ಮಹಿಳಾ ಸಬಲೀಕರಣ ಮೊದಲು ಮನೆಯಿಂದಲೇ ಆರಂಭವಾಗಲಿ: ಶೈನಿ ಗುಂಟಿ

KannadaprabhaNewsNetwork |  
Published : Apr 07, 2026, 01:30 AM IST
ಚಿತ್ರ 6ಬಿಡಿಆರ್53 | Kannada Prabha

ಸಾರಾಂಶ

ಅಕ್ಕ ಮಹಾದೇವಿ ಸ್ತ್ರೀಯರ ಆಧ್ಯಾತ್ಮ ಸ್ವಾತಂತ್ರ್ಯದ ರೂವಾರಿಯಾಗಿದ್ದಾರೆ ಎಂದು ಶೈನಿ ಪ್ರದೀಪ್ ಗುಂಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್

ಮಹಿಳಾ ಸಬಲೀಕರಣ ಮನೆಯಿಂದಲೇ ಆರಂಭವಾಗಬೇಕು ಎಂದು ಅಕ್ಕಪಡೆಯ ರಾಜ್ಯ ಸಲಹೆಗಾರರಾದ ಶೈನಿ ಪ್ರದೀಪ್ ಗುಂಟಿ ಸಲಹೆ ನೀಡಿದರು.

ನಗರದ ನೌಬಾದ್‌ನ ಜ್ಞಾನಶಿವಯೋಗಾಶ್ರಮದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಪರಸ್ಪರರ ಬೆಳವಣಿಗೆಗೆ ಸಹಕರಿಸಬೇಕು. ಸಾಧನೆಯತ್ತ ಹೆಜ್ಜೆ ಇಡಲು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಅಕ್ಕ ಮಹಾದೇವಿ ಸ್ತ್ರೀಯರ ಆಧ್ಯಾತ್ಮ ಸ್ವಾತಂತ್ರ್ಯದ ರೂವಾರಿಯಾಗಿದ್ದಾರೆ. ಮಾತೆ ಕರುಣಾದೇವಿ ಅವರ ಪ್ರತಿರೂಪ ವಾಗಿದ್ದು, ಮಹಿಳೆಯರ ಏಳಿಗೆಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಅಕ್ಕಪಡೆಯು ರಾಜ್ಯದಲ್ಲಿ ಅಕ್ಕ ಮಹಾದೇವಿ ಅವರ ಕನಸು ಸಾಕಾರಗೊಳಿಸುವ ಹಾಗೂ ಹೆಣ್ಣುಮಕ್ಕಳ ಹಕ್ಕುಗಳನ್ನು ರಕ್ಷಿಸುವ ದಿಸೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಜ್ಞಾನ ಶಿವಯೋಗಾಶ್ರಮದ ಅಧಿಪತಿ ಡಾ.ರಾಜಶೇಖರ ಶಿವಾಚಾರ್ಯರು ಮಾತನಾಡಿ, ವೈರಾಗ್ಯ ನಿಧಿ ಅಕ್ಕಮಹಾದೇವಿ ಅವರು ಆಧ್ಯಾತ್ಮದ ಮೇರು ಪರ್ವತ ಏರಿದ ಶರಣೆ. ರಾಜ್ಯ ಸರ್ಕಾರ ಜಾಗತಿಕ ಮಟ್ಟದಲ್ಲಿ ಅವರ ವಚನ, ತತ್ವಗಳ ಪ್ರಚಾರ ಹಾಗೂ ಪ್ರಸಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಮೂಲಕ ಅವರನ್ನು ಗೌರವಿಸಬೇಕು ಎಂದರು.

ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಮಾತೆ ಕರುಣಾದೇವಿ ಅವರು ನಿರಂತರ ಸಮಾಜೋಧಾರ್ಮಿಕ ಕಾರ್ಯ ಗಳಲ್ಲಿ ನಿರತರಾಗಿದ್ದಾರೆ. ಅವರು ಬೀದರ್ ಜಿಲ್ಲೆಯವರೇ ಆಗಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.

