ಕನ್ನಡಪ್ರಭ ವಾರ್ತೆ ಮಾಲೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲದೇ ಬೇರೆ ಯಾರೇ ಮುಖ್ಯಂತ್ರಿಯಾಗಿದ್ದರೂ ಐದು ಗ್ಯಾರಂಟಿಯನ್ನು ಜಾರಿಗೆ ತರಲು ಸಾಧ್ಯವಾಗುತ್ತಿರಲಿಲ್ಲ. ನುಡಿದಂತೆ ನಡೆದಿರುವ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಸುವುದಿಲ್ಲ ಎಂದ ಜಿಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಭರವಸೆ ನೀಡಿದರು.ಪಟ್ಟಣದ ಮಾರುತಿ ಬಡಾವಣೆಯ ಕಾಂಗ್ರೆಸ್ ಕಚೇರಿಯ ಆವರಣದಲ್ಲಿ ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮಾದರಿ ರಾಜ್ಯವಾಗಲಿದೆಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಲಾಗುವುದು. ಚುನಾವಣಾ ಸಮಯದಲ್ಲಿ ಜಾತಿ ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡಿ ಮತ ಕೇಳಲು ಬರುವ ರಾಜಕಾರಣಿಗಳನ್ನು ನಂಬಬೇಡಿ. ಚುನಾವಣಾ ಸಮಯದಲ್ಲಿ ಹಣ, ಜಾತಿ, ಜನಾಂಗ, ಧರ್ಮದ ಮೂಲಕ ರಾಜಕಾರಣ ಮಾಡುವ ಪಕ್ಷಗಳು ಮತ್ತು ವ್ಯಕ್ತಿಗಳನ್ನು ದೂರ ವಿಡಿ ಎಂದರು.
ನಮಗೆ ರೈತರು, ಕಾರ್ಮಿಕರು, ಸಾಮಾನ್ಯ ಜನರ ಮೇಲೆ ದೌರ್ಜನ್ಯ ಮಾಡುವ ರಾಜಕಾರಣಿಗಳನ್ನು ನಮಗೆ ಬೇಕಿಲ್ಲ. ಈ ಬಾರಿ ಪಕ್ಷವು ಸಜ್ಜನಿಕೆಯ ಉತ್ತಮ ಅಭ್ಯರ್ಥಿಯನ್ನು ಈ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಲಿದೆ. ಅವರನ್ನು ಗೆಲ್ಲಿಸುವ ಶಕ್ತಿ ಜನತೆ ನೀವು ನೀಡಬೇಕು ಎಂದರು.ಕ್ಷೇತ್ರದಲ್ಲಿ ನಾಟಿ ಶಾಸಕನಿಮ್ಮ ಶಾಸಕ ಸಾಮಾನ್ಯ ಶಾಸಕನಲ್ಲ.ಅವರು ನಾಟಿ ಶಾಸಕರಾಗಿದ್ದು, ಸರ್ಕಾರದೊಂದಿಗೆ ಅವರ ಹಠ ಕ್ಷೇತ್ರದ ಅಭಿವೃದ್ಧಿಗಾಗಿ ಮಾತ್ರ. ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಯೋಜನೆ ಅಡಿ ೮೦ ಕೋಟಿ ರೂಗಳನ್ನು ಮಂಜೂರು ಮಾಡಲಾಗಿದೆ ಮಾಲೂರು ಪಟ್ಟಣಕ್ಕೆ ೧೨ ಕೋಟಿ ಕೆರೆ ಅಭಿವೃದ್ಧಿ, ಬಸ್ ನಿಲ್ದಾಣದ ಅಭಿವೃದ್ಧಿಗೆ ೨೦ ಕೋಟಿ ರೂಗಳು ಜಿಲ್ಲೆಯಲ್ಲಿ ನೂತನವಾಗಿ ೬ ಇಂದಿರಾ ಕ್ಯಾಂಟೀನ್ ಗಳನ್ನು ಪ್ರಾರಂಭಿಸಲಾಗುವುದು ಎಂದರು.
