;Resize=(412,232))
ಮೈಸೂರು : ನಮ್ಮ ತಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 5 ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ನಾನು ಬೆಳಗಾವಿಯಲ್ಲಿ ಮಾತನಾಡಿದ ಹೇಳಿಕೆಗೆ ಈಗಲೂ ಬದ್ಧವಾಗಿದ್ದು, ಪಕ್ಷ ನೋಟಿಸ್ ಕೊಟ್ಟರೆ ಉತ್ತರ ನೀಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಈ ಮೂಲಕ ತಮ್ಮ ಹೇಳಿಕೆಗೆ ಪಕ್ಷದ ವಲಯದಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗಿದ್ದರೂ ತಮ್ಮ ಹೇಳಿಕೆಗೆ ಈಗಲೂ ತಾವು ಬದ್ಧ ಎಂದು ಪುನರುಚ್ಚರಿಸಿದ್ದಾರೆ.
ಇತ್ತೀಚೆಗೆ ಬೆಳಗಾವಿಯಲ್ಲಿ ಸಿದ್ದರಾಮಯ್ಯ ನಂತರ ಸಚಿವ ಸತೀಶ್ ಜಾರಕಿಹೊಳಿ ಉತ್ತರಾಧಿಕಾರಿ ಎಂಬರ್ಥದಲ್ಲಿ ಸಿಎಂ ಪುತ್ರ ನೀಡಿದ್ದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಮೈಸೂರಲ್ಲಿ ಶನಿವಾರ ಸ್ಪಷ್ಟನೆ ನೀಡಿದ ಡಾ.ಯತೀಂದ್ರ, ನಾನು ಅಂದು ಬೆಳಗಾವಿಯಲ್ಲಿ ನೀಡಿದ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ನಾನು ಏನೂ ಹೇಳಬೇಕೋ ಹೇಳಿದ್ದೇನೆ. ಅನಗತ್ಯವಾಗಿ ಮತ್ತೆ ಅದನ್ನು ಮಾತನಾಡಿ ವಿವಾದ ಸೃಷ್ಟಿಸುವುದಿಲ್ಲ. ನನ್ನ ಹೇಳಿಕೆ ವಿವಾದ ಪಡೆದ ಕೂಡಲೇ ನಾನು ಅದಕ್ಕೆ ಸ್ಪಷ್ಟೀಕರಣ ನೀಡಿದ್ದೇನೆ. ಈ ಬಗ್ಗೆ ಮಾಧ್ಯಮದ ಮುಂದೆ ಏನೂ ಮಾತನಾಡುವುದಿಲ್ಲ ಎಂದರು.
ನನ್ನ ಹೇಳಿಕೆಯನ್ನು ಬೇರೆ ಬೇರೆ ರೀತಿ ಬಿಂಬಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ ಎಂದಿರುವ ಯತೀಂದ್ರ ಅವರು, ಕಾಂಗ್ರೆಸ್ ಆಂತರಿಕ ವಿಚಾರವನ್ನು ಪಕ್ಷದ ಒಳಗೆ ಮಾತಾಡುತ್ತೇನೆ. ಪಕ್ಷದಿಂದ ನೋಟಿಸ್ ಬಂದಾಗ ನೋಡಿಕೊಳ್ಳೋಣ ಬಿಡಿ. ಅದಕ್ಕೆ ನಾನು ಉತ್ತರ ನೀಡುತ್ತೇನೆ ಎಂದು ಟಾಂಗ್ ನೀಡಿದರು.