ವೈದ್ಯೆ ಡಾ.ಪ್ರತಿಕ್ಷಾ ಸ್ವಾಮಿ, ಉಪನ್ಯಾಸಕಿ ರೇಣುಕಾದೇವಿ ಮಳ್ಳಿ ಸ್ವಾಮಿ, ಅಕ್ಕಪಡೆಯ ತಂಡದ ನಾಯಕಿ ಸಂಗೀತಾ ಪಾಟೀಲ, ಆರತಿ ಮಹಿಳಾ ಸಮಿತಿಯ ಅಧ್ಯಕ್ಷೆ ಕಾವೇರಿ ಸ್ವಾಮಿ, ಸಖಿ ಕೇಂದ್ರದ ಆಡಳಿತಾಧಿಕಾರಿ ಸಂಗೀತ ಪಾಟೀಲ, ವಿವಾಹ ಪೂರ್ವ ಸಮಾಲೋಚನಾ ಕೇಂದ್ರದ ಚೆನ್ನಾಂಬಿಕಾ, ಜ್ಯೂನಿಯರ್ ಮಿಸ್ ಇಂಡಿಯಾದಲ್ಲಿ ದ್ವಿತೀಯ ಸ್ಥಾನ ಪಡೆದ ಪೂರ್ವಿ ಎಸ್. ಬಿರಾದಾರ, ಪಶು ವೈದ್ಯಕೀಯ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ಮಾಜಿ ಸದಸ್ಯೆ ಶೋಭಾವತಿ ಫುಲಾರೆ, ಪತ್ರಕರ್ತೆ ಸುಷ್ಮಿತಾ ಮೋರೆ ಸೇರಿ ವಿವಿಧ ಕ್ಷೇತ್ರಗಳ ಸಾಧಕಿಯನ್ನು ಸನ್ಮಾನಿಸಲಾಯಿತು.

ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವಯ್ಯಸ್ವಾಮಿ, ಮೇರಾ ಯುವ ಭಾರತ್ನದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ಆಮ್ ಆದ್ಮಿ ಪಕ್ಷದ ಜಿಲಾಧ್ಯಕ್ಷ ಸಿದ್ದಪ್ಪ ಫುಲಾರಿ, ಪ್ರಮುಖ ರಾದ ವರದಯ್ಯ ಸ್ವಾಮಿ, ಓಂಪ್ರಕಾಶ್ ರೊಟ್ಟೆ, ಮಹೇಶ ಪಾಟೀಲ, ಕಂಟೆಪ್ಪ ಭಂಗೂರೆ, ಕುಶಾಲರಾವ್ ಗೌರಶೆಟ್ಟಿ, ಡಾ. ಸುಭಾಷ್ ಪಾಟೀಲ, ಡಾ. ಓಂಕಾರ ಸ್ವಾಮಿ, ಶಿವಕುಮಾರ ಕೊಳಾರ, ಗಂಗಾಧರ ಸ್ವಾಮಿ, ಜಗದೀಶ್ವರ್ ಬಿರಾದಾರ, ಶಿವಶಂಕರ ಬೆಳಮಗಿ, ಅಮರೇಶ ಕಮಠಾಣೆ, ಶ್ರೀಕಾಂತ ಹೊನ್ನಿಕೇರಿ, ಶಾಂತಮ್ಮ ಸ್ವಾಮಿ, ಮಹಾಂತೇಶ್ ಬಿರಾದಾರ ಮತ್ತಿತರರು ಇದ್ದರು.

ಶ್ರೀಶೈಲಂನ ಅಕ್ಕ ಮಹಾದೇವಿ ಚೈತನ್ಯ ಪೀಠ ಹಾಗೂ ಜ್ಞಾನ ಶಿವಯೋಗಾಶ್ರಮದ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

Gulf War Effect: 80% ಖಾಸಗಿ ಆಟೋ ಗ್ಯಾಸ್‌ ಬಂಕ್‌ಗಳು ಬಂದ್‌
ಲೋಕಸಭಾ ಸ್ಥಾನ ಹೆಚ್ಚಳ, ಮಹಿಳಾ ಮೀಸಲಿಗೆ 3 ದಿನ ಅಧಿವೇಶನ