ಶಿಕ್ಷಕರ ಕ್ಷೇತ್ರ: ಬಿಜೆಪಿ ಅಬ್ಬರ, ಕಾಂಗ್ರೆಸ್‌ಗೆ ಮಂಕು

KannadaprabhaNewsNetwork |  
Published : May 31, 2024, 02:15 AM ISTUpdated : May 31, 2024, 04:07 AM IST
30ಕೆಬಿಪಿಟಿ.1.ಬಂಗಾರಪೇಟೆ ಕ್ಷೇತ್ರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪರ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಜಂಟಿಯಾಗಿ ಪ್ರಚಾರ ಮಾಡುತ್ತಿರುವುದು. | Kannada Prabha

ಸಾರಾಂಶ

ನಾಪತ್ರಗಳನ್ನು ಸಲ್ಲಿಸುವ ಮೊದಲು ಹಾಗೂ ನಂತರ ಎರಡು ದಿನಗಳು ಮಾತ್ರ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನೇತೃತ್ವದಲ್ಲಿ ಎರಡು ಸಭೆಗಳನ್ನು ಕರೆದಿದ್ದು ಬಿಟ್ಟರೆ ಎಲ್ಲಿಯೂ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರ ಯಾರೂ ಪ್ರಚಾರ ಮಾಡುತ್ತಿರುವುದು ಕಂಡು ಬಂದಿಲ್ಲ.

 ಬಂಗಾರಪೇಟೆ :  ಜೂನ್ ೩ರಂದು ನಡೆಯುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ನಿತ್ಯ ಮುಖಂಡರು ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆಗೆ ಯಾರೂ ಆಸಕ್ತಿ ತೋರುತ್ತಿರುವುದು ಅಚ್ಚರಿ ಮೂಡಿಸಿದೆ.

ನಾಪತ್ರಗಳನ್ನು ಸಲ್ಲಿಸುವ ಮೊದಲು ಹಾಗೂ ನಂತರ ಎರಡು ದಿನಗಳು ಮಾತ್ರ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನೇತೃತ್ವದಲ್ಲಿ ಎರಡು ಸಭೆಗಳನ್ನು ಕರೆದಿದ್ದು ಬಿಟ್ಟರೆ ಎಲ್ಲಿಯೂ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರ ಯಾರೂ ಪ್ರಚಾರ ಮಾಡುತ್ತಿರುವುದು ಕಂಡು ಬಂದಿಲ್ಲ.

ಶಾಸಕರ ವಿದೇಶ ಪ್ರವಾಸ

ಕ್ಷೇತ್ರದಲ್ಲಿ ಪ್ರಚಾರದ ಜವಾಬ್ದಾರಿ ವಹಿಸಿಕೊಂಡಿದ್ದ ಶಾಸಕರೂ ಈಗ ವಿದೇಶ ಪ್ರವಾಸದಲ್ಲಿರುವುದರಿಂದ ಪ್ರಚಾರ ಮಂಕಾಗಿದೆ. ಆದರೆ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ಹಾಲಿ ಶಾಸಕ ವೈ.ಎ.ನಾರಾಯಣಸ್ವಾಮಿ ಪರ ನಿತ್ಯ ಎರಡೂ ಪಕ್ಷಗಳ ನಾಯಕರು ಜಂಟಿಯಾಗಿ ಶಾಲಾ ಕಾಲೇಜುಗಳಿಗೆ ತೆರಳಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ.ಗುರುವಾರ ಬಿಜೆಪಿ,ಜೆಡಿಎಸ್ ನಾಯಕರು ಜಂಟಿಯಾಗಿ ತೆರಳಿ ಕೆ.ಸಿ.ರೆಡ್ಡಿ ಹಾಗೂ ಶುಭಾಷಿಣಿ ಕಾಲೇಜುಗಳಲ್ಲಿ ಮೈತ್ರಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಬಳಿಕ ಮಾತನಾಡಿದ ಮಾಜಿ ಜಿಪಂ ಸದಸ್ಯ ಬಿ.ವಿ.ಮಹೇಶ್ ಕ್ಷೇತ್ರದಲ್ಲಿ ೪೩೫ ಮತದಾರರಿದ್ದು ಈ ಪೈಕಿ ಮೈತ್ರಿ ಅಭ್ಯರ್ಥಿಗೆ ೩೦೦ಕ್ಕೂ ಹೆಚ್ಚಿನ ಮತಗಳು ಲಭಿಸುವ ಎಲ್ಲಾ ವಿಶ್ವಾಸ ಶಿಕ್ಷಕರಿಂದ ದೊರೆಯುತ್ತಿದೆ. ಇದಕ್ಕೆಲ್ಲಾ ವೈ.ಎ.ನಾರಾಯಣಸ್ವಾಮಿ ಮೂರು ಬಾರಿ ಶಾಸಕರ ಅವದಿಯಲ್ಲಿ ಶಾಲಾ ಕಾಲೇಜುಗಳಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳೇ ಸಾಕ್ಷಿ ಎಂದರು.

ಶಿಕ್ಷಕರ ಧ್ವನಿಯಾಗಿ ಕೆಲಸ

ಶಿಕ್ಷಕರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವರಾಗಿರುವ ವೈ.ಎ.ನಾರಾಯಣಸ್ವಾಮಿಗೆ ಮತ ನೀಡಿದರೆ ಶಿಕ್ಷಕರ ಧ್ವನಿಯಾಗಿ ಪರಿಷತ್‌ನಲ್ಲಿ ಹೋರಾಡಲು ಮತ್ತಷ್ಟು ಶಕ್ತಿ ಬರುತ್ತದೆ,ಆದ್ದರಿಂದ ಬರೀ ಸುಳ್ಳು ಭರವಸೆಗಳ ನಂಬಿ ಮತವನ್ನು ವ್ಯರ್ಥ ಮಾಡಿಕೊಳ್ಳಲದೆ ಮತ ಸಾರ್ಥಕವಾಗುವಂತೆ ಯೋಚಿಸಿ ಮತ ನೀಡಿ ಎಂದು ಮನವಿ ಮಾಡಿದರು.ಜೆಡಿಎಸ್ ತಾಲೂಕು ಅಧ್ಯಕ್ಷ ಮುನಿರಾಜು ಮಾತನಾಡಿ ಲೋಕಸಮರದಲ್ಲಿ ಕೋಲಾರದಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲುವ ಎಲ್ಲಾ ಲಕ್ಷಣಗಳಿವೆ,ಇದೇ ರೀತಿ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರ ಶಿಕ್ಷಕರು ನಿಂತರೆ ಇಬ್ಬರೂ ಜಂಟಿಯಾಗಿ ಜಿಲ್ಲೆ ಅಭಿವೃದ್ದಿಗೆ ಆನೆ ಬರಲಿದೆ ಎಂದರು.

PREV