ರಾಷ್ಟ್ರರಾಜಧಾನಿ ದೆಹಲಿಯ ರೈಲು ನಿಲ್ದಾಣದಲ್ಲಿ ಕುಂಭ ಯಾತ್ರಿಕರ ಕಾಲ್ತುಳಿತ : 15 ಸಾವು

KannadaprabhaNewsNetwork |  
Published : Feb 16, 2025, 01:47 AM ISTUpdated : Feb 16, 2025, 04:05 AM IST
ಕಾಲ್ತುಳಿತ | Kannada Prabha

ಸಾರಾಂಶ

ರಾಷ್ಟ್ರರಾಜಧಾನಿ ದೆಹಲಿಯ ನವದೆಹಲಿ ರೈಲು ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಕಾಲ್ತುಳಿತ ಸಂಭವಿಸಿದೆ. ಪರಿಣಾಮ 15 ಜನರು ಬಲಿಯಾಗಿದ್ದಾರೆ.

 ನವದೆಹಲಿ: ಕುಂಭಮೇಳಕ್ಕೆ ಹೊರಟಿದ್ದ ಭಕ್ತರಿಂದ ತುಂಬಿದ್ದ ನವದೆಹಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಭೀಕರ ಕಾಲ್ತುಳಿತ ಸಂಭವಿಸಿದ್ದು, ದುರ್ಘಟನೆಯಲ್ಲಿ 15 ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕಳೆದ ಜ.29ರಂದು ಮೌನಿ ಅಮಾವಾಸ್ಯೆಯಂದು ಪ್ರಯಾಗ್‌ರಾಜ್‌ನ ಕುಂಭಮೇಳ ಸ್ಥಳದಲ್ಲಿ ಕಾಲ್ತುಳಿತ ಉಂಟಾಗಿ 30 ಜನರು ಸಾವನ್ನಪ್ಪಿದ ಭೀಕರ ಘಟನೆ ಮಾಸುವ ಮುನ್ನವೇ ಈ ದುರ್ಘಟನೆ ಸಂಭವಿಸಿದೆ. ಘಟನೆ ಸಂಬಂಧ ಪ್ರಧಾನಿ ಮೋದಿ, ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಸಕ್ಸೇನಾ ಸೇರಿ ಗಣ್ಯರು ಕಂಬನಿ ಮಿಡಿದಿದ್ದಾರೆ.

ಏನಾಯ್ತು:ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳುವವರಿಗೆ ಅನುಕೂಲ ಮಾಡಿಕೊಡಲು 2 ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ರೈಲುಗಳಿಗೂ ಮುನ್ನ ತೆರಳಬೇಕಿದ್ದ ಭುವನೇಶ್ವರ ರಾಜಧಾನಿ ಮತ್ತು ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್‌ ರೈಲುಗಳು ತಡವಾದ ಕಾರಣ ರೈಲು ನಿಲ್ದಾಣದಲ್ಲಿ ಒಮ್ಮೆಗೆ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಭಾರಿ ಹೆಚ್ಚಳವಾಗಿದೆ.ಈ ನಡುವೆ ರಾತ್ರಿ 9.55ರ ವೇಳೆಗೆ ಫ್ಲಾಟ್‌ಫಾರ್ಮ್‌ 14-15ಕ್ಕೆ ಪ್ರಯಾಗ್‌ರಾಜ್‌ಗೆ ಹೊರಟ ವಿಶೇಷ ರೈಲು ನಿಲ್ದಾಣಕ್ಕೆ ಆಗಮಿಸಿದೆ. ಈ ವೇಳೆ ಸಾವಿರಾರು ಜನರು ಏಕಾಏಕಿ ರೈಲಿನೊಳಗೆ ನುಗ್ಗುವ ಪ್ರಯಾಣ ಮಾಡಿದ್ದಾರೆ. ಹೀಗಾಗಿ ರೈಲಿನ ಒಳಗೆ ಮತ್ತು ಹೊರಗೆ ಕಾಲ್ತುಳಿಸ ಸಂಭವಿಸಿ, ಮಹಿಳೆಯರು, ಮಕ್ಕಳು ಸೇರಿ 15 ಜನರು ಸಾವನ್ನಪ್ಪಿದ್ದಾರೆ. ಹಲವರು ಘಟನೆಯಲ್ಲಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾಸ್ಥಳಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಭೇಟಿ ನೀಡಿದ್ದು, ತನಿಖೆಗೆ ಆದೇಶಿಸಿದ್ದಾರೆ.

- ಪ್ರಯಾಗ್‌ರಾಜ್‌ಗೆ ತೆರಳುವ ರೈಲು ಹತ್ತುವ ವೇಳೆ ದುರಂತ । ನೂಕುನುಗ್ಗಲಿಗೆ ಸಿಲುಕಿ ಸಾವು

- ಕುಂಭಮೇಳ ಸ್ಥಳದಲ್ಲಿ ಕಾಲ್ತುಳಿತಕ್ಕೆ 30 ಜನರ ಸಾವಿನ ಬೆನ್ನಲ್ಲೇ ಮತ್ತೊಂದು ಭೀಕರ ಘಟನೆ==ಎಲ್ಲಿ?:

ನವದೆಹಲಿ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರ್ಮ್‌ 14,15ರ ಬಳಿ

--ಯಾವಾಗ:

ಶನಿವಾರ ರಾತ್ರಿ 9.55ರ ವೇಳೆಗೆ ದುರ್ಘಟನೆ

--ಏನಾಯ್ತು?:

ಪ್ರಯಾಗ್‌ರಾಜ್‌ಗೆ ಹೊರಟ 2 ರೈಲು ಆಗಮನ ವಿಳಂಬ. ಜೊತೆಗೆ ಇನ್ನೂ 2 ಎರಡು ರೈಲುಗಳ ಸಂಚಾರ ವಿಳಂಬ. ಹೀಗಾಗಿ ನಿಲ್ದಾಣದಲ್ಲಿ ಒಮ್ಮೆಗೆ ಭಾರೀ ಜನಸಂದಣಿ. ಈ ವೇಳೆ ಪ್ರಯಾಗ್‌ರಾಜ್‌ಗೆ ವಿಶೇಷ ರೈಲು ಆಗಮನ. ರೈಲು ಹತ್ತಲು ಜನರ ನೂಕುನುಗ್ಗಲು ಸಂಭವಿಸಿ ರೈಲಿನ ಒಳಗೆ, ಹೊರಗೆ 15 ಜನರ ಸಾವು

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ
ಶೆಡ್‌ ತೆರವಿನ ಪ್ರಕರಣದಲ್ಲಿ ಪಾಕ್‌ ಹಸ್ತಕ್ಷೇಪಕ್ಕೆ ಕೈ ಕಿಡಿ