ಎನ್‌ಡಿಎ ಗೆಲುವಿಗೆ ಮಹಿಳೆಯರ ಸಾರಥ್ಯ - ಆಶಾದಾಯಕ ₹10000 ಗ್ಯಾರಂಟಿ ಕಮಾಲ್‌

Published : Nov 15, 2025, 06:56 AM IST
NDA

ಸಾರಾಂಶ

ಬಿಹಾರದಲ್ಲಿ ಎನ್‌ಡಿಎ ಗೆಲುವಿನ ತೇರನ್ನೆಳೆದದ್ದು, ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದ ಭರವಸೆಗಳು. , ಸ್ತ್ರೀ ಕೇಂದ್ರಿತವಾಗಿದ್ದ ಹಲವು ಗ್ಯಾರಟಿಗಳಿಂದಾಗಿ ಮಹಿಳಾ ಮತಗಳು ಭಾರೀ ಪ್ರಮಾಣದಲ್ಲಿ ಎನ್‌ಡಿಎ ಪಾಲಾಗಿವೆ. ಈ ಬಾರಿ ಚಲಾವಣೆಯಾದ ಮತಗಳಲ್ಲಿ ಶೇ.71.78ರಷ್ಟು ಪಾಲು ಮಹಿಳೆಯರದ್ದು ಎಂಬುದು ಗಮನಾರ್ಹ.

ಪಟನಾ: ಬಿಹಾರದಲ್ಲಿ ಎನ್‌ಡಿಎ ಗೆಲುವಿನ ತೇರನ್ನೆಳೆದದ್ದು, ಮೈತ್ರಿಕೂಟದ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದ್ದ ಭರ್ಜರಿ ಭರವಸೆಗಳು. ಅದರಲ್ಲೂ, ಸ್ತ್ರೀ ಕೇಂದ್ರಿತವಾಗಿದ್ದ ಹಲವು ಗ್ಯಾರಟಿಗಳಿಂದಾಗಿ ಮಹಿಳಾ ಮತಗಳು ಭಾರೀ ಪ್ರಮಾಣದಲ್ಲಿ ಎನ್‌ಡಿಎ ಪಾಲಾಗಿವೆ. ಈ ಬಾರಿ ಚಲಾವಣೆಯಾದ ಮತಗಳಲ್ಲಿ ಶೇ.71.78ರಷ್ಟು ಪಾಲು ಮಹಿಳೆಯರದ್ದು ಎಂಬುದು ಗಮನಾರ್ಹ.

ಕೈಹಿಡಿದ ₹10000:

ಬಿಹಾರದಲ್ಲಿ 2022ರಲ್ಲಿ ನಡೆದ ಸಮೀಕ್ಷೆಯ ಪ್ರಕಾರ, ರಾಜ್ಯದ ಶೇ.34ರಷ್ಟು ಮಹಿಳೆಯರು ಮಾಸಿಕ 6000 ರು. ನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಹೀಗಿರುವಾಗ, ಎನ್‌ಡಿಎ ಕೂಟವು ಸ್ತ್ರೀಯರಿಗೆ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್‌ ಯೋಜನೆಯಡಿ ಪ್ರತಿ ತಿಂಗಳು 10000 ರು. ಕೊಡುವುದಾಗಿ ಭರವಸೆ ನೀಡಿತು. ಅದರಂತೆ ಚುನಾವಣೆಗೂ ಮುನ್ನ 25 ಲಕ್ಷ ಮಹಿಳೆಯರಿಗೆ ತಲಾ 10000 ರು. ವರ್ಗ ಕೂಡಾ ಮಾಡಿದ್ದರು. ಇದು ಮನೆ ನಡೆಸುವ ಮಹಿಳೆಯರಿಗೆ ಆಶಾದಾಯಕವಾಗಿ ಕಂಡುಬಂದಿದ್ದು, ಅವರ ಮತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಮದ್ಯ ಬ್ಯಾನ್‌ಗೆ ಈಗಲೂ ಬೆಂಬಲ:

9 ವರ್ಷಗಳ ಹಿಂದೆ ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರ ಮದ್ಯದ ಮೇಲೆ ಹೇರಿದ್ದ ನಿರ್ಬಂದಕ್ಕೆ ಈಗಲೂ ಮಹಿಳೆಯರ ಬೆಂಬಲ ಮುಂದುವರೆದಿದೆ. ರಾಜ್ಯಾದ್ಯಂತ ಮದ್ಯ ನಿಷೇಧದಿಂದಾಗಿ ಮನೆಗಳಲ್ಲಿ ಸ್ತ್ರೀಯರ ಮೇಲಿನ ದೌರ್ಜನ್ಯಗಳು ಕಡಿಮೆಯಾಗಿವೆ. ಜತೆಗೆ, ಅದಕ್ಕೆಂದು ಪುರುಷರು ಖರ್ಚು ಮಾಡುವುದನ್ನು ನಿಲ್ಲಿಸಿರುವುದರಿಂದ ಹಣವೂ ಉಳಿತಾಯವಾಗುತ್ತಿದ್ದು, ಇದರಿಂದ ಜೀವನಮಟ್ಟದಲ್ಲಿ ಸುಧಾರಣೆಯಾಗಿದ್ದು, ಸ್ತ್ರೀಯರ ಸಂತೃಪ್ತಿಗೆ ಕಾರಣವಾಗಿದೆ.

