ಪಕ್ಷಾತೀತವಾಗಿ ಎಲ್ಲರ ಮತ ಹಕ್ಕು ರಕ್ಷಣೆಗೆ ಕ್ರಮ: ಡಿಕೆಶಿ

Published : Jul 06, 2026, 06:46 AM IST
DK Shivakumar

ಸಾರಾಂಶ

ರಾಜ್ಯದಲ್ಲಿ ವಿಶೇಷ ತೀವ್ರ ಮತ ಪರಿಷ್ಕರಣೆ (ಎಸ್‌ಐಆರ್‌) ಸರಿಯಾಗಿ ನಡೆಯುತ್ತಿಲ್ಲ ಎಂದು ಪ್ರತಿಪಕ್ಷದವರು ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ‘ವಿರೋಧ ಪಕ್ಷದವರಿಗೆ ಅರೋಪ ಮಾಡುವುದೇ ಕೆಲಸ. ಮಾಡಿಕೊಳ್ಳಲಿ.

 ಬೆಂಗಳೂರು :  ರಾಜ್ಯದಲ್ಲಿ ವಿಶೇಷ ತೀವ್ರ ಮತ ಪರಿಷ್ಕರಣೆ (ಎಸ್‌ಐಆರ್‌) ಸರಿಯಾಗಿ ನಡೆಯುತ್ತಿಲ್ಲ ಎಂದು ಪ್ರತಿಪಕ್ಷದವರು ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ‘ವಿರೋಧ ಪಕ್ಷದವರಿಗೆ ಅರೋಪ ಮಾಡುವುದೇ ಕೆಲಸ. ಮಾಡಿಕೊಳ್ಳಲಿ.  

ಪಕ್ಷಾತೀತವಾಗಿ ಎಲ್ಲ ಮತದಾರರ ಹಕ್ಕು ಉಳಿಸಬೇಕು

ಪಕ್ಷಾತೀತವಾಗಿ ಎಲ್ಲ ಮತದಾರರ ಹಕ್ಕು ಉಳಿಸಬೇಕು ಎಂಬುದಷ್ಟೇ ನಮ್ಮ ಉದ್ದೇಶ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದಿದ್ದಾರೆ.

ಭಾನುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಮಾತು ಹೇಳಿದರು.

ಪ್ರತಿಪಕ್ಷಗಳು ಇರುವುದೇ ಆರೋಪ ಮಾಡಲು

‘ಪ್ರತಿಪಕ್ಷಗಳು ಇರುವುದೇ ಆರೋಪ ಮಾಡಲು. ಮಾಡಿಕೊಳ್ಳಲಿ. ಸರ್ಕಾರ ಇರುವುದು ಎಲ್ಲರಿಗೂ ನ್ಯಾಯ ಒದಗಿಸಲು. ಆ ಕೆಲಸ ನಾವು ಮಾಡುತ್ತೇವೆ. ರಾಜ್ಯದ ಎಲ್ಲ ಅರ್ಹ ಮತದಾರರ ಮತದಾನದ ಹಕ್ಕು ಉಳಿಯಬೇಕು ಎಂಬುದು ನಮ್ಮ ಉದ್ದೇಶ. ಎಲ್ಲರೂ ತಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಿ ಎಂದು ಮನವಿ ಮಾಡಿದ್ದೇವೆ. ನಮ್ಮದೂ ಪ್ರತಿಭಟನೆ ಇದೆ. ಅದನ್ನು ನ್ಯಾಯಬದ್ಧವಾಗಿ ಎಲ್ಲಿ ಪ್ರತಿಭಟಿಸಬೇಕೋ ಪ್ರತಿಭಟಿಸುತ್ತೇವೆ’ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಕೇಂದ್ರ ಚು.ಆಯೋಗ ತಂಡ ಇಂದು ರಾಜ್ಯಕ್ಕೆ
ಎಸ್‌ಐಆರ್‌ ಹೋರಾಟಕ್ಕೆ ಬಿಜೆಪಿ ಲಗ್ಗೆ