ಕೋಲಾರ ಜಿಲ್ಲೆಗೆ ಬಿಜೆಪಿ ನೀಡಿದ ಕೊಡುಗೆ ಏನು?

KannadaprabhaNewsNetwork |  
Published : Apr 20, 2024, 01:04 AM ISTUpdated : Apr 20, 2024, 05:40 AM IST
೧೯ಕೆಎಲ್‌ಆರ್-೯ಕೋಲಾರ ತಾಲೂಕಿನ ವೇಮಗಲ್ ಹೋಬಳಿಯ ಸೀತಿಹೊಸೂರು ಮತ್ತು ಕುರಗಲ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಸಭೆಯಲ್ಲಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿದರು. | Kannada Prabha

ಸಾರಾಂಶ

ಬಿಜೆಪಿ ಹಿಂದೂ, ಮುಸ್ಲಿಂ ಸಮುದಾಯಗಳನ್ನು ಎತ್ತಿಕಟ್ಟಿ ಜೈ ಶ್ರೀರಾಮ್ ಅಂತ ದೇಶದ ಜನರನ್ನು ಏಮಾರಿಸಿದ್ದಾರೆ. ಇತ್ತಿಚಿಗೆ ಕೂಡ ರಾಮಮಂದಿರ ಹೆಸರಿನಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ

 ಕೋಲಾರ : ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಜಿಲ್ಲೆಗೆ ಹತ್ತು ತಿಂಗಳ ಅಭಿವೃದ್ಧಿಗೆ ಸಂಬಂಧಸಿದ ದಾಖಲೆಗಳನ್ನು ನೀಡಲು ನಾವು ಸಿದ್ದರಿದ್ದೇವೆ. ಬಿಜೆಪಿಯವರಿಗೆ ಧೈರ್ಯ ಇದ್ದರೆ ಹತ್ತು ವರ್ಷದಿಂದ ಜಿಲ್ಲೆಯ ಅಭಿವೃದ್ಧಿಗೆ ಅವರ ಕೊಡುಗೆ ಏನೆಂಬುದನ್ನು ಬಹಿರಂಗಪಡಿಸಲಿ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಸವಾಲು ಹಾಕಿದರು.

ತಾಲೂಕಿನ ವೇಮಗಲ್ ಹೋಬಳಿಯ ಸೀತಿಹೊಸೂರು ಮತ್ತು ಕುರಗಲ್‌ನಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಹತ್ತು ವರ್ಷದಿಂದ ಬರೀ ಕ್ಲಾಕ್‌ ಟವರ್‌ನಲ್ಲಿನ ಬಣ್ಣ ಬದಲಾಯಿಸಿದ್ದು ಬಿಟ್ಟರೆ ಸಾಮಾನ್ಯ ಜನಕ್ಕೆ ಅನುಕೂಲವಾಗುವ ಒಂದು ಒಂದು ಯೋಜನೆಯನ್ನು ಜಾರಿ ಮಾಡಲಿಲ್ಲ ಎಂದರು.

ರಿಂಗ್‌ರೋಡ್‌, ಮೆಡಿಕಲ್‌ ಕಾಲೇಜ್‌

ಆದರೆ ಕೋಲಾರ ವಿಧಾನಸಭಾ ಕ್ಷೇತ್ರ ರಸ್ತೆಗಳ ಅಭಿವೃದ್ಧಿಗೆ ಕನಿಷ್ಠ ೫೦೦ ಕೋಟಿ ತಂದಿದ್ದೇವೆ, ರಿಂಗ್ ರೋಡ್ ನಿರ್ಮಾಣಕ್ಕೆ ೩೬೦ ಕೋಟಿ ಜೊತೆಗೆ ಎಪಿಎಂಸಿ ಜಾಗ ಗುರುತಿಸಿದ್ದೇವೆ, ಮೆಡಿಕಲ್ ಕಾಲೇಜು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇವುಗಳ ಬಗ್ಗೆ ದಾಖಲೆಗಳು ಬೇಕಿದ್ದರೆ ಕೊಡತ್ತೇವೆ ಬಿಜೆಪಿಯವರ ಕೊಡುಗೆ ಇದ್ದರೆ ಜನರ ಮುಂದೆ ಇಡೀ ಎಂದು ತಿಳಿಸಿದರು.

