ಕರ್ನಾಟಕದ ದೇವನಹಳ್ಳಿ ಬಳಿ ಫಾಕ್ಸ್‌ಕಾನ್ ಐಫೋನ್ ಘಟಕ ಕೇವಲ 8 ತಿಂಗಳಲ್ಲಿ 30 ಸಾವಿರ ನೌಕರರ ನೇಮಿಸಿಕೊಂಡಿದೆ. ಇದು ರಾಜ್ಯದ ಕಾಂಗ್ರೆಸ್ ಸರ್ಕಾರದ ಶ್ರಮದ ಫಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೊಗಳಿದ್ದಾರೆ. ಆದರೆ ಇದು ಮೋದಿ ಸರ್ಕಾರದ ಮೇಕ್ ಇನ್ ಇಂಡಿಯಾ ಶ್ರಮದ ಫಲ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿರುಗೇಟು ನೀಡಿದ್ದಾರೆ.
ಕರ್ನಾಟಕ ಫಾಕ್ಸ್‌ಕಾನ್
ಉದ್ಯೋಗ ಸೃಷ್ಟಿ ‘ಕೈ’ಶ್ರಮದ ಫಲ: ರಾಗಾನವದೆಹಲಿ: ಉದ್ಯೋಗ ಸೃಷ್ಟಿ, ಸಮಾನ ಅವಕಾಶದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಹೊಸ ಪರಿವರ್ತನೆ ತಂದಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ, ಕಾಂಗ್ರೆಸ್ ನೇತಾರ ರಾಹುಲ್ ಗಾಂಧೀ ಅತೀವ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕರ್ನಾಟಕದ ಸಾಧನೆ ಇತರೆ ರಾಜ್ಯಗಳಿಗೆ ಮಾದರಿ ಎಂದು ಬಣ್ಣಿಸಿದ್ದಾರೆ.
‘ಫಾಕ್ಸ್‌ಕಾನ್ ಘಟಕದಲ್ಲಿ ಕೇವಲ 8 ತಿಂಗಳಲ್ಲಿ 30000 ಸಿಬ್ಬಂದಿ ನೇಮಕವಾಗಿದೆ. ಇದರಲ್ಲಿ ಬಹುತೇಕ ಮಹಿಳೆಯರು. ಈ ವೇಗ ಮತ್ತು ಗಾತ್ರದಲ್ಲಿ ಉತ್ಪಾದನೆಯ ಇಂಥದ್ದೊಂದು ವಾತಾವರಣ ಸೃಷ್ಟಿಯ ಮೂಲಕ ಕರ್ನಾಟಕ ಇತರರಿಗೆ ಮಾದರಿಯಾಗಿ ಹೊಮ್ಮಿದೆ. ಸಮಾನ ಅವಕಾಶ ಮತ್ತು ಗೌರವದ ಇಂಥ ಉದ್ಯೋಗ ಸೃಷ್ಟಿಯ ಭಾರತವನ್ನೇ ನಾವೀಗ ಸ್ಥಾಪಿಸಬೇಕಾಗಿದೆ ಎಂದು ಇದಕ್ಕೆ ಅವಕಾಶ ಕಲ್ಪಿಸಿದ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಹೊಗಳಿದ್ದಾರೆ.
ಉದ್ಯೋಗ ಸೃಷ್ಟಿ ಮೋದಿ
ಶ್ರಮದ ಫಲ: ವೈಷ್ಣವ್
ಟ್ವೀಟ್ ಮಾಡಿರುವ ವೈಷ್ಣವ್,‘ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಮೆಚ್ಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ನೀವು ಗಮನಿಸಿದಂತೆ ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಫಲವಾಗಿ ನಾವೀಗ ಉತ್ಪಾದನೆ ಆಧರಿತ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದ್ದೇವೆ’ ಎಂದು ಹೇಳಿದ್ದಾರೆ.ಫಾಕ್ಸ್‌ಕಾನ್ ಘಟಕ:
ಫಾಕ್ಸ್‌ಕಾನ್ ಈ ಘಟಕಕ್ಕೆ 20000 ಕೋಟಿ ರು. ಹೂಡಿಕೆ ಮಾಡುತ್ತಿದ್ದು, ಇದು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿದ ಬಳಿಕ ಉದ್ಯೋಗ ಸೃಷ್ಟಿ ಮತ್ತು ಉತ್ಪಾದನೆಯಲ್ಲಿ ಭಾರತದಲ್ಲಿನ ತೈವಾನ್ ಮೂಲದ ಕಂಪನಿಯ ಅತಿದೊಡ್ಡ ಘಟಕವಾಗಿ ಹೊರಹೊಮ್ಮಲಿದೆ.