ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿರುವ ನಂದಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ಮುಂಜೂರಾಗಿದ್ದ 50 ಹಾಸಿಗೆಗಳ ಐಸಿಯು ಘಟಕವನ್ನು ಚಿಂತಾಮಣಿಗೆ ನೀಡಿದ್ದು ಆರೋಗ್ಯ ಸಚಿವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ಸ್ಪಷ್ಟಪಡಿಸಿದರು.
ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿರುವ ನಂದಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ಮುಂಜೂರಾಗಿದ್ದ 50 ಹಾಸಿಗೆಗಳ ಐಸಿಯು ಘಟಕವನ್ನು ಚಿಂತಾಮಣಿಗೆ ನೀಡಿದ್ದು ಆರೋಗ್ಯ ಸಚಿವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ಸ್ಪಷ್ಟಪಡಿಸಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೆಡಿಕಲ್ ಕಾಲೇಜಿನ ಆಸ್ಪತ್ರೆಗೆ ಮುಂಜೂರಾಗಿದ್ದ 50 ಐಸಿಯು ಘಟಕಗಳನ್ನು ಚಿಂತಾಮಣಿಗೆ ವರ್ಗಾವಣೆ ಮಾಡಿಸಿದ್ದಾಗಿ ಸಂಸದ ಡಾ.ಸುಧಾಕರ್ ಮಾಡಿರುವ ಆರೋಪಕ್ಕೆ ಮೇಲಿನಂತೆ ಉತ್ತರಿಸಿದರು.
ಘಟಕಕ್ಕೆ ಸ್ಥಾಪನೆಗೆ ಜಾಗ ಇರಲಿಲ್ಲ
ಐಸಿಯು ಘಟಕ ನಿರ್ಮಾಣಕ್ಕೆ ಕನಿಷ್ಠ ಒಂದು ಎಕರೆ ಜಮೀನು ಬೇಕು. ಅಷ್ಷು ಜಾಗ ಜಿಲ್ಲಾ ಕೇಂದ್ರದಲ್ಲಿ ಇಲ್ಲ. ಇಡೀ ಜಿಲ್ಲೆಯಲ್ಲೆ ಮೂವತ್ತು ವರ್ಷಗಳ ಹಿಂದೆಯೆ ನೂರು ಬೆಡ್ ಇರುವ ಆಸ್ಪತ್ರೆ ಚಿಂತಾಮಣಿಯಲ್ಲಿದೆ. ಇತ್ತೀಚೆಗೆ ಆರೋಗ್ಯ ಸಚಿವರು ಬಂದು ಸ್ಥಳ ನೋಡಿದಾಗ ಅಲ್ಲಿ ಐಸಿಯು ಘಟಕ ಸ್ಥಾಪಿಸುವ ಅವಶ್ಯಕತೆ ಇದೆ ಎಂದು ಅಲ್ಲಿಗೆ ನೀಡಿದ್ದಾರೆ. ಚಿಂತಾಮಣಿ ತಾಲೂಕೇನು ಹೊರಗಡೆ ಜಿಲ್ಲೆಯಲ್ಲಿದೆಯಾ, ಅದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೆ ಇದೆಯಲ್ಲಾ ಎಂದರು.
ಮೆಡಿಕಲ್ ಕಾಲೇಜ್ ಚಿಕ್ಕಬಳ್ಳಾಪುರಕ್ಕೆ ನಾನೆ ತಂದೆ ಎಂದು ಕೊಚ್ಚಿಕೊಳ್ಳುವವರು ಜಿಲ್ಲಾ ಕೇಂದ್ರದಿಂದ ಇಪ್ಪತ್ತು ಕಿಮಿ ದೂರ ಕಟ್ಟಿದ್ಯಾಕೆ. ಅದು ಅವರ ಊರು ಪೇರೆಸಂದ್ರದಲ್ಲಿ ಕಟ್ಟಿದ್ದರಿಂದ ಈ ಭಾಗದ ಜನರಿಗೆ ಏನುಪಯೋಗ. ಯಾವ ರೋಗಿಗಳಿಗೆ ಅನುಕೂಲವಾಗುತ್ತೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವವರೆಗೂ ಮೆಡಿಕಲ್ ಕಾಲೇಜು ಅಲ್ಲಿಗೆ ಶಿಫ್ಟ್ ಮಾಡಿಸಲು ಏಕೆ ಆಗಲಿಲ್ಲ. ಆತುರಾತುರವಾಗಿ ಉದ್ಘಾಟನೆ ಮಾಡಿದ ಮೆಡಿಕಲ್ ಕಾಲೇಜಿನಲ್ಲಿ ಈವಾಗಲೂ ಆಸ್ಪತ್ರೆ ಪ್ರಾರಂಭಿಸಲು ಆಗಿಲ್ಲ. ಇದೀಗ ಎಲ್ಲ ಕಾಮಗಾರಿ ಪೂರ್ಣಗೊಳಿಸಿ ಅದಕ್ಕೆ ಬೇಕಾದ ಅನುದಾನ ಬಿಡುಗಡೆಯನ್ನ ನಾವು ಬಂದ ಮೇಲೆ ಮಾಡಬೇಕಾಯಿತು ಎಂದರು.
