ದೇಶದಲ್ಲಿ ಧರ್ಮ ರಾಜಕಾರಣ ನಡೆಯುವುದಿಲ್ಲ - ಎಸ್ಎಫ್ಐನ ಸಮ್ಮೇಳನದಲ್ಲಿ ಗೊಲ್ಲಹಳ್ಳಿ ಎಸ್.ಶಿವಪ್ರಸಾದ್

KannadaprabhaNewsNetwork | Updated : Sep 27 2024, 04:22 AM IST

ಸಾರಾಂಶ

ಚಿಕ್ಕಬಳ್ಳಾಪುರದಲ್ಲಿ ಎಸ್ಎಫ್ಐನ 16ನೇ ರಾಜ್ಯ ಸಮ್ಮೇಳನಕ್ಕೆ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಎಸ್.ಶಿವಪ್ರಸಾದ್ ಚಾಲನೆ ನೀಡಿದರು. ಸಮ್ಮೇಳನದಲ್ಲಿ ಶಿಕ್ಷಣದ ಸಾರ್ವತ್ರಿಕತೆ, ಸಮಾನತೆ ಮತ್ತು ಸೌಹಾರ್ದತೆಯ ಬಗ್ಗೆ ಚರ್ಚಿಸಲಾಯಿತು.

 ಚಿಕ್ಕಬಳ್ಳಾಪುರ : ಶಿಕ್ಷಣದ‌ ಸಾರ್ವತ್ರಿಕ, ಸಮಾನತೆ ಹಾಗೂ ಸೌಹಾರ್ದತೆಗಾಗಿ ಆಗ್ರಹಿಸಿ ಗುರುವಾರ ಚಿಕ್ಕಬಳ್ಳಾಪುರ ನಗರದ ಕೆಇಬಿ ಸಮುದಾಯ ಭವನದಲ್ಲಿ ಮೂರುದಿನಗಳ ಕಾಲ ನಡೆಯಲಿರುವ ಎಸ್ಎಫ್ಐನ 16ನೇ ರಾಜ್ಯ ಸಮ್ಮೇಳನಕ್ಕೆ ಗುರುವಾರ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಎಸ್.ಶಿವಪ್ರಸಾದ್ ಹಾಗು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಪಿಂಡಿಪಾಪನಹಳ್ಳಿ ತಮಟೆ ಕಲಾವಿದ ಮುನಿವೆಂಕಟಪ್ಪ ಚಾಲನೆ ನೀಡಿದರು.

ಸಮ್ಮೇಳನದ ಭಾಗವಾಗಿ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ವಿದ್ಯಾರ್ಥಿಗಳು ನಗರದ ಮುಖ್ಯ ರಸ್ತೆಗಳಲ್ಲಿ ಬೃಹತ್ ಮೆರವಣೆಗೆ ನಡೆಸಿದರು. ಬಹಿರಂಗ ಸಭೆಯ ನಂತರ ಶಿಕ್ಷಣ ನೀತಿ ಬದಲಾವಣೆ ಬಗ್ಗೆ ಚರ್ಚ ಹಾಗು ನೂತನ ಸಮಿತಿ ರಚನೆ ಕುರಿತು ಒಳಾಂಗಣ ಸಭಾಂಗಣದಲ್ಲಿ ಪ್ರಾರಂಭಿಸಿದರು.

ನಾಜಿಯಿಸಂ ನಡೆಯುವುದಿಲ್ಲಉದ್ಘಾಟನೆ ಬಾಷಣ ಮಾಡಿದ ಜನಪದ ಆಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಎಸ್.ಶಿವಪ್ರಸಾದ್, ಧರ್ಮ ರಾಜಕಾರಣ ನಡೆಯೋದಿಲ್ಲ ಬದಲಾವಣೆ ಜಗತ್ತಿನ ನಿಯಮ ಬೆಳಕು ಆದ ಮೇಲೆ ಕತ್ತಲು ಬರೋದು ಎಷ್ಟು ಸತ್ಯವೋ ಬದಲಾವಣೆಯೂ ಅಷ್ಟೆ ಸತ್ಯ ನಾಜಿಯಿಸಂ ಭಾರತ ದೇಶದಲ್ಲಿ ನಡೆಯೋದಿಲ್ಲ ವಿದ್ಯಾರ್ಥಿಗಳು ತಮ್ಮ ಏಳಿಗೆಗೆ ಓದಬೇಕು ಉನ್ನತ ಶಿಕ್ಷಣ ಪಡೆಯಬೇಕು ತನ್ನ ಕಾಲ ಮೇಲೆ ನಿಂತುಕೊಳ್ಳಬೇಕು ಎಂದರು.

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಾ. ಅನಿಲ್ ಕುಮಾರ್ ಮಾತನಾಡಿ, ರಾಷ್ಟ್ರಕವಿ ಕುವೆಂಪು ರವರು ಬರೆಯುತ್ತಿರುವ ಕಾಲಘಟ್ಟದಲ್ಲಿ ನಡೆಯುತಿದ್ದ ಬದಲಾವಣೆಗಳೆ ಅಷ್ಟೋಂದು ರೋಮಾಂಚಕವಾಗಿತ್ತು. ಜಾತಿ ಬೇದಬಾವ ಎಲ್ಲವನ್ನೂ ದೂರ ತಳ್ಳಿ ಇಡೀ ಪ್ರಪಂಚವನ್ನೆ ವಿಶ್ವ ಪಥ ಎಂದು ಕರೆದಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಆಗಬಹುದಾದ ಪರಿಣಾಮಗಳನ್ನು ಬಿಚ್ಚಿಟ್ಟಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹಾದಿಯಲ್ಲಿ ಬೆಳೆದು ಬಂದಿರುವ ಚಟುವಟಿಕೆಗಳನ್ನು ಎಸ್ ಎಫ್ ಐ ಸಂಘಟನೆ ಮುಂದುವರಿಸಬೇಕು ಎಂದರು.

ಮುನಿವೆಂಕಟಪ್ಪಗೆ ಸನ್ಮಾನ

ಈ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ರನ್ನು ಸನ್ಮಾನಿಸಲಾಯಿತು. ಸಮ್ಮೇಳನದ ವೇದಿಕೆಯಲ್ಲಿ ಎಸ್ ಎಫ್ಐ ರಾಷ್ಟ್ರೀಯ ಅಧ್ಯಕ್ಷ ವಿ.ಪಿ.ಸಾನು, ರಾಜ್ಯಾಧ್ಯಕ್ಷ ಅಮರೇಶ್ ಕಡದಗಿ, ರಾಜ್ಯ ಕಾರ್ಯದರ್ಶಿ ಭೀಮನಗೌಡ, ಜಿಲ್ಲಾ ಅಧ್ಯಕ್ಷ ಸೋಮಶೇಖರ್, ಗೌರವಾಧ್ಯಕ್ಷ ಸರ್ದಾರ್ ಚಾಂದ್ ಪಾಶ,ಎಂ.ಪಿ. ಮುನಿವೆಂಕಟಪ್ಪ, ಸುಜಾತ ಮತ್ತಿತರರು ಇದ್ದರು.

Share this article