ಶಾಸಕರ ಕೈ ಬಲಪಡಿಸಿಇಲ್ಲಿನ ಶಾಸಕರು ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಇಲ್ಲಿನ ಶಾಸಕರು ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುವ ವ್ಯಕ್ತಿ ನೀವೇ ಬೆಳಸಿದ ವ್ಯಕ್ತಿ. ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ವ್ಯಕ್ತಿಯಾಗುವ ಎಲ್ಲಾ ಗುಣಗಳು ಅವರಲ್ಲಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರ ಕೈ ಬಲಪಡಿಸಬೇಕು ಎಂದರು.
ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕ ಕೆ.ವೈ.ನಂಜೇಗೌಡ ಮಾಜಿ ಸಚಿವೆ ಉಮಾಶ್ರೀ, ನಟಿ ಭಾವನ, ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಾಸಂತಪ್ಪ, ಜಿಲ್ಲಾ ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಿ, ತಹಶೀಲ್ದಾರ್ ಕೆ ರಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರತ್ನಮ್ಮ ನಂಜೇಗೌಡ, ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ವೀಣಾ, ಪುರಸಭಾ ಮುಖ್ಯಾಧಿಕಾರಿ ಪ್ರದೀಪ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮೀನಾರಾಯಣ್, ಕೆಪಿಸಿಸಿ ಸದಸ್ಯರಾದ ಅಂಜನಿ ಸೋಮಣ,್ಣ ಪ್ರದೀಪ್‌ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಜಿ.ಮಧುಸೂದನ್, ಮತ್ತಿತರರು ಹಾಜರಿದ್ದರು.
ಬಾಕ್ಸ್...................................ಬಿರಿಯಾನಿ, ಸೀರೆಗೆ ನೂಕುನುಗ್ಗಲುಇಂದು ಸರ್ಕಾರಿ ಪ್ರಯೋಜಿತ ಕಾರ್ಯಕ್ರಮವಾಗಿದ್ದರೂ ಶಾಸಕ ನಂಜೇಗೌಡರು ಸೀರೆ ವಿತರಣೆ ಹಾಗೂ ಬಿರಿಯಾನಿ ಊಟ ಏರ್ಪಡಿಸಿದ್ದರು. ಕಾರ್ಯಕ್ರಮ ಕಾರ್ಯಕ್ರಮ ಮುಗಿಯುತ್ತಿದ್ದ ಹಾಗೆ ಊಟದ ಕಡೆ ನುಗಿದ್ದ ಮಹಿಳೆಯರು ಬಿರಿಯಾನಿ ಪಡೆಯಲು ಹರಸಾಹಸ ಪಟ್ಟರು. ಜತೆಯಲ್ಲಿ ಸೀರೆ ಸಹ ಹಂಚಲು ಕಾರ್ಯಕರ್ತರು ಪ್ರಾರಂಭಿಸಿದಾಗ ಸಮಾರಂಭದಲ್ಲಿ ಭಾಗವಹಿಸಿದ್ದ ೮ ಸಾವಿರಕ್ಕೂ ಹೆಚ್ಚು ಮಹಿಳೆಯರು ಮುತ್ತಿಗೆ ಹಾಕಿದರು. ಸೀರೆ ಹಾಗೂ ಬಿರಿಯಾನಿ ಖಾಲಿಯಾದ ಹಿನ್ನೆಲೆಯಲ್ಲಿ ಮಹಿಳೆಯರು ರೊಚ್ಚಿಗೆದ್ದರು. ಕಾರ್ಯಕ್ರಮಕ್ಕೆ ಕರೆತಂದ ಮುಖಂಡರಿಗೆ ಹಿಡಿ ಶಾಪ ಹಾಕಿದರು. ಬಳಿಕ ಸೀರೆಗಳನ್ನು ನಿಮ್ಮ ಮನೆಗೆ ತಲುಪಿಸುವುದಾಗಿ ಮೈಕ್‌ನಲ್ಲಿ ಅನೌನ್ಸ್ ಮಾಡಿ ಸಾಮಾಧಾನ ಮಾಡುವ ಪ್ರಯತ್ನ ಮಾಡಲಾಯಿತು.