ಸುಶ್ಮಿತಾ ಸೇರಿ ಟಿಎಂಸಿ 3 ಮಾಜಿ ಸಂಸದರು ಬಿಜೆಪಿಗೆ ಸೇರ್ಪಡೆ

Published : Jul 10, 2026, 09:31 AM IST
Three Former TMC Rajya Sabha MPs Join BJP in West Bengal

ಸಾರಾಂಶ

ಇತ್ತೀಚೆಗಷ್ಟೇ ಟಿಎಂಸಿಗೆ ರಾಜೀನಾಮೆ ನೀಡಿದ್ದ ಸುಶ್ಮಿತಾ ದೇವ್‌ ಸೇರಿದಂತೆ ಮೂವರು ಸಂಸದರು ಗುರುವಾರ ಇಲ್ಲಿ ಬಿಜೆಪಿ ಸೇರಿದರು.ಸುಶ್ಮಿತಾ ದೇವ್, ಸುಖೇಂದು ಶೇಖರ್ ರೇ ಮತ್ತು ಪ್ರಕಾಶ್ ಚಿಕ್ ಬರೈಕ್‌ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಸಾಮಿಕ್ ಭಟ್ಟಾಚಾರ್ಯ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.

ಕೋಲ್ಕತಾ: ಇತ್ತೀಚೆಗಷ್ಟೇ ಟಿಎಂಸಿಗೆ ರಾಜೀನಾಮೆ ನೀಡಿದ್ದ ಸುಶ್ಮಿತಾ ದೇವ್‌ ಸೇರಿದಂತೆ ಮೂವರು ಸಂಸದರು ಗುರುವಾರ ಇಲ್ಲಿ ಬಿಜೆಪಿ ಸೇರಿದರು. 

ಬಿಜೆಪಿ ಅಧ್ಯಕ್ಷ ಸಾಮಿಕ್ ಭಟ್ಟಾಚಾರ್ಯ ಅವರ ಸಮ್ಮುಖ

ಸುಶ್ಮಿತಾ ದೇವ್, ಸುಖೇಂದು ಶೇಖರ್ ರೇ ಮತ್ತು ಪ್ರಕಾಶ್ ಚಿಕ್ ಬರೈಕ್‌ ಅವರು ರಾಜ್ಯ ಬಿಜೆಪಿ ಅಧ್ಯಕ್ಷ ಸಾಮಿಕ್ ಭಟ್ಟಾಚಾರ್ಯ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.  

ಬಿಜೆಪಿಯೊಂದಿಗಿದ್ದರು, ಅಲ್ಲಿಗೇ ಹೋದರು

ಇದಕ್ಕೆ ಟಿಎಂಸಿಯ ಸೌಗತ ರಾಯ್ ಪ್ರತಿಕ್ರಿಯಿಸಿದ್ದು, ‘ಇದರಲ್ಲಿ ಹೊಸದೇನಿದೆ? ಅವರು ಬಿಜೆಪಿಯೊಂದಿಗಿದ್ದರು, ಅಲ್ಲಿಗೇ ಹೋದರು. ಪಕ್ಷ ಬದಲಿಸುವವರಿಂದ ಬಿಜೆಪಿಗೆ ಯಾವುದೇ ಲಾಭವಾಗಬಹುದು ಅನ್ನಿಸುವುದಿಲ್ಲ. ನಮ್ಮ ಪಕ್ಷಕ್ಕೆ ನಷ್ಟವಿಲ್ಲ’ ಎಂದಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬೈ ಎಲೆಕ್ಷನ್‌ : ಹಿರಿಯೂರು ಕ್ಷೇತ್ರಕ್ಕೆ ಜೆಡಿಎಸ್‌ ಬೇಡಿಕೆ
ಮಹಾ ಗಡಿ ಕ್ಯಾತೆಗೆ ತಕ್ಕ ಉತ್ತರ : ಸಿಎಂ