ಎಸ್‌ಐಆರ್‌ನಿಂದ ಜಾಗೃತಿ:

ಚುನಾವಣೆಗೂ ಮುನ್ನ ಬಿಹಾರದಲ್ಲಿ ನಡೆದ ಮತಪಟ್ಟಿ ಪರಿಷ್ಕರಣೆ ವೇಳೆ ಪಟ್ಟಿಯಿಂದ ತೆಗೆದುಹಾಕಲ್ಪಟ್ಟಿದ್ದ ಹೆಸರುಗಳಲ್ಲಿ ಬಹುತೇಕರು ಮಹಿಳೆಯರದ್ದೇ ಇದ್ದವು. ಇದನ್ನು ಬಳಸಿಕೊಂಡು ವಿಪಕ್ಷಗಳು, ‘ಮಹಿಳೆಯರಿಗೆ ಅನ್ಯಾಯವಾಗುತ್ತಿದೆ’ ಎಂದು ಗುಲ್ಲೆಬ್ಬಿಸಿದರೂ, ಇದರಿಂದ ಸ್ತ್ರೀಯರ ಮತದಾನದ ಪ್ರಮಾಣ ಕಡಿಮೆಯಾಗುವ ಬದಲು ಹೆಚ್ಚಾಗಿದೆ. ಮಹಿಳೆಯರು ಈ ಬಾರಿ ಸಕ್ರಿಯರಾಗಿ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಇದರಲ್ಲಿ ಬಹಹುತೇಕರ ಮತ ಎನ್‌ಡಿಎ ಪರವಾಗಿದೆ.

ಜೀವಿಕಾ ದೀದಿಯರ ನೆರವು:

ಈ ಬಾರಿ ಬಿಹಾರದಲ್ಲಿ ಸುಮಾರು 14 ಲಕ್ಷ ಯುವ ಮತದಾರರು ಮೊದಲ ಬಾರಿ ಮತದಾನ ಮಾಡಿದ್ದರು. ಇವರೆಲ್ಲರಲ್ಲಿ ಚುನಾವಣೆ ಹಾಗೂ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗವು ಸ್ವ-ಸಹಾಯ ಗುಂಪುಗಳ ಜೀವಿಕಾ ದೀದಿಯರನ್ನು ಬಳಸಿಕೊಂಡಿತ್ತು. ಇವರು ಮತದಾನದ ಬಗ್ಗೆ ಜನರಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರು ಮತ್ತು ಮೊದಲ ಬಾರಿ ಮತ ಚಲಾಯಿಸುವವರಿಗೆ ಮಾಹಿತಿ ನೀಡಿ, ಜಾಗೃತಿ ಮೂಡಿಸಿದ್ದರು. ಇದರಿಂದಾಗಿ ಮತದಾನದ ಪ್ರಮಾಣ ಹೆಚ್ಚಿದ್ದಲ್ಲದೆ, ಮೊದಲ ಬಾರಿ ಮತಪಟ್ಟಿಯಲ್ಲಿ ಸ್ಥಾನ ಪಡೆದವರೂ ಎನ್‌ಡಿಎ ಪರವಾಗಿ ಮತ ಚಲಾಯಿಸಿದರು.

ಜಂಗಲ್‌ರಾಜ್:

ಹಿಂದಿನ ಆರ್‌ಜೆಡಿಯ ಅವಧಿಯ ಜಂಗಲ್‌ ರಾಜ್‌, ಗೂಂಡಾರಾಜ್‌ ಆಡಳಿತದ ಬಗ್ಗೆ ಬಿಜೆಪಿ ಮತ್ತು ಜೆಡಿಯು ಪ್ರಮುಖವಾಗಿ ಪ್ರಸ್ತಾಪಿಸಿತ್ತು. ಹೀಗಾಗಿ ಆರ್‌ಜೆಡಿ ನಾಯಕರು ಪಕ್ಷದ ಬ್ಯಾನರ್‌ಗಳಲ್ಲಿ ಲಾಲ್‌ಗೆ ಕೊಕ್‌ ನೀಡಿದ್ದರು. ಅಷ್ಟರ ಮಟ್ಟಿಗೆ ಲಾಲು ಕುಟುಂಬದ ಆಡಳಿತವನ್ನು ದೂರವಿಡಲು ಜನತ ಎಬಯಸಿದ್ದರು.

PREV
Read more Articles on

Recommended Stories

ಎನ್‌ಡಿಎ ಕೈಹಿಡಿದ ಒಬಿಸಿ, ದಲಿತ, ಮುಸ್ಲಿಂ ಮತ - ಜಾತಿ ಲೆಕ್ಕಾಚಾರದಲ್ಲಿ ಗೆದ್ದ ಬಿಜೆಪಿ ಮೈತ್ರಿಕೂಟ
ನಿಮೋ ಡಬಲ್‌ ಸೆಂಚುರಿ - ಗೆಲುವಿಗೆ ಪಂಚ ಕಾರಣಗಳು