ಲೈಫ್ ಇನ್ಶೂರೆನ್ಸ್ ಖರೀದಿಸುವಾಗ ಏನೇನು ನೋಡಿಕೊಳ್ಳಬೇಕು : ಈ 10 ವಿಚಾರ ಗಮನದಲ್ಲಿಟ್ಟುಕೊಳ್ಳಿ

KannadaprabhaNewsNetwork | Updated : Mar 20 2025, 05:08 AM IST

ಸಾರಾಂಶ

ಜೀವ ವಿಮೆ ಖರೀದಿಸಲು ಆಲೋಚಿಸುತ್ತಿದ್ದರೆ ಈ ಲೇಖನವನ್ನು ಓದಿ. ಜೀವ ವಿಮೆ ಖರೀದಿಸುವ ಮುನ್ನ ಏನೇನು ನೋಡಿಕೊಳ್ಳಬೇಕು ಎಂಬುದರ ವಿವರ ಇಲ್ಲಿದೆ.

ಲೈಫ್ ಇನ್ಶೂರೆನ್‌ ಅನ್ನುವುದು ಒಂದು ರೀತಿಯಲ್ಲಿ ಕುಟುಂಬದವರಿಗೆ ಏನೂ ತೊಂದರೆ ಉಂಟಾಗದಂತೆ ನೋಡಿಕೊಳ್ಳುವ ವಿಧಾನವೂ ಹೌದು. ಇನ್ನೊಂದು ರೀತಿಯಲ್ಲಿ ನೋಡುವುದಾದರೆ ಉಳಿತಾಯ ಸೂತ್ರವೂ ಹೌದು. ಬಹಳಷ್ಟು ಮಂದಿ ಲೈಫ್ ಇನ್ಶೂರೆನ್ಸ್ ಖರೀದಿಸಲು ಆಲೋಚಿಸುತ್ತಿದ್ದರೂ ಅವರಿಗೆ ಸರಿಯಾದ ಸಲಹೆ, ಸೂಚನೆ ಸಿಕ್ಕಿರುವುದಿಲ್ಲ. ಅಂಥವರಿಗೆಂದೇ ಹೆಚ್‌ಡಿಎಫ್‌ಸಿ ಲೈಫ್ ಸಂಸ್ಥೆಯ ಚೀಫ್ ಮಾರ್ಕೆಟಿಂಗ್ ಆಫೀಸರ್ ಮತ್ತು ಸ್ಟ್ರಾಟೆಜಿ, ಡಿಸ್ಟ್ರಿಬ್ಯೂಷನ್, ಪ್ಲಾನಿಂಗ್, ಇ-ಕಾಮರ್ಸ್ ವಿಭಾಗದ ಗ್ರೂಪ್ ಹೆಡ್ ವಿಶಾಲ್ ಸುಭರ್‌ವಾಲ್ ಅವರು ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಆ ಕೆಲವು ಸಲಹೆಗಳು ಇಲ್ಲಿವೆ-

1. ಪ್ರತಿಯೊಬ್ಬರಿಗೂ ಅವರದೇ ಆದ ಹ್ಯೂಮನ್ ಲೈಫ್ ವ್ಯಾಲ್ಯೂ (ಹೆಚ್ ಎಲ್ ವಿ) ಇರುತ್ತದೆ. ಅದನ್ನು ಲೆಕ್ಕಾಚಾರದ ಮೂಲಕ ತಿಳಿಯಬಹುದು. ಹಾಗಾಗಿ ನಿಮ್ಮ ಹೆಚ್‌ಎಲ್‌ವಿ ಎಷ್ಟು ಎಂಬುದನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಜೀವ ವಿಮೆಯನ್ನು ಖರೀದಿಸಿ.

2. ನೀವು ಬದುಕಿನ ಯಾವ ಹಂತದಲ್ಲಿದ್ದೀರಿ ಎಂಬುದನ್ನು ಅವಲೋಕಿಸಿ. ಜೊತೆಗೆ ನಿಮ್ಮ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ನೀವು ಹೊಂದಿರುವ ಆರ್ಥಿಕ ಗುರಿ ಇತ್ಯಾದಿಗಳಿಗೆ ಅನುಗುಣವಾಗಿ ಜೀವ ವಿಮೆ ಉತ್ಪನ್ನಗಳನ್ನು ಆಯ್ಕೆ ಮಾಡಿ.

3. ನಿಮ್ಮ ಅಗತ್ಯಗಳಿಗೆ ತಕ್ಕಂತೆ ಪಾಲಿಸಿಯ ಅವಧಿ ಮತ್ತು ಪ್ರೀಮಿಯಂ ಮೊತ್ತವನ್ನು ನಿರ್ಧರಿಸಿ.

4. ಅತ್ಯಂತ ಕಡಿಮೆ ಬೆಲೆಯ ಯೋಜನೆಗೆ ಮಾರು ಹೋಗದಿರಿ. ಯಾಕೆಂದರೆ ಆ ಯೋಜನೆ ನಿಮಗೆ ಸೂಕ್ತ ಆಗಿರಲಿಕ್ಕಿಲ್ಲ ಎಂಬುದನ್ನು ಗಮನದಲ್ಲಿಡಿ.

5. ಪಾಲಿಸಿಯ ನಿಯಮಗಳನ್ನು ಎಚ್ಚರಿಕೆಯಿಂದ ಓದಿ. ಷರತ್ತುಗಳನ್ನು ಹುಷಾರಾಗಿ ಪರಿಶೀಲಿಸಿ.

6. ಉತ್ತಮ ಪ್ರಯೋಜನ ಮತ್ತು ರಿಸ್ಕ್ ಕವರ್ ಒದಗಿಸುವ ಆಡ್- ಆನ್ ರೈಡರ್‌ ಗಳನ್ನು ಕೂಡ ಖರೀದಿಸಿ.

7. ಅರ್ಜಿ ಫಾರ್ಮ್ ಅನ್ನು ಸರಿಯಾದ ಮಾಹಿತಿ ನೀಡಿ ಭರ್ತಿ ಮಾಡಿ. ಪೂರ್ಣ ವಿವರಗಳನ್ನು ಸಲ್ಲಿಸಿ.

8. ನಿಮ್ಮ ಪಾಲಿಸಿಗೆ ನಾಮಿನಿ ಹೆಸರಿಸುವುದನ್ನು ಮರೆಯದಿರಿ. ಆ ನಾಮಿನಿ ಕೂಡ ಅದರ ಬಗ್ಗೆ ತಿಳಿದಿರುವಂತೆ ನೋಡಿಕೊಳ್ಳಿ.

9. ಪಾಲಿಸಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಇ-ವಿಮೆ ಖಾತೆಯಲ್ಲಿ (ಇಐಎ) ಸೇವ್ ಮಾಡಿ.

10. ಪಾಲಿಸಿಗಳು 30 ದಿನಗಳ ಫ್ರೀಲುಕ್ ಆಫರ್‌ನೊಂದಿಗೆ ಬರುತ್ತವೆ, ಆ ಕಡೆಗೂ ಗಮನ ಇರಲಿ.

Share this article