ಸಂಸತ್‌ ಅಧಿವೇಶನಕ್ಕೆ 18ಮಸೂದೆಗಳ ಪಟ್ಟಿ ಬಿಡುಗಡೆ

KannadaprabhaNewsNetwork |  
Published : Nov 30, 2023, 01:15 AM IST
ಅಧಿವೇಶನ | Kannada Prabha

ಸಾರಾಂಶ

ಮುಂಬರುವ ಸಂಸತ್‌ ಅಧಿವೇಶನಕ್ಕೆ ಲೋಕಸಭಾ ಸಚಿವಾಲಯ 18 ಮಸೂದೆಗಳನ್ನು ಪಟ್ಟಿ ಮಾಡಿದ್ದು, ಡಿ.4ರಿಂದ ಆರಂಭವಾಗುವ ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ.

ಮಹಿಳಾ ಮೀಸಲು, ನ್ಯಾಯಸಂಹಿತೆ

ನವದೆಹಲಿ: ಮುಂಬರುವ ಸಂಸತ್‌ ಅಧಿವೇಶನಕ್ಕೆ ಲೋಕಸಭಾ ಸಚಿವಾಲಯ 18 ಮಸೂದೆಗಳನ್ನು ಪಟ್ಟಿ ಮಾಡಿದ್ದು, ಡಿ.4ರಿಂದ ಆರಂಭವಾಗುವ ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ. ಮಸೂದೆಗಳ ಪೈಕಿ ಪ್ರಮುಖವಾಗಿ ಮಹಿಳಾ ಮೀಸಲು ಮಸೂದೆಯನ್ನು ಜಮ್ಮು-ಕಾಶ್ಮೀರ ಮತ್ತು ಪಾಂಡಿಚೇರಿಗೂ ವಿಸ್ತರಿಸುವ 2, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೇರಿದಂತೆ ಅಪರಾಧ ಕಾನೂನುಗಳ ಕುರಿತಾದ 3 ಮತ್ತು ಜಮ್ಮು ಕಾಶ್ಮೀರದ ವಿಧಾನಸಭೆಯ ಸಂಖ್ಯಾಬಲವನ್ನು 114ಕ್ಕೆ ಹೆಚ್ಚಳ ಮಾಡಿ ಕಾಶ್ಮೀರಿ ವಲಸಿಗರು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಸ್ಥಳಾಂತರಗೊಂಡವರು ಹಾಗೂ ಬುಡಕಟ್ಟು ಜನಾಂಗದವರಿಗೆ ಮೀಸಲಾತಿ ಕಲ್ಪಿಸುವ ಕುರಿತಂತೆ 4, ಚುನಾವಣಾ ಆಯುಕ್ತರನ್ನು ನೇಮಿಸಲು ಪ್ರಧಾನಮಂತ್ರಿ ನೇತೃತ್ವದಲ್ಲಿ ಸಮಿತಿ ರಚಿಸುವ ಕುರಿತಂತೆ 1, ಹಾಗೆಯೇ ಅಂಚೆ, ಪತ್ರಿಕೆ, ದೆಹಲಿ, ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ವಕೀಲರಿಗೆ ಸಂಬಂಧಿಸಿದ ಮಸೂದೆಗಳು ಅಧಿವೇಶನದಲ್ಲಿ ಮಂಡನೆಯಾಗಲಿವೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಸಮಭಾವದ ಶಿಕ್ಷಣಕ್ಕೆ ಸಾರ್ವಜನಿಕ ಹಾಸ್ಟೆಲ್‌ ಅಗತ್ಯ: ಎಚ್‌. ಆಂಜನೇಯ
6 ಕ್ಷೇತ್ರದ ಚುನಾವಣಾ ಉಸ್ತುವಾರಿ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