ಕುಗ್ರಾಮಗಳಲ್ಲಿ ಜನವನ ಸಾರಿಗೆಗೆ ಮರು ಚಾಲನೆ

KannadaprabhaNewsNetwork | Published : Nov 3, 2023 12:30 AM

ಸಾರಾಂಶ

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಕುಗ್ರಾಮಗಳಿಗೆ ಸೇತುಬಂಧವಾಗಿದ್ದ ಜನವನ ವಾಹನ ಸಾರಿಗೆಯು ಅರಣ್ಯ ಪ್ರದೇಶದ ನಡುವೆ ವಾಸವಿದ್ದ ಜನರ ಅನುಕೂಲಕ್ಕಾಗಿ ಜಾರಿಗೆಯಾಗಿತ್ತು. ಅರಣ್ಯ ಅಧಿಕಾರಿಗಳ ನಿರ್ಲಕ್ಷತನದಿಂದ ಸ್ಥಗಿತವಾಗಿದ್ದ ಜನವನ ಸಾರಿಗೆ ಇದೀಗ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಮೂಲಕ ಮರುಜೀವ ಪಡೆದುಕೊಂಡಿದೆ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ 4 ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವರಿಂದ 4 ವಾಹನಗಳಿಗೆ ಹಸಿರು ನಿಶಾನೆ । ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸ್ಥಗಿತವಾಗಿದ್ದ ಯೋಜನೆ ಕನ್ನಡಪ್ರಭ ವಾರ್ತೆ ಹನೂರು ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಕುಗ್ರಾಮಗಳಿಗೆ ಸೇತುಬಂಧವಾಗಿದ್ದ ಜನವನ ವಾಹನ ಸಾರಿಗೆಯು ಅರಣ್ಯ ಪ್ರದೇಶದ ನಡುವೆ ವಾಸವಿದ್ದ ಜನರ ಅನುಕೂಲಕ್ಕಾಗಿ ಜಾರಿಗೆಯಾಗಿತ್ತು. ಅರಣ್ಯ ಅಧಿಕಾರಿಗಳ ನಿರ್ಲಕ್ಷತನದಿಂದ ಸ್ಥಗಿತವಾಗಿದ್ದ ಜನವನ ಸಾರಿಗೆ ಇದೀಗ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಮೂಲಕ ಮರುಜೀವ ಪಡೆದುಕೊಂಡಿದೆ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ 4 ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಮಲೆ ಮಹದೇಶ್ವರ ಬೆಟ್ಟದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಅವರು ಅಧಿಕಾರಿಗಳು ಹಾಗೂ ಮಲೆ ಮಹದೇಶ್ವರ ಬೆಟ್ಟದ ಸಿಬ್ಬಂದಿವರ್ಗದವರ ಜೊತೆ ಮಾತನಾಡಿ, ಕಾಮಗಾರಿಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಿ ಮತ್ತು ಮುಂದಿನ ದೀಪಾವಳಿ ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ಧಕ್ಕೆಯಾಗದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಸೂಚಿಸಿದರು. ವಾಹನ ಚಲಾಯಿಸಿದ ಶಾಸಕ ಮಂಜುನಾಥ್: ಜನವನ ವಾಹನವನ್ನು ಮಲೆ ಮಹದೇಶ್ವರ ಬೆಟ್ಟದಿಂದ ಇಂಡಿಗನತ್ತದವರೆಗೆ ಚಾಲನೆ ಮಾಡುವ ಮೂಲಕ ಸಚಿವರಿಗೆ ಸಾಥ್‌ ನೀಡಿದ ಶಾಸಕ ಎಂ.ಆರ್. ಮಂಜುನಾಥ್ ಎಲ್ಲರ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ,ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ, ಮುಖಂಡರು, ಮಲೆ ಮಹದೇಶ್ವರ ಬೆಟ್ಟದ- ಸಿಬ್ಬಂದಿ ವರ್ಗ ಇನ್ನಿತರರು ಉಪಸ್ಥಿತರಿದ್ದರು. ಬಾಕ್ಸ್.... ಸೋಲಿಗರ ಹಾಡಿಗೆ ಸಚಿವ ಕೆ. ವೆಂಕಟೇಶ್ ಭೇಟಿ ತಾಲೂಕಿನ ಮಲೆ ಮಾದೇಶ್ವರ ಬೆಟ್ಟದ ಕೊಂಬುಡಿಕ್ಕಿ ಹಾಡಿಗೆ ಭೇಟಿ ನೀಡಿದ ಸಚಿವ ಕೆ, ವೆಂಕಟೇಶ್, ಹಾಡಿಯ ಜನರ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದರು. ಶಾಶ್ವತ ಮನೆ ನಿರ್ಮಾಣ ಮಾಡಿಕೊಡುವಂತೆ ಸೋಲಿಗರ ಮನವಿ ಸ್ಪಂದಿಸಿದ ಸಚಿವರು, ಮನೆ ನಿರ್ಮಾಣದ ಭರವಸೆ ನೀಡಿ ಸ್ಥಳದಲ್ಲಿಯೇ ಪೌಷ್ಟಿಕ ಆಹಾರ ಪದಾರ್ಥಗಳನ್ನು ನಿವಾಸಿಗಳಿಗೆ ವಿತರಿಸಿದರು. ------------- 2ಸಿಎಎಚ್‌ಎನ್‌8 ಮತ್ತು16 ಮಲೆ ಮಹದೇಶ್ವರ ಬೆಟ್ಟದಲ್ಲಿ ಸ್ಥಗಿತಗೊಂಡಿದ್ದ ಜನವನ ವಾಹನವನ್ನು ಪ್ರಾಧಿಕಾರದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಮತ್ತು ಶಾಸಕ ಎಂ.ಆರ್ .ಮಂಜುನಾಥ್ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಶಿಲ್ಪಾ ನಾಗ್ ,ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು,ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಇದ್ದಾರೆ. ------- 2ಸಿಎಚ್‌ಎನ್‌10 ಮಲೆ ಮಹದೇಶ್ವರ ಬೆಟ್ಟದಿಂದ ಇಂಡಿಗನತ್ತದವರೆಗೆ ವಾಹನ ಚಾಲನೆ ಮಾಡುವ ಮೂಲಕ ಸಚಿವರಿಗೆ ಸಾಥ್‌ ನೀಡಿದ ಶಾಸಕ ಎಂ.ಆರ್. ಮಂಜುನಾಥ್.

Share this article