ಬೆಂಗಳೂರು-ಚೆನ್ನೈ ನಡುವೆ 2 ಗಂಟೆಯಲ್ಲಿ ಸಂಚರಿಸಿ: ಗಡ್ಕರಿ

KannadaprabhaNewsNetwork |  
Published : Mar 11, 2024, 01:21 AM ISTUpdated : Mar 11, 2024, 07:04 AM IST
6 | Kannada Prabha

ಸಾರಾಂಶ

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ₹4000 ಸಾವಿರ ಕೋಟಿ ವೆಚ್ಚದ 268 ಕಿ.ಮೀ. ಉದ್ದದ 22 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆಯನ್ನು ಕೇಂದ್ರ ಸಚಿವ ನಿತೀನ್‌ ಗಡ್ಕರಿ ಅವರು ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ಬೆಂಗಳೂರು- ಚೆನ್ನೈ ನಡುವೆ ₹20 ಸಾವಿರ ಕೋಟಿಗಳಲ್ಲಿ 262 ಕಿ.ಮೀ ಆಗಿದ್ದು, 2025ರ ಜನವರಿ ಆರಂಭಕ್ಕೆ ಮುನ್ನ ಬೆಂಗಳೂರು- ಚೆನ್ನೈ ನಡುವಿನ ಎಕ್ಸ್‌ಪ್ರೆಸ್‌ಹೈ-ವೇ ಆರಂಭವಾಗಲಿದ್ದು, 2 ಗಂಟೆಗಳಲ್ಲಿ ಬೆಂಗಳೂರಿನಿಂದ ಚೆನ್ನೈ ತಲುಪಬಹುದಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ₹4000 ಸಾವಿರ ಕೋಟಿ ವೆಚ್ಚದ 268 ಕಿ.ಮೀ. ಉದ್ದದ 22 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆಯನ್ನು ಅವರು ನೆರವೇರಿಸಿ ಮಾತನಾಡಿದರು.

ಹಾಗೆಯೇ, ಬೆಂಗಳೂರಿನ ರಿಂಗ್‌ರಸ್ತೆ ನಿರ್ಮಾಣ ಅತ್ಯಂತ ಮಹತ್ವ ಪೂರ್ಣವಾಗಿದ್ದು, ಬೆಂಗಳೂರಿಗೆ ತಲುಪಿದ ನಂತರದಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗಲಿದೆ. 

ಇದಕ್ಕಾಗಿ 282 ಕಿ.ಮೀ ಉದ್ದದ ರಿಂಗ್‌ರಸ್ತೆ ನಿರ್ಮಿಸುವ ಅಗತ್ಯವಿದೆ. ಈ ವರ್ಷದ ಡಿಸೆಂಬರ್‌ ವೇಳೆಗೆ ಇದನ್ನು ಪೂರ್ಣಗೊಳಿಸುವ ವಿಶ್ವಾಸವಿದ್ದು, ಆ ಮೂಲಕ ಹೊಸ ವರ್ಷದಲ್ಲಿ ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎಂದು ಅವರು ಭರವಸೆ ನೀಡಿದರು.

ಅಲ್ಲದೇ, ರಾಷ್ಟ್ರೀಯ ಹೆದ್ದಾರಿ 275ರ ಮೈಸೂರು- ಕುಶಾಲನಗರ ನಡುವಿನ ಐದು ಪ್ಯಾಕೇಜ್‌ನಲ್ಲಿ ₹5200 ಕೋಟಿ ವೆಚ್ಚದಲ್ಲಿ 115 ಕಿ.ಮೀ ಕಾಮಗಾರಿ ಆರಂಭವಾಗಿದೆ. 

ಇದು ಪೂರ್ಣಗೊಂಡರೆ ಕುಶಾಲನಗರದಿಂದ ಬೆಂಗಳೂರಿಗೆ ತೆರಳುವ ಸಮಯ ಕೇವಲ 5 ಗಂಟೆಗಳ ಬದಲಿಗೆ ಎರಡೂವರೆ ಗಂಟೆಗಳಲ್ಲಿ ತಲುಪಬಹುದು ಎಂದರು.ಕೇರಳ- ಕರ್ನಾಟಕಕ್ಕೆ ಪರ್ಯಾಯ ಮಾರ್ಗ:

ಮೈಸೂರು- ಮಲ್ಲಾಪುರಂ ನಡುವಿನ 65 ಕಿ.ಮೀ. ಹೈವೇ ₹2500 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಿದ್ದು, ವಯನಾಡು ಬಂಡೀಪುರ ಮೀಸಲು ಅರಣ್ಯ ಪ್ರದೇಶದ ಕಾರಣಕ್ಕೆ ಕೋಚಿಕೋಡ್‌ನಿಂದ ಮೈಸೂರಿಗೆ ಸಂಚರಿಸುವ ವಾಹನಗಳಿಗೆ ರಾತ್ರಿ 9ರಿಂದ ಬೆಳಗ್ಗೆ 6 ಗಂಟೆವರೆಗೂ ನಿರ್ಬಂಧ ಹೇರಲಾಗುತ್ತಿದೆ. 

ಇದಕ್ಕಾಗಿ ಕೇರಳ- ಕರ್ನಾಟಕದ ನಡುವೆ ಮಲ್ಲಪುರಂ ಮಾರ್ಗವಾಗಿ ಪರ್ಯಾಯ ಮಾರ್ಗ ಕಲ್ಪಿಸಲಿದ್ದು, ಇದರಿಂದ ವಾಹನ ಸವಾರರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್‌ಗಡ್ಕರಿ ತಿಳಿಸಿದರು.

ಮೈಸೂರಿನಲ್ಲಿ ₹4000 ಸಾವಿರ ಕೋಟಿ ಅಧಿಕ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಕೆಲವು ಕಾಮಗಾರಿಗಳ ಲೋಕಾರ್ಪಣೆಯಾಗುತ್ತಿದೆ. ಇತ್ತೀಚೆಗೆ ಕರ್ನಾಟಕ ಸಾಕಷ್ಟು ಅಭಿವೃದ್ಧಿಯಾಗುತ್ತಿದ್ದು, 2024ರ ಅಂತ್ಯದ ವೇಳೆಗೆ ಕರ್ನಾಟಕ ರಾಷ್ಟ್ರೀಯ ಹೆದ್ದಾರಿಗಳು ಯುಎಸ್‌ಎ ರಸ್ತೆಗಳಿಗೆ ಸಮನಾಗಿರಲಿದೆ ಎಂದು ಅವರು ಹೇಳಿದರು.

2014ರಲ್ಲಿ ನಾನು ಸಚಿವನಾದ ಸಂದರ್ಭದಲ್ಲಿ ಕರ್ನಾಟಕದಲ್ಲಿ 6707 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಇತ್ತು. ಇಂದು ಕರ್ನಾಟಕದಲ್ಲಿ 8200 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಇದೆ. 

ಕರ್ನಾಟಕದಲ್ಲಿ ಅಂದಾಜು ₹7000 ಸಾವಿರ ಕೋಟಿ ವೆಚ್ಚದಲ್ಲಿ 3063 ಕಿ.ಮೀ ಉದ್ದದ ರಸ್ತೆ ನಿರ್ಮಾಣದ 151 ಯೋಜನೆ ಪೂರ್ಣವಾಗಿದೆ. ಪ್ರಸ್ತುತ ₹90 ಕೋಟಿ ವೆಚ್ಚದ 2372 ಕಿ.ಮೀ ವ್ಯಾಪ್ತಿಯ 94 ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಅವರು ವಿವರಿಸಿದರು.

PREV

Recommended Stories

ರಾಹುಲ್‌ ವಿರುದ್ಧ 5ಕ್ಕೆ ಬಿಜೆಪಿ ಧರಣಿ : ಬಿವೈವಿ
ಸಂಘರ್ಷ ಬಿಟ್ಟು ಒಳಮೀಸಲು ಜಾರಿ : ಪರಂ ನೇತೃತ್ವದ ಸಭೆ