ಬಿಜೆಪಿ ಹಿಂದೂ, ಮುಸ್ಲಿಂ ಸಮುದಾಯಗಳನ್ನು ಎತ್ತಿಕಟ್ಟಿ ಜೈ ಶ್ರೀರಾಮ್ ಅಂತ ದೇಶದ ಜನರನ್ನು ಏಮಾರಿಸಿದ್ದಾರೆ. ಇತ್ತಿಚಿಗೆ ಕೂಡ ರಾಮಮಂದಿರ ಹೆಸರಿನಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ಶ್ರೀರಾಮ ಕೇವಲ ಬಿಜೆಪಿ ಪಕ್ಷಕ್ಕೆ ಮಾತ್ರ ಸಿಮೀತವಲ್ಲ ನಾವು ಕೂಡ ಹಿಂದೂಗಳೇ ನಮ್ಮಲ್ಲಿ ಕೂಡ ದೇವ ಭಕ್ತಿ ಇದೆ ತೋರಿಕೆಗಾಗಿ ಮಾತ್ರ ಭಕ್ತಿ ಭಾವನೆ ತೋರಿಸಬಾರದು. ಸಮಾಜದ ಎಲ್ಲಾ ಜಾತಿ ಧರ್ಮಗಳನ್ನು ಪ್ರೀತಿಯಿಂದ ನೋಡುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ದೇಶದಲ್ಲಿ ಶಾಂತಿ, ನೆಮ್ಮದಿಗಾಗಿ ಹಸ್ತ ಗುರುತಿಗೆ ವೋಟ್ ಹಾಕುವಂತೆ ಮನವಿ ಮಾಡಿದರು. ಕೇಂದ್ರದಲ್ಲೂ ಗ್ಯಾರಂಟಿ

ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳೊಂದಿಗೆ ಕೇಂದ್ರದಲ್ಲಿ ಕೂಡ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ಮಹಿಳೆಯರ ಅಭಿವೃದ್ಧಿಗೆ ಮಹಾಲಕ್ಷ್ಮಿ ಯೋಜನೆಯಿಂದ ವರ್ಷಕ್ಕೆ ಒಂದು ಲಕ್ಷ, ನಗೇಗಾದಲ್ಲಿ ದಿನಕ್ಕೆ ೪೦೦ ರೂ ಕೂಲಿ, ರೈತರ ಸಾಲ ಮನ್ನಾ , ರೈತರ ಬೆಳೆಗಳಿಗೆ ಬೆಂಬಲ ಬೆಲೆ, ಜಾತಿ ಗಣತಿ ಮಾಡಿಸಿ ಸರ್ಕಾರದ ಯೋಜನೆಗಳನ್ನು ಎಲ್ಲಾ ಸಮುದಾಯಗಳ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದು ನಮ್ಮ ಗುರಿಯಾಗಿದೆ ಎಂದರು.ಸಿಎಂಆರ್‌ ಎಚ್ಚೆತ್ತುಕೊಳ್ಳಲಿ

ಇತ್ತೀಚೆಗೆ ಕೋಲಾರದ ಮಾಜಿ ಸಚಿವರೊಬ್ಬರೂ ಸಭೆಯೊಂದರಲ್ಲಿ ಮಾತನಾಡಿ, ಕೋಲಾರ ಲೋಕಸಭಾ ಕ್ಷೇತ್ರವನ್ನು ಮೀಸಲು ಕ್ಷೇತ್ರದಿಂದ ತೆಗೆದುಹಾಕಿ ಮುಂದೆ ಸಾಮಾನ್ಯ ಕ್ಷೇತ್ರವಾಗಿ ಮಾಡಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ. 

ಅವರ ಆಟಪಾಠಗಳು ನಾಟಕಗಳನ್ನು ಕ್ಷೇತ್ರದ ಜನ ನೋಡಿದ್ದಾರೆ ಜನ ಯಾಮಾರಿ ಎರಡು ಬಾರಿ ಅವರಿಗೆ ಅವಕಾಶ ನೀಡಿದ್ದಾರೆ. ಮುಂದೆ ಇವರ ಆಟ ನಡೆಯಲ್ಲ ಅಂತ ಗೊತ್ತಾಗಿದೆ ಅದಕ್ಕೆ ಸಿಎಂಆರ್ ಶ್ರೀನಾಥ್ ಅವರನ್ನು ಜೊತೆಯಲ್ಲಿ ಇಟ್ಟುಕೊಂಡು ರಾಜಕೀಯವಾಗಿ ಮುಗಿಸಲು ಹೊರಟಿದ್ದಾರೆ. ಶ್ರೀನಾಥ್ ಅವರಿಗೆ ಬುದ್ದಿ ಇದ್ದು ಈಗಲೇ ಎಚ್ಚತ್ತುಕೊಂಡರೆ ಮುಂದೆ ಒಳ್ಳೆಯದಾಗುತ್ತದೆ ಎಂದರು.ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ನಾಗನಾಳ ಸೋಮಣ್ಣ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಮುಖಂಡರಾದ ದಯಾನಂದ್, ಉದಯಶಂಕರ್, ಉರಟ ಅಗ್ರಹಾರ ಚೌಡರೆಡ್ಡಿ, ಮೈಲಾಂಡಹಳ್ಳಿ ಮುರಳಿ, ಮಲೇಷಿಯಾ ರಾಜಕುಮಾರ್, ತಿಪ್ಪೇನಹಳ್ಳಿ ನಾಗೇಶ್ ಇದ್ದರು.

PREV

Recommended Stories

''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ಶೇ.40 ಕಮಿಷನ್‌ ಆರೋಪ : ನ್ಯಾ. ದಾಸ್‌ ವರದಿ ಪರಿಶೀಲನೆಗೆ ಮತ್ತೊಂದು ಸಮಿತಿ