ರಾಮೋಹಳ್ಳಿ ಗೇಟ್‌ನಲ್ಲಿ ನಿರ್ಮಿಸಿದ ರಸ್ತೆ ಕೆಳಸೇತುವೆ ಉದ್ಘಾಟಿಸಿದ ವಿ.ಸೋಮಣ್ಣ

KannadaprabhaNewsNetwork |  
Published : Jul 26, 2026, 02:00 AM IST
Somanna

ಸಾರಾಂಶ

ರಾಮೋಹಳ್ಳಿ ರೈಲ್ವೆ ಗೇಟ್‌ ಲೆವೆಲ್ ಕ್ರಾಸಿಂಗ್‌ಗೆ ನಿರ್ಮಿಸಿರುವ ಹೊಸ ರಸ್ತೆ ಕೆಳಸೇತುವೆಯನ್ನು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಶನಿವಾರ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಸಚಿವರು ಬಹುಕಾಲದ ಬೇಡಿಕೆ ಈಗ ಈಡೇರಿದೆ  ಎಂದರು

  ಬೆಂಗಳೂರು :  ರಾಮೋಹಳ್ಳಿ ರೈಲ್ವೆ ಗೇಟ್‌ ಲೆವೆಲ್ ಕ್ರಾಸಿಂಗ್‌ಗೆ ನಿರ್ಮಿಸಿರುವ ಹೊಸ ರಸ್ತೆ ಕೆಳಸೇತುವೆಯನ್ನು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಶನಿವಾರ ಉದ್ಘಾಟಿಸಿದರು.

ಬಹುಕಾಲದ ಬೇಡಿಕೆ ಈಗ ಈಡೇರಿದೆ

ಈ ವೇಳೆ ಮಾತನಾಡಿದ ಸಚಿವರು, ರಾಮೋಹಳ್ಳಿ ಗೇಟ್‌ನಲ್ಲಿ ರಸ್ತೆ ಕೆಳಸೇತುವೆ ನಿರ್ಮಿಸಬೇಕು ಎನ್ನುವುದು ಬಹುಕಾಲದ ಬೇಡಿಕೆ ಈಗ ಈಡೇರಿದೆ. 8.84 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾದ ಈ ರಸ್ತೆ ಕೆಳಸೇತುವೆಯು ಲೆವೆಲ್ ಕ್ರಾಸಿಂಗ್ ಗೇಟ್‌ನಿಂದ ಉಂಟಾಗುತ್ತಿದ್ದ ವಿಳಂಬ ಮತ್ತು ಸಂಚಾರ ದಟ್ಟಣೆಯನ್ನು ನಿವಾರಿಸಿ, ವಾಹನಗಳ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ನೆರವಾಗಲಿದೆ ಎಂದರು.

ರಸ್ತೆ ಹಾಗೂ ರೈಲು ಸಂಚಾರದ ಸುರಕ್ಷತೆಯನ್ನು ಹೆಚ್ಚಿಸಲು ಭಾರತೀಯ ರೈಲ್ವೆಯು ರಸ್ತೆ ಮೇಲ್ಸೇತುವೆ ಹಾಗೂ ರಸ್ತೆ ಕೆಳ ಸೇತುವೆಗಳ ನಿರ್ಮಾಣದ ಮೂಲಕ ಲೆವೆಲ್ ಕ್ರಾಸಿಂಗ್ ಗೇಟ್‌ಗಳನ್ನು ತೆಗೆದುಹಾಕಲು ಆದ್ಯತೆ ನೀಡುತ್ತಿದೆ. ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡುವ ಉದ್ದೇಶದಿಂದ ರಸ್ತೆ ಮೇಲ್ಸೇತುವೆ ಮತ್ತು ಕೆಳಸೇತುವೆ ಯೋಜನೆಗಳನ್ನು ರಾಜ್ಯ ಸರ್ಕಾರದೊಂದಿಗೆ ವೆಚ್ಚ ಹಂಚಿಕೊಳ್ಳುವ ಬದಲು, ಸಂಪೂರ್ಣ ವೆಚ್ಚವನ್ನು ರೈಲ್ವೆ ಇಲಾಖೆಯಿಂದಲೇ ಭರಿಸಿ ಕೈಗೆತ್ತಿಕೊಂಡಿದೆ ಎಂದು ಅವರು ಹೇಳಿದರು.

ಕಾಲಮಿತಿಯೊಳಗೆ ರಸ್ತೆ ಕೆಳಸೇತುವೆ ಕಾಮಗಾರಿ

ಕೇಂದ್ರ ಕಾರ್ಮಿಕ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಕಾಲಮಿತಿಯೊಳಗೆ ರಸ್ತೆ ಕೆಳಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸ್ಥಳೀಯರ ಬಹುಕಾಲದ ಬೇಡಿಕೆಯನ್ನು ಈಡೇರಿಸಲಾಗಿದೆ. ಈ ರಸ್ತೆ ಕೆಳಸೇತುವೆಯು ಸುರಕ್ಷತೆಯನ್ನು ಹೆಚ್ಚಿಸುವುದರೊಂದಿಗೆ, ಪ್ರಯಾಣದ ಸಮಯವನ್ನು ಕಡಿಮೆ ಮಾಡಿ, ಸಾವಿರಾರು ಪ್ರಯಾಣಿಕರಿಗೆ ಉತ್ತಮ ಸಂಪರ್ಕವನ್ನು ಒದಗಿಸಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಟಿ.ಎನ್. ಜವರಾಯಿ ಗೌಡ ಮತ್ತಿತರರು ಉಪಸ್ಥಿತರಿದ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಆ.3ರಿಂದ ಬೆಂಗಳೂರು ಇಂಡಿಯಾ ನ್ಯಾನೋ ಸಮಾವೇಶ: ಪ್ರಿಯಾಂಕ್ ಖರ್ಗೆ
ಸುಪ್ರೀಂ ಕೋರ್ಟ್‌ ತೀರ್ಪಿನ ವಿರುದ್ಧವಾಗಿ ನಕ್ಷೆಯನ್ನೇ ಬದಲಿಸಿದ ಬಿಡಿಎ