ಸೂರಜ್ ರೇವಣ್ಣ ಪ್ರಕರಣದಲ್ಲಿ ರಾಜಕೀಯವಿಲ್ಲ: ಕೃಷಿ ಸಚಿವ ಸಿಆರ್‌ಎಸ್

KannadaprabhaNewsNetwork |  
Published : Jun 24, 2024, 01:30 AM ISTUpdated : Jun 24, 2024, 03:39 AM IST
Suraj Revanna

ಸಾರಾಂಶ

ವಿಧಾನ ಪರಿಷತ್‌ ಸದಸ್ಯ ಸೂರಜ್ ರೇವಣ್ಣ ಪ್ರಕರಣ ಸಂಬಂಧ ಕಾನೂನು ಇದೆ, ಕೋರ್ಟ್ ಇದೆ. ಇದು ಬಹಿರಂಗವಾಗಿ ಚರ್ಚೆ ಮಾಡುವ ವಿಚಾರವಲ್ಲ. ಇದರ ಬಗ್ಗೆ ನಮಗೂ ಮುಜುಗರ ಇದೆ. ಇದನ್ನು ಸರಿಪಡಿಸುವುದು ನಮ್ಮ ಕೈಯಲ್ಲಿ ಇಲ್ಲ.  

 ಮಂಡ್ಯ :  ಸೂರಜ್ ರೇವಣ್ಣ ಬಂಧನ ವಿಚಾರದಲ್ಲಿ ರಾಜಕೀಯ ಮಾಡುವುದು ಏನಿದೆ. ಅವರ ಮನೆತನವೇ ರಾಜಕೀಯದಲ್ಲಿ ಬೆಳೆದಿದೆ. ಇಂದಿನ ಪರಿಸ್ಥಿತಿಗಳಿಗೆಲ್ಲಾ ಅವರೇ ಕಾರಣರಾಗಿದ್ದಾರೆ. ನಾವೇನು ಮಾಡಲು ಸಾಧ್ಯ ಎಂದು ಸಚಿವ ಎನ್. ಚಲುವರಾಯಸ್ವಾಮಿ ಪ್ರಶ್ನಿಸಿದರು.

ಭಾನುವಾರ ನಗರದ ಪ್ರವಾಸಿಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಸೂರಜ್ ರೇವಣ್ಣ ಪ್ರಕರಣ ಸಂಬಂಧ ಕಾನೂನು ಇದೆ, ಕೋರ್ಟ್ ಇದೆ. ಇದು ಬಹಿರಂಗವಾಗಿ ಚರ್ಚೆ ಮಾಡುವ ವಿಚಾರವಲ್ಲ. ಇದರ ಬಗ್ಗೆ ನಮಗೂ ಮುಜುಗರ ಇದೆ. ಇದನ್ನು ಸರಿಪಡಿಸುವುದು ನಮ್ಮ ಕೈಯಲ್ಲಿ ಇಲ್ಲ ಎಂದರು.

ಇಬ್ಬರೂ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಕೇಸ್ ಅಂಡ್ ಕೌಂಟರ್ ಕೇಸ್ ಆಗಿದೆ. ಇದರಲ್ಲಿ ರಾಜಕೀಯ ಮಾಡುವ ಅಗತ್ಯವಾದರೂ ಏನು. ನಮ್ಮ ಬಳಿ ಪೆನ್‌ಡ್ರೈವ್ ಇದೇಂತ ನಾವು ಹೇಳಿದ್ದೇವಾ..?, ಬಡವರ ಮಕ್ಕಳು ಇರಬಾರದಾ?, ಇವತ್ತು ದೇವೇಗೌಡರನ್ನು ನಮ್ಮ ನಾಯಕರು ಎಂದು ಗೌರವದಿಂದ ಹೇಳುತ್ತೇವೆ. ಯಾವುದೇ ಪಕ್ಷದಲ್ಲಿ ಇದ್ದರೂ ವೈಯಕ್ತಿಕ ಟೀಕೆ-ಟಿಪ್ಪಣಿ ಕಡಿಮೆ ಮಾಡಿ ಅಭಿವೃದ್ಧಿ ಕಡೆಗೆ ಗಮನಹರಿಸಲಿ ಎಂದು ಸಲಹೆ ನೀಡಿದರು.

ದೇವದಾರಿ ಹಿಲ್ಸ್‌ನಲ್ಲಿ ಗಣಿಗಾರಿಕೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿರುವ ವಿಚಾರವಾಗಿ, ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಗಣಿಗಾರಿಕೆ ಬೇಡ ಎಂದಿದ್ದರು. ಈಗ ಗಣಿಗಾರಿಕೆಗೆ ಅನುಮತಿ ನೀಡಿ ಸಹಿ ಹಾಕಿರುವುದೇಕೆ. ಕೇಂದ್ರ ಸಚಿವರಾಗಿ ಸಾರ್ವಜನಿಕರನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು. ರಾಜ್ಯಕ್ಕೆ ಕುಮಾರಸ್ವಾಮಿ ಒಳ್ಳೇಯ ಕೆಲಸ ಮಾಡಲಿ. ಅವರು ಮಾಡುವ ಒಳ್ಳೆಯ ಕೆಲಸಗಳಿಗೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಪರಂ ಸಿಎಂ ಆಗಲಿ : 25ಕ್ಕೂ ಹೆಚ್ಚು ಮಠಾಧೀಶರ ಆಗ್ರಹ
ಎಸ್ಕಾಂಗಳಿಂದ ₹110 ಕೋಟಿ ಹೆಚ್ಚುವರಿ ವೆಚ್ಚ : ಸಿಎಜಿ ವರದಿ