ರಾಜ್ಯ ಕಾಂಗ್ರೆಸ್ ಸುಭದ್ರ : ಶಾಸಕ ನಂಜೇಗೌಡ

KannadaprabhaNewsNetwork |  
Published : Jun 08, 2024, 12:36 AM ISTUpdated : Jun 08, 2024, 04:21 AM IST
7 ಕ.ಟಿ.ಇ.ಕೆ ಚಿತ್ರ 1 : ಟೇಕಲ್ ನ ಕೆಜಿ ಹಳ್ಳಿಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಗೆಲುವಿನ ಹಿನ್ನೆಲೆಯಲ್ಲಿ ವಿಜಯೋತ್ಸವದಲ್ಲಿ ಶಾಸಕ ಕೆ.ವೈ.ನಂಜೇಗೌಡರು ಭಾಗವಹಿಸಿದ್ದರು | Kannada Prabha

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಮಾಲೂರು ತಾಲೂಕಿನಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ನೀಡಿದ್ದು ಕಾಂಗ್ರೆಸ್ ಅಭ್ಯರ್ಥಿ ಹೆಚ್ಚು ಮತ ಗಳಿಸಲು ಸಾಧ್ಯವಾಯಿತು. ನನ್ನ ತಾಲೂಕಿನ ಜನ ನನ್ನ ಕೈ ಬಿಡುವುದಿಲ್ಲ ಎಂಬುದು ಸಾಬೀತಾಗಿದೆ ಎನ್ನುವುದು ಶಾಸಕ ನಂಜೇಗೌಡ ಅಭಿಪ್ರಾಯ

  ಟೇಕಲ್ : ಕಾಂಗ್ರೆಸ್ ರಾಜ್ಯದಲ್ಲಿ ತನ್ನದೆ ಆದ ಸ್ಥಾನ ಪಡೆದಿದ್ದು ಮಹತ್ವದ ಘಟ್ಟವನ್ನು ತಲುಪುತ್ತಿದೆ. ಅಗ್ನೇಯ ಪದವೀಧರ ಶಿಕ್ಷಕರ ಕ್ಷೇತ್ರದಲ್ಲಿ ಶ್ರೀನಿವಾಸ್ ರವರಿಗೆ ಹೆಚ್ಚು ಪ್ರಾಶಸ್ತ್ಯ ಮತ ನೀಡಿದ ಶಿಕ್ಷಕ ವೃಂದ ಅವರ ಗೆಲುವಿಗೆ ಶ್ರಮಿಸಿದೆ ಅದಕ್ಕೆ ನಾನು ಚಿರಋಣಿ ಎಂದು ಶಾಸಕ ಕೆ ವೈ ನಂಜೇಗೌಡರು ತಿಳಿಸಿದರು.

ಅವರು ಟೇಕಲ್ ಕೆ.ಜಿ.ಹಳ್ಳಿಯಲ್ಲಿ ಕಾರ್ಯಕರ್ತರು ವಿಜಯೋತ್ಸವದಲ್ಲಿ ಮಾತನಾಡಿ, ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಾಲೂರು ತಾಲೂಕಿನಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ನೀಡಿದ್ದು ಕಾಂಗ್ರೆಸ್ ಅಭ್ಯರ್ಥಿ ಹೆಚ್ಚು ಮತ ಗಳಿಸಲು ಸಾಧ್ಯವಾಯಿತು.

 ನನ್ನ ತಾಲೂಕಿನ ಜನ ನನ್ನ ಕೈ ಬಿಡುವುದಿಲ್ಲ ಎಂಬುದು ಸಾಬೀತಾಗಿದೆ ಎಂದರು.ಎಲ್ಲ ಕಚೇರಿಗಳು ಒಂದೇ ಕಡೆ ಮುಖ್ಯವಾಗಿ ಕೆ.ಜಿ.ಹಳ್ಳಿ ಗ್ರಾಪಂ ನಲ್ಲಿ ಹಾಗೂ ಕೆ.ಜಿ.ಹಳ್ಳಿಯನ್ನು ಮಾದರಿ ಮಾಡಲು ಸುಮಾರು 35 ಎಕರೆ ಪ್ರದೇಶವನ್ನು ಸರ್ಕಾರಿ ಕಚೇರಿಗಳಿಗೆ ಮೀಸಲಿಟ್ಟು ಕಾಲೇಜು, ಐಟಿಐ ಕಾಲೇಜು, ನಾಡ ಕಚೇರಿ, ಅಂಬೆಡ್ಕರ್ ಭವನ, ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರ, ಇನ್ನೂ ಹಲವು ಕಟ್ಟಡಗಳು ಕಟ್ಟಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು. ಇದನ್ನೆಲ್ಲ ಕೆಲವು ಯುವಕರು ಮರೆತಿದ್ದಾರೆ.

 ಪದವೀಧರರ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಪರ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಪದವಿಧರ ಶಿಕ್ಷಕರ ಗೆಲುವಿಗೆ ಶ್ರಮಿಸಿದರೆಂದು ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆಜಿ ಹಳ್ಳಿ ಗ್ರಾಪಂ ಅಧ್ಯಕ್ಷ ಎಸ್.ಆರ್. ಯಲ್ಲಪ್ಪ, ಉಪಾಧ್ಯಕ್ಷರು ಮಮತಾ ಶಶಿಧರ, ಗ್ರಾ.ಪಂ.ಸದಸ್ಯರು ಕೆ.ಎಸ್. ವೆಂಕಟೇಶ್, ಬಗರ್ ಹುಕಂನ ಸತೀಶ್ ಬಾಬು. ಶಾಲಾಭಿವೃಧ್ಧಿ ಸಮಿತಿ ಅಧ್ಯಕ್ಷ ಎಚ್.ವಿ.ವಿನೋದ್ ಗೌಡ, ಶಿಕ್ಷಕ ವೃಂದದ ಶಶಿಧರ, ಎ.ಕೆ.ವೆಂಕಟೇಶ್, ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್ ರಾಜಣ್ಣ, ಪ್ರಗತಿ ಶ್ರೀನಿವಾಸ್, ಮುಂತಾದವರು ಉಪಸ್ಥಿತರಿದ್ದರು

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