ಶಿಷ್ಟಚಾರ ಉಲ್ಲಂಘನೆ ಆಗಿಲ್ಲ
ಡಾ.ಕೆ.ಸುಧಾಕರ್ ಅವರು ಈ ಕ್ಷೇತ್ರದ ಸಂಸದರು. ಅವರನ್ನ ನಾವೇಲ್ಲೂ ಕಡೆಗಣಿಸಿಲ್ಲ. ಸರ್ಕಾರದ ಶಿಷ್ಟಾಚಾರದ ಪ್ರಕಾರ ಆಹ್ವಾನ ಇರುತ್ತೆ. ಅವರಿಗೆ ಪ್ರತ್ಯೇಕ ಆಸನವೂ ಇರುತ್ತೆ. ಆದರೆ ಅವರ ಮನಸ್ಥಿತಿ ಅಂತಹುದು ಎಂದು ಸಚಿವರು ಟೀಕಿಸಿದರು. ಇನ್ನು ಉಪ ಚುನಾವಣೆಯಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳನ್ನ ಕಾಂಗ್ರೇಸ್ ಪಕ್ಷವೇ ಗೆಲ್ಲಲ್ಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಆದಿಯಾಗಿ ಎಲ್ಲರೂ ಸಮರ್ಥ ಅಭ್ಯರ್ಥಿಗಳನ್ನ ಆಯ್ಕೆ ಮಾಡುತ್ತಾರೆ. ಚನ್ನಪಟ್ಟಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿವೃದ್ದಿ ಕೆಲಸಗಳಿಗೆ ಜನ ಒಲವು ತೋರಿದ್ದಾರೆ ಎಂದರು.
ಕುಮಾರಸ್ವಾಮಿ ಅಕಾಶವಾದಿ
ಸರ್ಕಾರ ಲೂಟಿ ಮಾಡಿ ವಾಲ್ಮೀಕಿ ಜಯಂತಿ ಮಾಡುತ್ತಿದ್ದಾರೆ ಎಂಬ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಉತ್ತರಿಸಿ, ಕುಮಾರಸ್ವಾಮಿ ಅವರು ಹೇಳುವ ಲೂಟಿ ಎಂಬುವಂತಹ ಪದಕ್ಕೆ ಯಾರಾದ್ರೂ ಅಧ್ಯಕ್ಷರಿದ್ದರೆ ಅದು ಕುಮಾರಸ್ವಾಮಿ ಮಾತ್ರ. ಕುಮಾರಸ್ವಾಮಿ ಅವರ ಹೇಳಿಕೆಗಳು ಬಹಳಷ್ಟು ಗಂಭೀರವಾಗಿ ತೆಗೆದುಕೊಳ್ಳಕ್ಕೆ ಆಗಲ್ಲ. ಅವರು ಯಾವ ಯಾವ ಸಂದರ್ಭದಲ್ಲಿ ಯಾರನ್ನು ಹೊಗಳುತ್ತಾರೆ, ಯಾರನ್ನು ತೆಗಳುತ್ತಾರೆ, ಎನ್ನುವುದು ಅವರಿಗೇ ಗೊತ್ತು. ಕುಮಾರಸ್ವಾಮಿಯವರ ಬಗ್ಗೆ ಜನರೇ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಅವರೊಬ್ಬ ಅವಕಾಶವಾದಿ ಎಂದು ನಾನು ಹೇಳ ಬಯಸುತ್ತೇನೆ ಎಂದರು.