ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌

Published : Dec 17, 2025, 10:32 AM IST
Belagavi session

ಸಾರಾಂಶ

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಉತ್ತರ ಕರ್ನಾಟಕಕ್ಕೆ ₹15,000 ಕೋಟಿ ವಿಶೇಷ ಅನುದಾನ ನೀಡಿದ್ದು, ಎಲ್ಲ ಕ್ಷೇತ್ರಗಳ ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಕಷ್ಟು ಕೊಡುಗೆ ನೀಡಿದೆ ಎಂದು ಕಾಂಗ್ರೆಸ್‌ ಸದಸ್ಯ ಅಜಯ್‌ ಧರಂಸಿಂಗ್ ಹೇಳಿದ್ದಾರೆ.

 ವಿಧಾನಸಭೆ :  ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಉತ್ತರ ಕರ್ನಾಟಕಕ್ಕೆ ₹15,000 ಕೋಟಿ ವಿಶೇಷ ಅನುದಾನ ನೀಡಿದ್ದು, ಎಲ್ಲ ಕ್ಷೇತ್ರಗಳ ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಕಷ್ಟು ಕೊಡುಗೆ ನೀಡಿದೆ ಎಂದು ಕಾಂಗ್ರೆಸ್‌ ಸದಸ್ಯ ಅಜಯ್‌ ಧರಂಸಿಂಗ್ ಹೇಳಿದ್ದಾರೆ.

₹25,000 ಕೋಟಿಗಳಷ್ಟು ಅನುದಾನ ಹರಿದುಬಂದಿದೆ

2012-13ರಲ್ಲಿ ಯುಪಿಎ ಸರ್ಕಾರ 371 ಜೆ ತಿದ್ದುಪಡಿ ಮಾಡಿದ್ದರಿಂದ ಈವರೆಗೆ ಈ ಭಾಗಕ್ಕೆ ₹25,000 ಕೋಟಿಗಳಷ್ಟು ಅನುದಾನ ಹರಿದುಬಂದಿದೆ. ಈ ಹಿಂದೆ 1999ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿ, ಎಲ್‌.ಕೆ ಅಡ್ವಾಣಿ ಅವರು ಉಪ ಪ್ರಧಾನಮಂತ್ರಿ ಆದಾಗಲೇ 371 ಜೆ ಪ್ರಸ್ತಾಪವನ್ನು ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರ ಕಳುಹಿಸಿತ್ತು. ಆಗ ಬಿಜೆಪಿಯವರು ಇದನ್ನು ಮಾಡಲು ಸಾಧ್ಯವೇ ಇಲ್ಲ ಎಂದು ತಿರಸ್ಕರಿಸಿದ್ದರು.

ಮೊದಲ ವರ್ಷ ₹1,000 ಕೋಟಿ

ಆದರೆ, 2012-13ರಲ್ಲಿ ಪ್ರಧಾನಮಂತ್ರಿಯಾಗಿದ್ದ ದಿ.ಮನಮೋಹನ್‌ಸಿಂಗ್‌, ಕಾಂಗ್ರೆಸ್‌ನ ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್‌ ಅವರಿಂದ 371 ಜೆ ಬಂದಿತ್ತು. ಅದಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ವರ್ಷ ₹1,000 ಕೋಟಿ, 2ನೇ ವರ್ಷ ₹1,500 ಕೋಟಿ ಬಳಿಕ ₹3,000 ಕೋಟಿ, ಈಗ ₹15,000 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಗೃಹಲಕ್ಷ್ಮಿ ಸ್ಕೀಂ ₹5000 ಕೋಟಿ ಹಗರಣ: ಬಿಜೆಪಿ
ಬೆಳಗಾವಿ ಸದನದಲ್ಲೂ ಸಿಎಂ ಕುರ್ಚಿಯ ಕದನ!