ್ಪೀಕರ್‌ ಜಿ.ಎಸ್‌.ಪಾಟೀಲ್‌ ಅವರು ಕಚೇರಿಯಲ್ಲಿ ಇರಲಿಲ್ಲ. ಬಳಿಕ ಸ್ಪೀಕರ್‌ ಅವರ ಆಪ್ತ ಕಾರ್ಯದರ್ಶಿ ಅಶೋಕ್‌ ಮಿರ್ಜಿ ಅವರನ್ನು ಭೇಟಿಯಾದ ನಯನಾ, ರಾಜೀನಾಮೆ ಪತ್ರ ಕೊಡಲು ಮುಂದಾದರು. ಈ ವೇಳೆ, ನಿಯಮಗಳ ಪ್ರಕಾರ ನಾನು ರಾಜೀನಾಮೆ ಪತ್ರ ಸ್ವೀಕರಿಸಲು ಅವಕಾಶವಿಲ್ಲ ಎಂದು ಅಶೋಕ್‌ ಮಿರ್ಜಿ ಸ್ಪಷ್ಟಪಡಿಸಿದರು.

ರಾಜೀನಾಮೆ ನೀಡಲು ಕಚೇರಿಗೆ

ಅಲ್ಲದೆ, ಸ್ಪೀಕರ್‌ ಜಿ.ಎಸ್‌.ಪಾಟೀಲ್‌ಗೆ ದೂರವಾಣಿ ಕರೆ ಮಾಡಿದ ಆಪ್ತ ಕಾರ್ಯದರ್ಶಿ ಅಶೋಕ್‌ ಮಿರ್ಜಿ, ಶಾಸಕಿ ನಯನಾ ಮೋಟಮ್ಮ ಅವರು ರಾಜೀನಾಮೆ ನೀಡಲು ಕಚೇರಿಗೆ ಬಂದಿರುವ ವಿಚಾರ ತಿಳಿಸಿದರು. ಈ ನಡುವೆ ಮಂಗಳವಾರ ಖುದ್ದು ಸ್ಪೀಕರ್ ಅವರನ್ನೇ ಭೇಟಿಯಾಗುವೆ ಎಂದು ಹೇಳಿದ ನಯನಾ, ರಾಜೀನಾಮೆ ಪತ್ರವನ್ನು ಅಶೋಕ್‌ ಮಿರ್ಜಿ ಅವರಿಗೆ ನೀಡಿದರು.

ನಯನಾ ರಾಜೀನಾಮೆ ನೀಡಲು ಬಂದಿರುವ ವಿಚಾರ ತಿಳಿದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎ.ಎಸ್‌.ಪೊನ್ನಣ್ಣ ಅವರು ತಕ್ಷಣ ಸ್ಪೀಕರ್‌ ಆಪ್ತ ಕಾರ್ಯದರ್ಶಿ ಅಶೋಕ್‌ ಮಿರ್ಜಿ ಅವರ ಕಚೇರಿಗೆ ಆಗಮಿಸಿದರು. ರಾಜೀನಾಮೆ ನೀಡದಂತೆ ನಯನಾ ಅವರ ಮನವೊಲಿಸಲು ಪ್ರಯತ್ನಿಸಿದರು. ಹೀಗಾಗಿ ಸ್ಪೀಕರ್‌ ಆಪ್ತ ಕಾರ್ಯದರ್ಶಿ ಕಚೇರಿಯಲ್ಲಿ ಕೆಲ ಕಾಲ ನಯನಾ ರಾಜೀನಾಮೆ ಹೈಡ್ರಾಮಾ ನಡೆಯಿತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಜಪಾನಿಂದ ಡಿಕೆ ಬಂದ ಬಳಿಕ ಸಾಹುಕಾರ್‌ ಟೀಂಗೆ ಸಂಕಷ್ಟ?
ಮೇಕೆದಾಟು ಯೋಜನೆ ಪರಿಸರ ಪರಿಣಾಮಗಳ ಅಧ್ಯಯನಕ್ಕೆ ಸಮ್ಮತಿ