ರಾಜ್ಯದಲ್ಲಿರುವುದು 80 ಪರ್ಸೆಂಟ್‌ ಭ್ರಷ್ಟಾಚಾರದ ಸರ್ಕಾರ : ಬಿ. ವೈ. ವಿಜಯೇಂದ್ರ

Published : Apr 11, 2025, 09:22 AM IST
BY vijayendraa

ಸಾರಾಂಶ

ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷದ ರಾಜ್ಯ ಸರ್ಕಾರ ಈಗ 80 ಪರ್ಸೆಂಟ್‌ ಭ್ರಷ್ಟಾಚಾರ ನಡೆಸಿ ದೇಶದಲ್ಲೇ ನಂ.1 ಭ್ರಷ್ಟಾಚಾರದ ಸರ್ಕಾರವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪ ಮಾಡಿದ್ದಾರೆ.

 ಚಿಕ್ಕಮಗಳೂರು :  ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷದ ರಾಜ್ಯ ಸರ್ಕಾರ ಈಗ 80 ಪರ್ಸೆಂಟ್‌ ಭ್ರಷ್ಟಾಚಾರ ನಡೆಸಿ ದೇಶದಲ್ಲೇ ನಂ.1 ಭ್ರಷ್ಟಾಚಾರದ ಸರ್ಕಾರವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪ ಮಾಡಿದ್ದಾರೆ.

ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಮಾಡಿರುವ ಕಮಿಷನ್ ಆರೋಪ ಕುರಿತಂತೆ ಗುರುವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಬಸವರಾಜ್ ರಾಯರಡ್ಡಿಯವರೇ ರಾಜ್ಯ ಸರ್ಕಾರಕ್ಕೆ ಭ್ರಷ್ಟಾಚಾರದಲ್ಲಿ ನಂ.1 ಸರ್ಟಿಫಿಕೇಟ್‌ ಕೊಟ್ಟಿದ್ದಾರೆ ಎಂದು ಹೇಳಿದರು.

ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡಿಸುತ್ತಿರುವ ಬಗ್ಗೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜಾತಿ ಜನಗಣತಿಯನ್ನು ಸಿದ್ದರಾಮಯ್ಯ ಅವರು ಬೊಂಬೆ ಆಟದಂತೆ ಮಾಡಿಕೊಂಡಿದ್ದಾರೆ. ಕುರ್ಚಿ ಅಲುಗಾಡಿದಾಗ, ಸರ್ಕಾರಕ್ಕೆ ಗಂಡಾಂತರ ಬಂದಾಗ ಜಾತಿ ಜನಗಣತಿ ಬೆದರು ಬೊಂಬೆ ಮುಂದಿಡುತ್ತಾರೆ. ದೇಶದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಭ್ರಷ್ಟ ಸರ್ಕಾರ ಎಂದು ಪ್ರಚಾರ ಆಗಿದೆ. ವಾಲ್ಮೀಕಿ ನಿಗಮ ಹಗರಣ, ಮುಡಾ ಸೈಟು ಹಗರಣ ಸೇರಿ ಕುರ್ಚಿ ಅಲುಗಾಡಿದಾಗ ಜನಗಣತಿ ವಿಚಾರ ಮುನ್ನೆಲೆಗೆ ಬಂದಿದೆ ಎಂದು ಅವರು ಕುಟುಕಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