ದ್ದರಾಮಯ್ಯ ರಾಜಕೀಯ ಸಂಧ್ಯಾ ಕಾಲದಲ್ಲಿದ್ದಾರೆ
ಮೈಸೂರು : ಸಿದ್ದರಾಮಯ್ಯ ರಾಜಕೀಯ ಸಂಧ್ಯಾ ಕಾಲದಲ್ಲಿದ್ದಾರೆ. ರಾಜಕೀಯ ಬದುಕಿನ ಕೊನೆ ಘಟ್ಟದಲ್ಲಿ ಇದ್ದಾರೆ ಎಂದಿದ್ದ ಯತೀಂದ್ರಸಿದ್ದು ಸ್ಥಾನ ತುಂಬುವ ಶಕ್ತಿ ಜಾರಕಿಹೊಳಿಗಿದೆ. ಮುಂದಿನ ದಿನಗಳಲ್ಲಿ ಅವರೇ ಮುನ್ನಡೆಸಬೇಕು ಎಂದು ಸತೀಶ್ ಪರ ಬ್ಯಾಟಿಂಗ್‌ಯತೀಂದ್ರ ಹೇಳಿಕೆಯಿಂದ ಕಾಂಗ್ರೆಸ್‌ನಲ್ಲಿ ಸಂಚಲನ. ಮುಂದಿನ ಸಿಎಂ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ ಎಂದು ಡಿಕೆಶಿ ತಿರುಗೇಟುಡಿಕೆಶಿ ಆಪ್ತ ಕಾಂಗ್ರೆಸ್ ಶಾಸಕರಿಂದಲೂ ಹೇಳಿಕೆಗೆ ಆಕ್ಷೇಪ. ಅದರ ಬೆನ್ನಲ್ಲೇ, ಹೇಳಿಕೆ ಸೈದ್ಧಾಂತಿಕವಾಗಿದ್ದು ಎಂದಿದ್ದ ಯತೀಂದ್ರಆಕ್ಷೇಪದ ಹೊರತಾಗಿಯೂ ಬೆಳಗಾವಿಯಲ್ಲಿ ತಾವು ನೀಡಿದ್ದ ಹೇಳಿಕೆಗೆ ಈಗಲೂ ಬದ್ಧ ಎಂದು ಸಮರ್ಥಿಸಿಕೊಂಡ ಸಿಎಂ ಪುತ್ರ ಜೊತೆಗೆ, ಏನು ಹೇಳಬೇಕಿತ್ತೋ ಅದನ್ನು ಹೇಳಿರುವೆ, ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತನಾಡುವೆ ಎಂದು ನಿಗೂಢ ಮಾತು
''''ನವೆಂಬರ್ ಕ್ರಾಂತಿ'''' ಕೇವಲ ಊಹಾಪೋಹ ಅಷ್ಟೆ. ನಮ್ಮ ಪಕ್ಷದಲ್ಲಿ ಅಂತಹ ಯಾವುದೇ ಚರ್ಚೆ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು 5 ವರ್ಷ ಅಧಿಕಾರ ಪೊರೈಸುತ್ತಾರೆ ಎಂದು ಡಾ.ಯತೀಂದ್ರ ಪುನರುಚ್ಚರಿಸಿದ್ದಾರೆ.
ಬೆಂಗಳೂರು : ‘ಕಾಂಗ್ರೆಸ್ ಸರ್ಕಾರ ರಚನೆಯಾಗುವಾಗಲೇ ಹೈಕಮಾಂಡ್ ನಾಯಕರು ಸಮಯ ಬಂದಾಗ ಸಚಿವ ಸಂಪುಟ ಪುನಾರಚನೆ ಮಾಡುತ್ತೇವೆ ಎಂಬುದಾಗಿ ತಿಳಿಸಿದ್ದರು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ರಚನೆಯಾಗುವಾಗಲೇ ಸಮಯ ಬಂದಾಗ ಹೊಸಬರಿಗೆ, ಅರ್ಹರಿಗೆ ಸಚಿವ ಸ್ಥಾನ ನೀಡುತ್ತೇವೆ ಎಂಬ ಮಾತನ್ನು ವರಿಷ್ಠರೇ ಹೇಳಿದ್ದರು. ಒಂದು ವೇಳೆ ಹೈಕಮಾಂಡ್ ನಾಯಕರು ಸಚಿವ ಸಂಪುಟ ಪುನಾರಚನೆಗೆ ನಿರ್ಧರಿಸಿ, ನನ್ನನ್ನು ಸಂಪುಟದಿಂದ ಹೊರಗಿಡುತ್ತೇವೆ ಎಂದರೂ ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ಕಾಲಕಾಲಕ್ಕೆ ಏನೇನು ಆಗಬೇಕೋ ಅದು ಆಗುತ್ತದೆ. ಸೂಕ್ತ ಸಮಯದಲ್ಲಿ ಅದರ ಬಗ್ಗೆ ವರಿಷ್ಠರೇ ನಿರ್ಧರಿಸುತ್ತಾರೆ. ಸಚಿವ ಸಂಪುಟ ಪುನಾರಚನೆಗೆ ಯಾವಾಗಲೂ ನನ್ನ ಒಪ್ಪಿಗೆಯಿದೆ. ನನ್ನನ್ನು ಹೊರಗಿಟ್ಟು ಅರ್ಹರು, ಅವಕಾಶ ವಂಚಿತರಿಗೆ ಸಚಿವ ಸ್ಥಾನ ನೀಡುತ್ತೇವೆ ಎಂದರೆ ಅದಕ್ಕೂ ನನ್ನ ತಕರಾರಿಲ್ಲ. ಹಿರಿಯರು ಅಥವಾ ಕಿರಿಯರು ಯಾರು ಅರ್ಹರಿದ್ದಾರೋ ಅವರಿಗೆ ಅವಕಾಶ ಸಿಗಬೇಕು. ಇದು ಸ್ವಾಭಾವಿಕ ನ್ಯಾಯ ಎಂದರು.ಕೇಳಿದ್ದಕ್ಕಿಂತ ಹೆಚ್ಚು ನೀಡಿದೆ:
ಕಾಂಗ್ರೆಸ್ ಪಕ್ಷ ನನ್ನ ಸಾಮರ್ಥ್ಯ ಮತ್ತು ಅರ್ಹತೆಗೂ ಮೀರಿ ಅವಕಾಶ ನೀಡಿದೆ. ಮೂರು ಬಾರಿ ನಾನು ಕೇಳದೆಯೇ ಸಚಿವ ಸ್ಥಾನ ನೀಡಿದೆ. ಕೇಳಿದ್ದಕ್ಕಿಂತ ಹೆಚ್ಚು ನೀಡಿದೆ. ಹೈಕಮಾಂಡ್ ಸೂಚಿಸಿದರೆ ಅದನ್ನು ಪಾಲಿಸುವುದು ನನ್ನ ಕರ್ತವ್ಯ. ಇದರಲ್ಲಿ ತ್ಯಾಗವೇನಿಲ್ಲ. ಪಕ್ಷ ಯಾವುದೇ ಸೂಚನೆ ನೀಡಿದರೂ ಸ್ವೀಕರಿಸುತ್ತೇನೆ. ಪಕ್ಷ ನೀಡಿದ ಅವಕಾಶದಿಂದಲೇ ಜನ ಸೇವೆ ಮಾಡಲು ಸಾಧ್ಯವಾಗುತ್ತಿದೆ. ನನಗೆ ನೀಡಿದ ಕೆಲಸವನ್ನು ನನ್ನ ಸಾಮರ್ಥ್ಯ ಮೀರಿ ಮಾಡಿದ್ದೇನೆ. ಅವಕಾಶ ಇದ್ದಷ್ಟು ದಿನ ಕೆಲಸ ಮಾಡುತ್ತೇನೆ ಎಂದು ಹೇಳಿದರು.ಸಚಿವನಾಗಿರುವ ಕಾರಣ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಲು ಸಮಯ ಸಾಕಾಗುತ್ತಿಲ್ಲ. ರಾಜ್ಯದ ಜವಾಬ್ದಾರಿಯಿಂದ ಕ್ಷೇತ್ರಕ್ಕೆ ಸಮಯ ನೀಡಲಾಗುತ್ತಿಲ್ಲ. ಕ್ಷೇತ್ರದಲ್ಲೇ ಸಾಕಷ್ಟು ಕೆಲಸವಿದ್ದು, ಸಚಿವ ಸ್ಥಾನ ಇಲ್ಲದಿದ್ದರೆ ಅದನ್ನು ಮಾಡುತ್ತೇನೆ. ನಾನು ಅವಕಾಶದ ವಿಚಾರದಲ್ಲಿ ಹೊಟ್ಟೆ ತುಂಬಿದವನು. ಆದರೆ, ಕೆಲಸದಲ್ಲಿ ಹೊಟ್ಟೆ ತುಂಬಿಲ್ಲ. ಕೆಲಸ ಮಾಡಲು ದಿನದ 24 ಗಂಟೆಯೂ ಸಾಲುತ್ತಿಲ್ಲ ಎಂದು ತಿಳಿಸಿದರು.