ಎಸ್.ಎಂ. ಕೃಷ್ಣ ನಿಧನ ತುಂಬಲಾರದ ನಷ್ಟ: ಸೈಯದ್ ಖಾಲಿದ್ ಅಹ್ಮದ್

KannadaprabhaNewsNetwork |  
Published : Dec 11, 2024, 12:47 AM IST
ಕ್ಯಾಪ್ಷನ10ಕೆಡಿವಿಜಿ42 ಸೈಯದ್ ಖಾಲಿದ್ ಅಹ್ಮದ್.........ಕ್ಯಾಪ್ಷನ10ಕೆಡಿವಿಜಿ43 ಜಿ.ಬಿ.ವಿನಯಕುಮಾರ್ | Kannada Prabha

ಸಾರಾಂಶ

SM Krishna's death is an irreparable loss: Syed Khalid Ahmed

ದಾವಣಗೆರೆ: ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಯುವ ರಾಜಕಾರಣಿಗಳಿಗೆ ಮಾದರಿ. ಆಡಳಿತ ವೈಖರಿ, ವಹಿಸಿದ ಜವಾಬ್ದಾರಿ ನಿರ್ವಹಿಸುವ ರೀತಿ ಎಲ್ಲಾ ಪಕ್ಷದವರೂ ಪಕ್ಷಬೇಧ ಮರೆತು ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಈ ದೇಶ ಕಂಡ ಅದ್ವಿತೀಯ ನಾಯಕ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಸಂತಾಪ ಸೂಚಿಸಿದ್ದಾರೆ. ಎಸ್. ಎಂ. ಕೃಷ್ಣ ಅವರು ಎಂದಿಗೂ ದ್ವೇಷದ ರಾಜಕಾರಣ ಮಾಡಿದವರಲ್ಲ, ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಲು ಶ್ರಮಿಸಿದವರು. ಐಟಿಬಿಟಿ ಇಷ್ಟೊಂದು ವೇಗದಲ್ಲಿ ಬೆಳೆಯಲು ಪ್ರಮುಖ ಕಾರಣ ಎಸ್. ಎಂ. ಕೃಷ್ಣರ ದೂರದೃಷ್ಟಿತ್ವವೇ ಕಾರಣ. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಸಲ್ಲಿಸಿರುವ ಸೇವೆ ಅನನ್ಯ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

......

ಕ್ಯಾಪ್ಷನ10ಕೆಡಿವಿಜಿ42 ಸೈಯದ್ ಖಾಲಿದ್ ಅಹ್ಮದ್

.........

ಎಸ್.ಎಂ.ಕೃಷ್ಣ ದೇಶ ಕಂಡ ಅಪರೂಪದ ರಾಜಕಾರಣಿ: ವಿನಯ್ ಕುಮಾರ್

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ದೇಶ ಕಂಡ ಅಪರೂಪದ ರಾಜಕಾರಣಿ. ಮುಖ್ಯಮಂತ್ರಿಯಾದ ವೇಳೆ ಬೆಂಗಳೂರು ಐಟಿಬಿಟಿ ಉತ್ತೇಜನಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಐಟಿಬಿಟಿ ಹಬ್ ಮಾಡಿದ ಕೀರ್ತಿ ಸಲ್ಲುತ್ತದೆ. ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ, ಸಂಸದರಾಗಿ ಸಲ್ಲಿಸಿರುವ ಸೇವೆ ಅನನ್ಯ. ನಾಡು ಕಂಡ ಅಪರೂಪದ ರಾಜಕಾರಣಿ ಎಂದು ಸ್ವಾಭಿಮಾನಿ ಬಳಗದ ಅಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ತಿಳಿಸಿದ್ದಾರೆ.ಎಸ್.ಎಂ.ಕೃಷ್ಣ ಅವರದ್ದು ಸುದೀರ್ಘ ರಾಜಕಾರಣ. ರಾಜಕೀಯದಲ್ಲಿ ವಿರೋಧಿಗಳು ಇದ್ದೇ ಇರುತ್ತಾರೆ. ಆದ್ರೆ, ಎಸ್.ಎಂ.ಕೃಷ್ಣರ ವಿಚಾರದಲ್ಲಿ ಇದಕ್ಕೆ ತದ್ವಿರುದ್ಧ. ಕಾಂಗ್ರೆಸ್ ನಲ್ಲಿ 46 ವರ್ಷ ಇದ್ದ ಅವರು, ಬಳಿಕ ಬಿಜೆಪಿಗೆ ಸೇರಿದರು. ಆದರೂ ತತ್ವ, ಸಿದ್ಧಾಂತದಲ್ಲಿ ರಾಜಿ ಆಗಿರಲಿಲ್ಲ. ಸಾವಿರಾರು ಯುವಕರಿಗೆ ಅವರ ರಾಜಕೀಯ ಜೀವನ, ನಡೆ, ನುಡಿ, ಆದರ್ಶ ದಾರಿದೀಪ ಎಂದು ಅವರು ಸಂತಾಪ ಸೂಚಕ ಸಂದೇಶದಲ್ಲಿ ಹೇಳಿದ್ದಾರೆ.

.........

ಕ್ಯಾಪ್ಷನ10ಕೆಡಿವಿಜಿ43 ಜಿ.ಬಿ.ವಿನಯಕುಮಾರ್

PREV

Recommended Stories

''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ಶೇ.40 ಕಮಿಷನ್‌ ಆರೋಪ : ನ್ಯಾ. ದಾಸ್‌ ವರದಿ ಪರಿಶೀಲನೆಗೆ ಮತ್ತೊಂದು ಸಮಿತಿ