ನಂಬರ್‌ ಒನ್‌ ಸಚಿವ ಎಂದು ಸುರ್ಜೇವಾಲಾ ಹೊಗಳಿದ್ರು - ನನ್ನ ಪಾಲಿಗೆ ಇದು ಬಹುಮಾನ: ಜಮೀರ್‌

Published : Jul 15, 2025, 09:02 AM IST
Zameer ahmed khan

ಸಾರಾಂಶ

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರು ನನ್ನನ್ನು ನಂಬರ್‌ ಒನ್ ಸಚಿವ ಎಂದು ಹೊಗಳಿದ್ದಾರೆ. ಎಲ್ಲಾ ಸಚಿವರಿಗೂ ಹೋಲಿಸಿದರೆ ಮೊದಲ ಸ್ಥಾನ ನಿಮಗೆ ಕೊಡುತ್ತೇನೆ ಎಂದಿರುವುದು ಖುಷಿ ತಂದಿದೆ ಎಂದು ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದರು.

  ಬೆಂಗಳೂರು :  ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರು ನನ್ನನ್ನು ನಂಬರ್‌ ಒನ್ ಸಚಿವ ಎಂದು ಹೊಗಳಿದ್ದಾರೆ. ಎಲ್ಲಾ ಸಚಿವರಿಗೂ ಹೋಲಿಸಿದರೆ ಮೊದಲ ಸ್ಥಾನ ನಿಮಗೆ ಕೊಡುತ್ತೇನೆ ಎಂದಿರುವುದು ಖುಷಿ ತಂದಿದೆ ಎಂದು ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಸುರ್ಜೇವಾಲಾ ಜತೆಗಿನ ಸಭೆ ಬಳಿಕ ಸೋಮವಾರ ಮಾತನಾಡಿ, 103 ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಇದೀಗ ನನ್ನೊಂದಿಗೆ ಸಭೆ ನಡೆಸಿದ್ದಾರೆ. ಹಲವು ಶಾಸಕರು ನೀಡಿರುವ ಮನೆ ಹಂಚಿಕೆ ಸೇರಿ ವಿವಿಧ ಬೇಡಿಕೆಗಳ ಪಟ್ಟಿಯನ್ನು ನೀಡಿದ್ದಾರೆ. ಸುರ್ಜೇವಾಲಾ ಅವರು ಯಾರಿಗೂ ಖುಷಿಪಡಿಸುವಂತೆ ಮಾತನಾಡುವವರಲ್ಲ. ಇದ್ದದ್ದನ್ನು ಇದ್ದಂತೆ ಹೇಳುವವರು ಅವರು ನನಗೆ ಬಹುಮಾನದ ರೀತಿಯಲ್ಲಿ ಮೆಚ್ಚುಗೆ ನೀಡಿರುವುದು ಖುಷಿ ತಂದಿದೆ ಎಂದರು.

ನಿಮ್ಮ ಬಗ್ಗೆಯೇ ಬಿ.ಆರ್. ಪಾಟೀಲ್ ದೂರು ನೀಡಿದ್ದರಲ್ಲಾ ಎಂಬ ಪ್ರಶ್ನೆಗೆ, ನಮ್ಮ ಇಲಾಖೆಯಲ್ಲಿ ಸರಿಯಾಗಿ ಕೆಲಸ ಮಾಡಿಲ್ಲ ಎಂದರೆ ಸುರ್ಜೇವಾಲಾ ಅವರು ಹೊಗಳಿಗೆ ನೀಡುತ್ತಿದ್ದರಾ? ಬಿ.ಆರ್. ಪಾಟೀಲ್‌ ಅವರು ನನ್ನ ವಿರುದ್ಧ ಯಾವುದೇ ಆರೋಪ ಮಾಡಿಲ್ಲ. ಅವರ ಆರೋಪವನ್ನು ಮೊದಲು ಕೇಳಿ ಎಂದರು.

PREV
Read more Articles on

Recommended Stories

ಭಾರತದ ಸದೃಢ ಆರ್ಥಿಕತೆಗೆ ನೇತಾಜಿ ಬುನಾದಿ : ಡಾ.ಜಿ.ಪರಮೇಶ್ವರ್‌
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಾಗಮೋಹನ್‌ ದಾಸ್ ಆಯೋಗ ಶಿಫಾರಸು