ಕನ್ನಡಪ್ರಭ ವರದಿಯ ಫಲಶ್ರುತಿ । ಗೋದಾಮಿಗೆ ಆಹಾರ ನಿಗಮದ ಮೇಲಾಧಿಕಾರಿಗಳ ಭೇಟಿ, ಪರಿಶೀಲನೆ
ಕನ್ನಡಪ್ರಭ ವಾರ್ತೆ ದಾಬಸ್ಪೇಟೆಬಡವರಿಗೆ ನೀಡುವ ಅಕ್ಕಿಯನ್ನು ಗೋಡೌನ್‌ನಲ್ಲಿ ಕಳೆದ 2 ವರ್ಷಗಳಿಂದ ಸಂಗ್ರಹಿಸಿ ಇಲಿ, ಹೆಗ್ಗಣ, ಹುಳುಗಳ ಪಾಲಾಗಿಸಿರುವ ಬಗ್ಗೆ ಕನ್ನಡಪ್ರಭ ವರದಿ ಮಾಡಿತ್ತು. ಇದರ ಬೆನ್ನಲ್ಲೆ ಆಹಾರ ಮತ್ತು ನಾಗರಿಕ ಇಲಾಖೆ ಮುಖ್ಯ ಕಾರ್ಯದರ್ಶಿಗಳು ವರದಿ ಕೇಳಿದ್ದು, ಆಹಾರ ನಿಗಮದ ಮೇಲಾಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮಕ್ಕೆ ಮುಂದಾಗಿದ್ದಾರೆ.
ನೆಲಮಂಗಲದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋಡೌನ್‌ನಲ್ಲಿ ಅಕ್ಕಿ ವ್ಯರ್ಥವಾಗುತ್ತಿರುವ ಬಗ್ಗೆ ನ.21 ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ‘ಗೋದಾಮಲ್ಲಿ ಅಕ್ಕಿ ಅನಾಥ’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು. ಈ ಬಗ್ಗೆ ಸಚಿವರ ಗಮನಕ್ಕೆ ಬಂದಿದ್ದು, ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ವರದಿ ಕೇಳಿದ ಬೆನ್ನಲ್ಲೆ ಆಹಾರ ನಿಗಮ ಪ್ರಧಾನ ವ್ಯವಸ್ಥಾಪಕ ಪ್ರಸನ್ನ ಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿ, ಗೋಡೌನ್ ಸ್ಥಿತಿ ಹಾಗೂ ಸಂಗ್ರಹಣೆ ಕುರಿತು ಕಳವಳ ವ್ಯಕ್ತಪಡಿಸಿ ಅಮಾನತು ಮಾಡುವ ಎಚ್ಚರಿಕೆ ನೀಡಿದ್ದಾರೆ.ಅಧಿಕಾರಿಗಳ ಕಳ್ಳಾಟ: ಕೆಎಫ್‌ಸಿಎಸ್‌ಸಿ ಅಧಿಕಾರಿಗಳು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋಡೌನ್‌ನಲ್ಲಿರುವ ಅಕ್ಕಿ ಸಮಾಜ ಕಲ್ಯಾಣ ಇಲಾಖೆ, ಅಕ್ಷರ ದಾಸೋಹ ಇಲಾಖೆಗೆ ಸೇರಿದೆ ಎಂಬ ಸುಳ್ಳು ಮಾಹಿತಿ ನೀಡುವ ಮೂಲಕ ಎಸ್ಕೇಫ್ ಆಗಲು ಪ್ರಯತ್ನಿಸಿ ತನಿಖೆಗೆ ಆಗಮಿಸಿದ್ದ ಅಧಿಕಾರಿಗಳ ಎದುರು ಸಿಕ್ಕಿ ಬಿದ್ದಿದ್ದಾರೆ. ಎಲ್ಲಾ ಇಲಾಖೆ ಅಧಿಕಾರಿಗಳನ್ನು ತನಿಖಾಧಿಕಾರಿಯವರು ಕರೆಸಿದ ಪರಿಣಾಮ ಕೆಎಫ್‌ಸಿಎಸಿ ಅಧಿಕಾರಿಗಳ ಕಳ್ಳಾಟ ಬಯಲಾಗಿದೆ.
ಡಿ.ಎಂ. ರಮೇಶ್, ಗೋಡೌನ್ ಉಸ್ತುವಾರಿ ಶಿವಕುಮಾರ್ ನಿರ್ಲಕ್ಷ್ಯದ ಬಗ್ಗೆ ವರದಿ ನೀಡುವುದಾಗಿ ತಿಳಿಸಿದರು. ಅಕ್ಕಿ ಯಾರಿಗೆ ಸೇರಿದೆ? ಎಂಬುದರ ಬಗ್ಗೆ ಗೋಡೌನ್ ಉಸ್ತುವಾರಿಗಳು ಸರಿಯಾದ ಮಾಹಿತಿ ನೀಡದ ಪರಿಣಾಮ ಅಕ್ಕಿ ಯಾರಿಗೆ ಸೇರಿದ್ದು ಎಂಬುದು ಖಚಿತವಾಗಿಲ್ಲ.ಒತ್ತಾಯ: ಆರೇಳು ಟನ್ ಅಕ್ಕಿ ವ್ಯರ್ಥ ಮಾಡಿರುವ ಗೋಡೌನ್ ಉಸ್ತುವಾರಿ ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮವಾಗದಿದ್ದರೆ ಗೋಡೌನ್ ಎದುರು ಧರಣಿ ನಡೆಸುತ್ತೇವೆ. ಅನ್ನಕ್ಕಾಗಿ ಅಲೆಯುವ ಕಾಲದಲ್ಲಿ ಅಕ್ಕಿ ವ್ಯರ್ಥ ಮಾಡಿದವರನ್ನು ಅಮಾನತು ಮಾಡಿ ಎಂದು ತನಿಖಾಧಿಕಾರಿಗೆ ಒತ್ತಾಯಿಸಿದರು.
----ಪೋಟೋ 6 : ನೆಲಮಂಗಲದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋಡೌನ್‌ಗೆ ತನಿಖಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
---ವರದಿ ಫಲಶ್ರುತಿಪೋಟೋ 7 : ನೆಲಮಂಗಲದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋಡೌನ್‌ನಲ್ಲಿ ಅಕ್ಕಿ ವ್ಯರ್ಥವಾಗುತ್ತಿರುವ ಬಗ್ಗೆ ನ.21 ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ‘ಗೋದಾಮಲ್ಲಿ ಅಕ್ಕಿ ಅನಾಥ’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು.