ಸ್ಟಿಂಗ್‌ ಹಿಂದಿರುವವರು ಗೊತ್ತಾಗಲೇಬೇಕು: ಯತೀಂದ್ರ ಬಿಗಿಪಟ್ಟು

Published : Oct 25, 2026, 05:41 AM IST
Yathindra siddaramaiah

ಸಾರಾಂಶ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ ಎನ್ನಲಾದ ‘ಸ್ಟಿಂಗ್ ಆಪರೇಷನ್’ (ಕುಟುಕು ಕಾರ್ಯಾಚರಣೆ) ಸಂಚಿನ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಲೇ ಬೇಕು ಎಂದು ಸಚಿವ ಡಾ। ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಚಾಮರಾಜನಗರ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆಸಲಾಗಿದೆ ಎನ್ನಲಾದ ‘ಸ್ಟಿಂಗ್ ಆಪರೇಷನ್’ (ಕುಟುಕು ಕಾರ್ಯಾಚರಣೆ) ಸಂಚಿನ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಲೇ ಬೇಕು ಎಂದು ಸಚಿವ ಡಾ। ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಅವರನ್ನು ಬ್ಲ್ಯಾಕ್ ಮೇಲ್​ ಮಾಡಲು ಸ್ಟಿಂಗ್​ ಆಪರೇಷನ್

ಸಿದ್ದರಾಮಯ್ಯ ಅವರನ್ನು ಬ್ಲ್ಯಾಕ್ ಮೇಲ್​ ಮಾಡಲು ಸ್ಟಿಂಗ್​ ಆಪರೇಷನ್ ಮಾಡಿದ್ದು, ಇದರಲ್ಲಿ ಕಾಂಗ್ರೆಸ್​​ನವರ ಕೈವಾಡವಿದೆ. ಪುತ್ತೂರು ಟಿಕೆಟ್‌ಗಾಗಿ ಈ ಸ್ಟಿಂಗ್‌ ನಡೆದಿದ್ದು, ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕಿದೆ ಎಂದು ಶುಕ್ರವಾರವಷ್ಟೇ ಆರೋಪಿಸಿದ್ದ ಯತೀಂದ್ರ, ಶನಿವಾರ ಚಾಮರಾಜನಗರದಲ್ಲಿ ಮಾತನಾಡಿ, ಈ ಸ್ಟಿಂಗ್ ಆಪರೇಷನ್ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಲೇ ಬೇಕು ಎಂದು ಪುನರುಚ್ಚರಿಸಿದರು.

‘2023ರಲ್ಲಿ ಮಾಡಿರುವ ವಿಡಿಯೋ

‘2023ರಲ್ಲಿ ಮಾಡಿರುವ ವಿಡಿಯೋವನ್ನು ಈಗ ಯಾಕೆ ಆಚೆ ಬಿಟ್ಟಿದ್ದಾರೋ ಗೊತ್ತಿಲ್ಲ. ಅಪ್ಪಾಜಿಯವರ ತೇಜೋವಧೆ ಮಾಡಲು ಈ ರೀತಿ ಷಡ್ಯಂತ್ರ ಮಾಡಿದ್ದಾರೆ. ಆ ವಿಡಿಯೋದಲ್ಲಿ ಇಬ್ಬರು ಕಾಣಿಸಿಕೊಂಡಿದ್ದಾರೆ. ಒಬ್ಬಳು ನಮ್ಮ ಪಕ್ಷದ ಕೃಪಾ ಆಳ್ವ ಹಾಗೂ ಮತ್ತೊಬ್ಬ ಖಾಸಗಿ ಸುದ್ದಿಸಂಸ್ಥೆಯ ಮುಖ್ಯಸ್ಥ. ಶುಕ್ರವಾರ ಈ ಬಗ್ಗೆ ಅಪ್ಪನೇ ಮಾತನಾಡಿದ್ದಾರೆ. ಸತ್ಯಾಸತ್ಯತೆ ಹೊರ ಬರಬೇಕು. ಈ ಸ್ಟಿಂಗ್ ಆಪರೇಷನ್ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಲೇ ಬೇಕು. ನಮ್ಮ ಸರ್ಕಾರ ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಈ ಪ್ರಕರಣದ ತನಿಖೆ ನಡೆಸಲಿದೆ ಎಂಬ ವಿಶ್ವಾಸವಿದೆ’ ಎಂದು ಅವರು ತಿಳಿಸಿದರು‌.

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ನಮ್ಮ ತಂದೆಯವರನ್ನು ಭೇಟಿಯಾಗಬೇಕು ಎಂದು ಇಚ್ಛೆ ವ್ಯಕ್ತಪಡಿಸಿದ್ದಾರೆ. ಖಂಡಿತವಾಗಿಯೂ ತಂದೆಯವರು ಭೇಟಿಯಾಗಿ ಮಾತನಾಡುತ್ತಾರೆ. ಆದರೆ, ಆ ಬಗ್ಗೆ ನಾನಿನ್ನು ತಂದೆಯವರನ್ನು ಕೇಳಿಲ್ಲ ಎಂದು ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ವಿಡಿಯೋ ಅಪ್‌ಲೋಡ್‌ಗೆ ಬಳಸಿದ್ದ ಮೊಬೈಲ್‌ಗೆ ನಂಟು - ಸ್ಟಿಂಗ್‌ ಕೇಸಲ್ಲಿ ಮೊದಲ ಬಂಧನ
ರೈತರ ಸಂಕಷ್ಟಕ್ಕೆ ಸ್ಪಂದಿಸದ ರಾಜ್ಯ ಸರ್ಕಾರ: ಬಿವೈವಿ