ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಸೋಲಿಗೆ ಜೆಡಿಎಸ್ ಕಾರಣ
ಎರಡು ಬಾರಿ ಚಿಕ್ಕಬಳ್ಳಾಪುರದಿಂದ ಸಂಸದನಾಗಿ ಆಯ್ಕೆಯಾಗಿ ಕಳೆದ ಬಾರಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿದ್ದರಿಂದ ಜೆಡಿಎಸ್‌ನ ಕುತಂತ್ರದಿಂದ ಸೋತಿದ್ದೇನೆ. ಎಷ್ಟೇ ಆಮಿಷಗಳು ಬಂದರೂ ಬೇರೆ ಮುಖ್ಯಮಂತ್ರಿಗಳಂತೆ ಪಕ್ಷ ತೊರೆಯಲಿಲ್ಲ. ಪಕ್ಷ ನಿಷ್ಠನಾಗಿಯೇ ಇದ್ದೇನೆ. ಕಳೆದ 15 ವರ್ಷಗಳಿಂದ ಚಿಕ್ಕಬಳ್ಳಾಪುರ ಮತದಾರರಿಗೆ ಪಕ್ಷ ನಿಷ್ಠನಾಗಿದ್ದೇನೆ ಎಂದರು. ಬೆಂಗಳೂರಿನಲ್ಲಿ ಸಚಿವ ಜಮೀರ್ ಅಹಮದ್ ನೇತೃತ್ವದಲ್ಲಿ ನಡೆದ ಲೋಕಸಭಾ ಟಿಕೆಟ್‌ನ ಪಿ.ಸಿ.ಸಿ ವೀಕ್ಷಕರ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಹುತೇಕರ ಬೆಂಬಲ ನನಗೆ ಸಿಕ್ತು. ನನಗೆ ಶೇ. 90 ರಷ್ಟು ಬೆಂಬಲ ವ್ಯಕ್ತವಾಗಿದೆ. ನನಗೆ ಕಾಂಗ್ರೆಸ್ ಎಂಪಿ ಟಿಕೆಟ್ ನೀಡುವಂತೆ ಲಾಬಿ ಮತ್ತು ರಾಜಕೀಯವನ್ನು ನಾನು ಮಾಡಲ್ಲ. ಕಾಂಗ್ರೆಸ್‌ನಲ್ಲಿ ಲಾಬಿ ರಾಜಕೀಯ ನಡೆಯಲ್ಲ. ನನ್ನ ಅವಧಿಯ ಕೆಲವು ಕಾಮಗಾರಿಗಳು ನಿಂತು ಹೋಗಿವೆ. ನನ್ನ ಸೇವೆ ಚಿಕ್ಕಬಳ್ಳಾಫುರ ಲೋಕಸಭಾ ಕ್ಷೇತ್ರಕ್ಕೆ ಅವಶ್ಯಕವಾಗಿದೆ. ಆದ್ದರಿಂದ ಈ ಬಾರಿಯೂ ನನಗೆ ಟಿಕೆಟ್ ಸಿಗುತ್ತದೆ ಎಂಬ ಭರವಸೆ ಇದೆಯೆಂದರು.ಟಿಎಂಸಿಯಿಂದಿ ಆಹ್ವಾನಮಮತಾ ಬ್ಯಾನರ್ಜಿ ತಮಗೆ ಟಿಎಂಸಿಯಿಂದ ರಾಜ್ಯಸಭಾ ಟಿಕೆಟ್ ಕೊಡುವ ಅಫರ್ ಕೊಟ್ಟಿದ್ದರು. ಅದು ಅಪ್ರಾಮಾಣಿಕತೆ ಆಗುತ್ತೆ ಅಂತ ನಾನು ತಿರಸ್ಕಾರ ಮಾಡಿದೆ. ಲೋಕಸಭಾ ಚುನಾವಣೆಗೆ ನಿಲ್ಲಬೇಕು ಅಂತ ತೀರ್ಮಾನ ಮಾಡಿದೆ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಗೆ ಒಳ್ಳೆಯ ವಾತಾವಾರಣ ಇದೆ. 5 ಜನ ಕಾಂಗ್ರೆಸ್ ಶಾಸಕರು ಒಬ್ಬರು ಎಂಎಲ್ ಸಿ, ಒರ್ವ ಪಕ್ಷೇತರ ಶಾಸಕರ ಬೆಂಬಲ ನಮಗೆ ಇದೆ. ಬಿಜೆಪಿಯಲ್ಲಿ ಕೇವಲ ಇಬ್ಬರು ಶಾಸಕರು ಮಾತ್ರ ಇದ್ದಾರೆ.ನಾನು ವಾಮಮಾರ್ಗದಲ್ಲಿ ಚುನಾವಣೆಗೆ ಇಳಿಯುವವನಲ್ಲ. ಟಿಕೆಟ್ ಘೋಷಣೆಗೂ ಮುನ್ನ ಪ್ರಚಾರ ಮಾಡಬಾರದು ಅಂತ ಕ್ಷೇತ್ರದತ್ತ ಬರಲಿಲ್ಲ. ಯಾರೋ ಅಭ್ಯರ್ಥಿಯಾದರೆ ಅವರಿಗೆ ಜಾಗ ಬಿಟ್ಟುಕೊಡಲು ಅಲ್ಲ ನಾನಿರುವುದು. ಅನೇಕ ಬಾರಿ ನನ್ನನ್ನು ಕೊಲೆ ಮಾಡಲು ಯತ್ನಿಸಿದರು. ನಾನು ಯಾರಿಗೂ ಹೆದರೋದಿಲ್ಲ. ಈಗಲೂ ನಾನು ಚುನಾವಣೆ ಗೆ ನಿಲ್ಲಲು ಶಕ್ತನಾಗಿದ್ದೇನೆ.ಅಪೂರ್ಣ ಕಾಮಗಾರಿಗಳು
ದೇವನಹಳ್ಳಿಯಲ್ಲಿ ಏರೋಸ್ಪೇಸ್ ಮಾಡಬೇಕು ಅಂತಿದ್ದೆ. ನಾನು ಇನ್ನು ಐದು ವರ್ಷ ಸಂಸದನಾಗಿ ಇದ್ದಿದ್ದರೆ ಇವೆಲ್ಲಾ ಮುಗಿಯುತ್ತಿತ್ತು. ಮುಂದೆಯೂ ಕ್ಷೇತ್ರದಲ್ಲಿ ಜನತೆಯ ಸೇವೆ ಮಾಡಬೇಕಿದೆ. ಆದ್ದರಿಂದ ನನಗೆ ಟಿಕೆಟ್ ಸಿಗುತ್ತದೆ ಎನ್ನುವ ವಿಶ್ವಾಸ ಇದೆ ಎಂದರು. ಈ ವೇಳೆ ಮಾಜಿ ಶಾಸಕರಾದ ಎಂ. ಶಿವಾನಂದ್, ಎಸ್.ಎಂ. ಮುನಿಯಪ್ಪ. ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿವಿಆರ್ ರಾಜೇಶ್, ಮುಖಂಡರಾದ ನಂದಿ.ಎಂ.ಆಂಜಿನಪ್ಪ, ಯಲುವಹಳ್ಳಿ. ಎನ್.ರಮೇಶ್, ಅಜಿತ್ ಪ್ರಸಾದ್, ನರೇಂದ್ರ, ಪುರದಗಡ್ಡೆ ಕೃಷ್ಣಪ್ಪ, ಎಸ್.ಎಂ. ಜಗದೀಶ್, ಯಲುವಹಳ್ಳಿ ಆರ್. ಜನಾರ್ಧನ್,ಲಕ್ಷ್ಮಣ್ ,ಮತ್ತಿತರರು ಇದ್ದರು.